Advertisement

“ಅಪ್ಪೆ ಟೀಚರ್‌’ತುಳು ಸಿನೆಮಾ ವಿಶ್ವದ ಎಲ್ಲ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆ

12:33 PM Apr 03, 2019 | Vishnu Das |

ಉಡುಪಿ: ಸ್ವಯಂಪ್ರಭ ಎಂಟರ್‌ಟೈನ್‌ಮೆಂಟ್‌ ಆ್ಯಂಡ್‌ ಪ್ರೊಡಕ್ಷನ್‌ ಬ್ಯಾನರ್‌ ನಿರ್ಮಿಸಿದ್ದ, ಕಿಶೋರ್‌ ಮೂಡುಬಿದಿರೆ ನಿರ್ದೇಶನದ, “ಅಪ್ಪೆ ಟೀಚರ್‌’ ತುಳು ಚಲನಚಿತ್ರ ಇದೀಗ ಮತ್ತೂಂದು ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ. ತುಳು ಚಿತ್ರರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶ್ವದ ಯಾವುದೇ ದೇಶದಲ್ಲಿ (ಭಾರತ ಹೊರತುಪಡಿಸಿ) ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಅಪ್ಪೆ ಟೀಚರ್‌ ಸಿನೆಮಾ ವೀಕ್ಷಿಸಬಹುದು.
ಹಿಂದಿನ ದಿನಗಳಲ್ಲಿ ಹೊರದೇಶದಲ್ಲಿ ತುಳು ಚಿತ್ರ ಬಿಡುಗಡೆ ಮಾಡಲು ತುಂಬ ಕಷ್ಟಕರ. ಅಲ್ಲದೆ ಯಾವುದೇ ಸ್ಟ್ರೀಮಿಂಗ್‌ ಲಿಂಕ್‌ಗಳು ತುಳು ಚಿತ್ರ ಬಿತ್ತರಿಸಲು ಅವಕಾಶ ನೀಡುತ್ತಿರಲಿಲ್ಲ, ಆದರೆ ಅಪ್ಪೆ ಟೀಚರ್‌ ಚಿತ್ರ ತಂಡವು ತಮ್ಮ ಸಿನೆಮಾ ಊರಿನ ಅಥವಾ ರಾಜ್ಯದ ಜನರಿಗೆ ಮಾತ್ರ ಸೀಮಿತವಾಗಿರದೆ, ಹೊರದೇಶದ ತುಳು ಸಿನಿ ರಸಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಬೇಕೆನ್ನುವ ಗುರಿಯೊಂದಿಗೆ ಈ ಹೊಚ್ಚ ಹೊಸ ಪ್ರಯತ್ನ ಮಾಡಲು ಸಿದ್ಧಗೊಂಡಿದೆ.

Advertisement

ತಂಡವು ತಮ್ಮದೇ ಆದ ಆನ್‌ಲೈನ್‌ ಸ್ಟ್ರೀಮಿಂಗ್‌ ಲಿಂಕ್‌ ನಿರ್ಮಿಸಿ, ಒಟ್ಟು 194 ದೇಶಗಳಲ್ಲಿ ಏಕಕಾಲದಲ್ಲಿ ಈ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹೊರದೇಶದ ವೀಕ್ಷಕರು ಮೊಬೈಲ್‌ ಅಥವಾ ಕಂಪ್ಯೂಟರ್‌ಗಳಲ್ಲಿ ಗೂಗಲ್‌ ಲಿಂಕ್‌: pep.app ಮೂಲಕ ಇರುವಲ್ಲಿಯೇ ಸಿನೆಮಾ ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ಬೇರೆ ತುಳು ಚಿತ್ರಗಳಿಗೂ ಈ ಪ್ರಯತ್ನ ದಾರಿದೀಪವಾಗಲಿದೆ ಎಂದು ಚಿತ್ರ ನಿರ್ಮಾಪಕ ಕೆ. ರತ್ನಾಕರ್‌ ಕಾಮತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next