Advertisement
24ಕ್ಕೂ ಹೆಚ್ಚು ಆ್ಯಪ್‌ಗ್ಳ ಮೂಲಕ ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ಮಂದಿಗೆ 5,000 ರೂ.ಗಳಿಂದ 50 ಸಾವಿರ ರೂ.ಗಳವರೆಗೆ ಒಟ್ಟಾರೆ 300 ಕೋಟಿ ರೂ. ಸಾಲ ನೀಡಿರುವುದು ಬೆಳಕಿಗೆ ಬಂದಿದೆ. ಹಣದ ಮೂಲ ಮತ್ತು ಯಾರ ಖಾತೆಗೆ ಸಾಲ ಮರುಪಾವತಿ ಮತ್ತು ಬಡ್ಡಿಯ ಮೊತ್ತ ಜಮೆ ಯಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ ಬೆಂಗಳೂರಿನ ಐಸಿಐಸಿಐ ಬ್ಯಾಂಕ್ ಮತ್ತು ಆರ್‌ಬಿಎಲ್ ಬ್ಯಾಂಕ್‌ನಲ್ಲಿ 48 ಲಕ್ಷ ರೂ. ಮತ್ತು 1.96 ಕೋಟಿ ರೂ.ಗಳಿರುವ ಎರಡು ಖಾತೆಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.
ಕ್ಸಿಯಾ ಯಾ ಮೌ (38) ಮತ್ತು ಯುವಾನ್ ಲನ್ (28) ಎಂಬಿಬ್ಬರು ಚೀನೀ ಪ್ರಜೆಗಳು ಸೆರೆಸಿಕ್ಕಿದ್ದು, ಮತ್ತಿಬ್ಬರು ಚೀನೀಯ ಸಿಂಗಾಪುರಕ್ಕೆ ಪರಾರಿಯಾಗಿದ್ದಾನೆ. ಪ್ರಕರಣದಲ್ಲಿ ರಾಜ್ಯದ ಎಸ್. ಪ್ರಮೋದಾ ಮತ್ತು ಸಿ.ಆರ್. ಪವನ್ ಎಂಬವರನ್ನೂ ಬಂಧಿಸಲಾಗಿದೆ. ಇವರನ್ನು ಚೆನ್ನೈಯಲ್ಲಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇವರಿಬ್ಬರನ್ನು ಸಾಲ ನೀಡುವ ಕಂಪೆನಿಗಳ ನಿರ್ದೇಶಕರು ಎಂದು ಹೆಸರಿಸಲಾಗಿದ್ದು, ಪ್ರತೀ ತಿಂಗಳು ವೇತನದ ರೂಪದಲ್ಲಿ ಇವರಿಗೆ 20 ಸಾವಿರ ರೂ. ಪಾವತಿಸಲಾಗುತ್ತಿತ್ತು. ಆದರೆ ಕಂಪೆನಿಗಳ ಹಣಕಾಸು ವ್ಯವಹಾರದ ಸಂಪೂರ್ಣ ಹೊಣೆಯನ್ನು ಚೀನೀಯರು ಹೊತ್ತಿದ್ದರು ಎಂದು ಸೆಂಟ್ರಲ್ ಕ್ರೈಂ ಬ್ರಾಂಚ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 20 ದಿನಗಳಿಂದ ಸಿಸಿಬಿ ತಂಡ ಈ ಜಾಲದ ಮೇಲೆ ಬಲೆ ಬೀಸಿತ್ತು. ಆ್ಯಪ್ ಸಾಲ ಪ್ರಕರಣದಲ್ಲಿ ಈವರೆಗೆ ದೇಶದ ವಿವಿಧ ಭಾಗಗಳಲ್ಲಿ ಐವರು ಚೀನೀಯರನ್ನು ಬಂಧಿಸಲಾಗಿದೆ. ತೆಲಂಗಾಣದಲ್ಲಿ ಮತ್ತೂಬ್ಬನ ಆತ್ಮಹತ್ಯೆ
ಆನ್‌ಲೈನ್ ಆ್ಯಪ್‌ನಲ್ಲಿ ಸಾಲ ಪಡೆದು ಮರುಪಾವತಿ ಮಾಡದೇ ಇದ್ದ ತೆಲಂಗಾಣದ ಮತ್ತೂಬ್ಬ ಯುವಕ ಆತ್ಮಹತ್ಯೆಗೆ ಶರಣಾಗಿ ದ್ದಾನೆ. 36 ವರ್ಷದ ಜಿ. ಚಂದ್ರಮೋಹನ್ ಗುಂಡ್ಲಪೋಚಂಪಳ್ಳಿಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿ ದ್ದಾರೆ. ಈ ಮೂಲಕ ತೆಲಂಗಾಣದಲ್ಲಿ ಆ್ಯಪ್ ಸಾಲದ ಜಾಲ ದಲ್ಲಿ ಸಿಲುಕಿ ಪ್ರಾಣ ತೆತ್ತವರ ಸಂಖ್ಯೆ 5ಕ್ಕೇರಿದಂತಾಗಿದೆ. ಚಂದ್ರಮೋಹನ್ ಆ್ಯಪ್ ಮೂಲಕ 1 ಲಕ್ಷ ರೂ.ವರೆಗೆ ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡಿ ದ್ದರೂ ಹೆಚ್ಚುವರಿ ಶುಲ್ಕ ಪಾವತಿಸಿಲ್ಲ ಎಂದು ಹಿಂಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.