ಹೊಸದಿಲ್ಲಿ: ಸುಪ್ರೀಂಕೋರ್ಟ್ ನಲ್ಲಿ ನಡೆಯುವ ಪ್ರಕರಣ ವಿಚಾರಣೆಯನ್ನು ನೇರವಾಗಿ ವೀಕ್ಷಿಸಲು ಆ್ಯಂಡ್ರಾಯ್ಡ ಆವೃತ್ತಿಯ ಆ್ಯಪ್ ಅನ್ನು ಬುಧವಾರ ಅನಾವರಣ ಮಾಡಲಾಗಿದೆ.
Advertisement
ಇದರಿಂದ ಕೇಂದ್ರ ಸರಕಾರದ ವಿವಿಧ ಸಚಿ ವಾಲಯಗಳಲ್ಲಿ ಇರುವ ಕಾನೂನು ಅಧಿಕಾರಿಗಳಿಗೆ ಮತ್ತು ಪ್ರಮುಖರಿಗೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ವಿಚಾರಣೆಯನ್ನು ನೇರವಾಗಿ ವೀಕ್ಷಿಸಲು ಅವಕಾಶ ಲಭ್ಯವಾಗಲಿದೆ.
ಮುಖ್ಯ ನ್ಯಾಯ ಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಗೂಗಲ್ ಸ್ಟೋರ್‌ನಿಂದ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆ್ಯಪಲ್ ಬಳಕೆ ದಾರರಿಗೆ ಶೀಘ್ರವೇ ಹೊಸ ಆ್ಯಪ್ ಶೀಘ್ರವೇ ಲಭ್ಯವಾಗಲಿದೆ ಎಂದರು.