Advertisement
ತತ್‌ಕ್ಷಣ ಮಾಹಿತಿ ರವಾನೆಬೇರೆ ದೇಶ, ಬೇರೆ ರಾಜ್ಯಗಳಿಂದ ವಿಮಾನ/ರೈಲು/ ರಸ್ತೆ ಮಾರ್ಗದ ಮೂಲಕ ಬರು ವವರು ಸಾಮಾನ್ಯವಾಗಿ ಯಾತ್ರಿ ಆ್ಯಪ್/ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ ಆಯಾ ಜಿಲ್ಲೆಗಳ ಅನುಮತಿ ಪಡೆದು ಬರುತ್ತಾರೆ. ಆದರೆ, ಅವರ ಪ್ರಯಾಣದ ಕುರಿತ ಪೂರ್ಣ ಮಾಹಿತಿ ಸ್ಥಳೀಯ ಅಧಿಕಾರಿಗಳಿಗೆ ಲಭ್ಯ ವಾಗುತ್ತಿರಲಿಲ್ಲ. ಗಡಿ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಂದಲೇ ಹೆಚ್ಚಿನ ವಿವರಗಳನ್ನು ಪಡೆಯಬೇಕಿತ್ತು. ಈ ವೇಳೆ ಮಾಹಿತಿ ತಪ್ಪಿ ಹೋಗುವ ಸಾಧ್ಯತೆಯೂ ಇತ್ತು. ಆದರೆ ಈಗ ಪೋರ್ಟಲ್‌ನ್ನು ಮೇಲ್ದರ್ಜೆಗೇರಿಸಿ ಅದಕ್ಕೆ ಪೂರಕವಾಗಿ 2 ಆ್ಯಪ್‌ಗ್ಳನ್ನು ಕೂಡ ಅಳವಡಿಸಲಾಗಿದ್ದು ಇದು ವ್ಯಕ್ತಿಯೋರ್ವರ ಮಾಹಿತಿಯನ್ನು ಶೀಘ್ರ ತಿಳಿದುಕೊಂಡು ಕಾರ್ಯ ಪ್ರವೃತ್ತವಾಗಲು ಅಧಿಕಾರಿಗಳಿಗೆ ನೆರವಾಗುತ್ತದೆ.
ಜಿಲ್ಲೆಯ ಯಾವುದೇ ಬಿಆರ್‌ಸಿ ಅಥವಾ ಡಿಆರ್‌ಸಿಗಳಿಗೆ ಆಗಮಿಸಿದವರು ಅರ್ಜಿ ಸಲ್ಲಿಸುವ ವೇಳೆ ಪಡೆದುಕೊಂಡಿರುವ ನೋಂದಣಿ ಸಂಖ್ಯೆಯನ್ನು ಆಯಾ ಕೇಂದ್ರ ಗಳಲ್ಲಿರುವ ಅಧಿಕಾರಿ/ಸಿಬಂದಿಗೆ ನೀಡಿದಾಗ ಅವರ ಸಮಗ್ರ ವಿವರಗಳು ಆ್ಯಪ್ ಮೂಲಕ ಲಭ್ಯವಾಗುತ್ತವೆ. ಇದೇ ಮಾಹಿತಿ ಮುಂದೆ ಅವರು ಎಲ್ಲಿಗೆ ತೆರಳಬೇಕೋ ಅಲ್ಲಿನ ನೋಡೆಲ್ ಅಧಿಕಾರಿ ಸಹಿತ ಸಂಬಂಧಿಸಿದ ಎಲ್ಲ ಅಧಿಕಾರಿ, ತಂಡಗಳಿಗೆ ರವಾನೆಯಾಗುತ್ತದೆ. ಅನಂತರ ಕ್ವಾರಂಟೈನ್‌ಗೆ
ವ್ಯವಸ್ಥೆ ನಡೆಯುತ್ತದೆ. ಇದರಿಂದ ನಿಗದಿತ ಸ್ಥಳಕ್ಕೆ ತೆರಳಿದ್ದಾರೆಯೇ ಎಂಬ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಇದು ಪ್ರಯಾಣಿಕರ ಟ್ರ್ಯಾಕಿಂಗ್ ಮಾಡಲು ನೆರವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗರಿಷ್ಠ ಟ್ರ್ಯಾಕಿಂಗ್
ಈ ಹಿಂದೆ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆದು ಆಗಮಿಸಿದರೂ ಅವರ ಟ್ರ್ಯಾಕಿಂಗ್ ಕಷ್ಟವಿತ್ತು. ಕೆಲವೊಮ್ಮೆ ಕಣ್ತಪ್ಪಿ ಹೋಗುವ ಸಾಧ್ಯತೆಗಳಿತ್ತು. ಇದೀಗ ಬಿಆರ್‌ಸಿ, ಡಿಆರ್‌ಸಿ ಆ್ಯಪ್/ಸೆಂಟರ್‌ಗಳಿಂದಾಗಿ ಶೇ.100ರಷ್ಟು ಟ್ರ್ಯಾಕಿಂಗ್(ನಿಗಾ) ಸಾಧ್ಯವಾಗುತ್ತದೆ.
-ದಿನೇಶ್ ಕುಮಾರ್, ನೋಡಲ್ ಅಧಿಕಾರಿ, ಅಂತಾರಾಜ್ಯ ಪ್ರಯಾಣಿಕರ ಸೇವಾ ವಿಭಾಗ, ದ.ಕ.