Advertisement

‘ಸೂರಿ ಲವ್ಸ್ ಸಂಧ್ಯಾ’ಗೆ ನಾಯಕಿಯಾದ ಅಪೂರ್ವ

04:24 PM Mar 03, 2023 | Team Udayavani |

ಹೊಸಬರ “ಸೂರಿ ಲವ್ಸ್‌ ಸಂಧ್ಯಾ’ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ. ಕೆ.ಟಿ.ಮಂಜುನಾಥ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯಾದವ್‌ ರಾಜ್‌ ಈ ಚಿತ್ರದ ನಿರ್ದೇಶಕರು.

Advertisement

ಪ್ರಯಾಣದಲ್ಲಿ ಸಾಗುವ ಕಥೆಯಲ್ಲಿ ಬಾರ್‌ ಸಪ್ಲೈಯರ್‌ ಆಗಿ ಅಭಿಮನ್ಯು ಕಾಶೀನಾಥ್‌ ಹಾಗೂ ಮಧ್ಯಮ ವರ್ಗದ ಹುಡುಗಿಯಾಗಿ ಅಪೂರ್ವ ಕಾಣಿಸಿಕೊಳ್ಳುತ್ತಿದ್ದಾರೆ.

ಮತ್ತೊಂದು ಮುಖ್ಯ ಪಾತ್ರದಲ್ಲಿ ಪ್ರತಾಪ್‌ ನಾರಾಯಣ್‌ ಹಾಗೂ ಉಳಿದಂತೆ ಪಲ್ಲವಿ, ಶಾರದಮ್ಮ, ಜಯರಾಮಣ್ಣ, ಕೆ.ಎಂ.ರಾಜೇಶ್‌, ಮೊಟ್ಟೆ ರಾಜೇಂದ್ರನ್‌, ನೀನಾಸಂ ಅಶ್ವಥ್‌ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಎಸ್‌.ಎನ್‌.ಅರುಣ ಗಿರಿ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next