Advertisement

ಹುಣಸೂರಿನಲ್ಲಿ ಅಪೋಲೋ ಅಸ್ಪತ್ರೆಯ ಎಮರ್ಜೆನ್ಸಿ ಮತ್ತು ಡೇ ಕೇರ್ ಸೆಂಟರ್‌

10:22 PM Jun 24, 2022 | Team Udayavani |

ಹುಣಸೂರು : ಹುಣಸೂರಿನಲ್ಲಿ ಅಪೋಲೋ ಅಸ್ಪತ್ರೆಯ ಎಮರ್ಜೆನ್ಸಿ ಮತ್ತು ಡೇ ಕೇರ್ ಸೆಂಟರ್‌ನ್ನು ಮಾಜಿ ಸಚಿವ ಯು.ಟಿ.ಖಾದರ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಮತ್ತಿತರ ಗಣ್ಯರೊಡಗೂಡಿ ಉದ್ಘಾಟಿಸಿದರು.

Advertisement

ಹುಣಸೂರಿನ ಹನಗೋಡು ಟೋಲ್ ಗೇಟ್ ಬಳಿಯ ಎಂ.ಆರ್.ಎನ್.ವಿ. ಕಟ್ಟಡದಲ್ಲಿ ಆರಂಭಿಸಿರುವ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಸಚಿವ ಯು.ಟಿ.ಖಾದರ್ ಮಾತನಾಡಿ, ಅಪೋಲೋ ಅಸ್ಪತ್ರೆಯು ಗ್ರಾಮಾಂತರ ಪ್ರದೇಶಗಳಲ್ಲಿ ಆಸ್ಪತ್ರೆ ತೆರೆದಿರುವುದು ಅಭಿನಂದನೀಯ, ಈ ನಿಟ್ಟಿನಲ್ಲಿ ಶಾಸಕ ಮಂಜುನಾಥ್ ಹಾಗೂ ಅವರ ಸಹೋದರರ ಶ್ರಮ ಅಭಿನಂದನೀಯ, ಆಸ್ಪತ್ರೆಗಳು ಜನರಲ್ಲಿ ರೋಗ ಬಾರದ ರೀತಿಯಲ್ಲಿ ಜನಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ ಎಂದರು.ಶಾಸಕ ಎಚ್.ಪಿ.ಮಂಜುನಾಥರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ. ಮಾದರಿ ಕ್ಷೇತ್ರ ಮಾಡಲಿದ್ದಾರೆಂದರು.

ಅತಿಥಿಗಳಾಗಿದ್ದ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಹೆಚ್ಚು ಆಸ್ಪತ್ರೆಗಳ ಅವಶ್ಯವಿದೆ. ಮೇಲ್ವರ್ಗ, ಮದ್ಯಮ ವರ್ಗದವರು ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ತಾಲೂಕು ಕೇಂದ್ರಗಳಲ್ಲಿ ಇಂತಹ ಆಸ್ಪತ್ರೆಗಳು ಅವಶ್ಯವಾಗಿವೆ ಎಂದು ಹೇಳಿ, ಇಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗಲೆಂದು ಆಶಿಸಿಸಿದರು.

ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ತಾಲೂಕಿನ ಜನತೆಗೆ ಆರೋಗ್ಯ ಸೇವೆ ಕಲ್ಪಿಸಲು ಉದ್ದೇಶಿಸಿದ್ದ ದಾನಿ, ಎಂ.ಆರ್.ಎನ್.ವಿ.ಟ್ಟಸ್ಟ್ನ ಅಧ್ಯಕ್ಷರಾಗಿದ್ದ ದಿ.ನಾಗರಾಜ ಶ್ರೇಷ್ಠಿಯವರ ಆಶಯದಂತೆ ಇಲ್ಲಿ ಆಸ್ಪತ್ರೆ ಆರಂಭಿಸಲಾಗಿದೆ ಎಂದು ತಿಳಿಸಿ, ಅವರ ಆಶಯವನ್ನು ಈಡೇರಿಸಿರುವ ತೃಪ್ತಿ ಇದೆ ಎಂದರು.

ಹುಣಸೂರಲ್ಲಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವೈದ್ಯರಿಗೆ ಕೊರತೆ ಇಲ್ಲಾ, ಇಲ್ಲಿ ಸಾಕಷ್ಟು ಉತ್ತಮ ವೈದ್ಯರಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವೈದ್ಯರು, ಆರೋಗ್ಯ-ಆಶಾ ಕಾರ್ಯಕರ್ತರು ಅತ್ಯುತ್ತಮ ಕೆಲಸ ಮಾಡಿದ್ದಾರೆಂದು ಪ್ರಶಂಸಿಸಿ, ಗುಣಮಟ್ಟದ ಚಿಕಿತ್ಸೆಯ ಜೊತೆಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಬೇಕೆಂದು ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಭರತೇಶ್ ರೆಡ್ಡಿಯವರನ್ನು ಕೋರಿದರು.

Advertisement

ಉದ್ಘಾಟನೆಯ ಅಂಗವಾಗಿ ಎಂ.ಆರ್.ಎನ್.ವಿ.ಟ್ಟಸ್ಟ್ನ ಅಧ್ಯಕ್ಷ ಎಚ್.ಎಸ್. ಅಶೋಕ್‌ಕುಮಾರ್, ಹಿರಿಯ ವೈದ್ಯರಾದ ಡಾ.ಶಿವಣ್ಣ, ಡಾ.ಶಂಕರಪ್ಪ, ಡಾ.ಸರ್ವೆಶ್‌ರಾಜೇಅರಸ್, ಡಾ.ಉಮೇಶ್, ಡಾ.ಕೀರ್ತಿಕುಮಾರ್, ಡಾ.ಸರೋಜಿನಿವಿಕ್ರಂ, ಡಾ.ಸರಸ್ವತಿ. ಡಾ.ವೃಷಬೇಂದ್ರಪ್ಪ ಹಾಗೂ ಆಶಾ ಕಾರ್ಯಕರ್ತರ ಪರವಾಗಿ ತಾಲೂಕು ಮೇಲ್ವಿಚಾರಕಿ ಸರಿತಾರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಭರತೇಶ್‌ರೆಡ್ಡಿ, ಶಾಸಕರ ತಂದೆ ಎಚ್.ಎನ್.ಪ್ರೇಮ್‌ಕುಮಾರ್,ಡಾ.ಶ್ರೀನಾಥ್, ಅಮರ್‌ನಾಥ್, ನಗರಸಭೆ ಅಧ್ಯಕ್ಷೆ ಸಮೀನಾಬಾನು, ಉಪಾಧ್ಯಕ್ಷ ದೇವನಾಯ್ಕ, ಸದಸ್ಯರು, ಗುರುಪುರ ಟಿಬೆಟ್ ನಿರಾಶ್ರಿತರ ಕೇಂದ್ರದ ಮುಖ್ಯಸ್ಥರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next