ಗದಗ: ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ 16.50 ಲಕ್ಷ ರೂ. ಪರಿಹಾರ ವಿತರಿಸುವಲ್ಲಿ ವಿಫಲವಾದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಕಾರು ಮತ್ತು ಕಚೇರಿಯಲ್ಲಿನ ನಾಲ್ಕು ಕಂಪ್ಯೂಟರ್‌ಗಳನ್ನು ಸೋಮವಾರ ಸ್ವಾಧೀನ ಪಡಿಸಿಕೊಳ್ಳಲಾಯಿತು.
ತಮ್ಮ ಕಕ್ಷಿದಾರರ ಪರವಾಗಿ ಎಪಿಎಂಸಿ ಕಚೇರಿಗೆ ಆಗಮಿಸಿದ ಎಸ್.ಎಸ್.ಹುರಕಡ್ಲಿ ವಕೀಲರು, ದಶಕಗಳು ಕಳೆದರೂ ತಮ್ಮ ಕಕ್ಷಿದಾರರಾದ ಆರ್.ಆರ್. ಹೇಮಂತನವರ ಹಾಗೂ ಇನ್ನಿತರರಿಗೆ ಬರಬೇಕಿರುವ ಪರಿಹಾರ ಹಣ ಪಾವತಿಸುವಲ್ಲಿ ಗದಗ ಎಪಿಎಂಸಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಕಾರ್ಯದರ್ಶಿಗಳ ಸ್ಕಾರ್ಪಿಯೋ ಕಾರು ಮತ್ತು ಕಚೇರಿಯ ನಾಲ್ಕು ಕಂಪ್ಯೂಟರ್ ಗಳನ್ನು ಜಪ್ತಿ ಮಾಡಲಾಗುತ್ತದೆ. ಅಧಿಕಾರಿ ಹಾಗೂ ಸಿಬ್ಬಂದಿ ಸಹಕರಿಸಬೇಕು ಎಂದರು.
ಆದರೆ, ಕಾರ್ಯದರ್ಶಿಗಳು ಸದ್ಯ ಮೂರು ಕಡೆ ಪ್ರಭಾರವಿದ್ದು, ಇಂದು ಕಚೇರಿಗೆ ಆಗಮಿಸಿಲ್ಲ. ಹೀಗಾಗಿ ಕೆಲ ದಿನಗಳ ಮಟ್ಟಿಗೆ ಸಮಯಾವಕಾಶ ನೀಡಬೇಕು ಎಂದು ಕಚೇರಿ ಸಿಬ್ಬಂದಿ ಕೋರಿದರು. ಸಿಬ್ಬಂದಿಯ ಮನವಿಯನ್ನು ತಿರಸ್ಕರಿಸಿದ ಎಸ್.ಎಸ್. ಹುರಕಡ್ಲಿ ವಕೀಲರು, ತಮ್ಮ ಸಹಾಯಕರ ನೆರವಿನೊಂದಿಗೆ ಕಚೇರಿಯ ನಾಲ್ಕು ಕಂಪ್ಯೂಟರ್ ಹಾಗೂ ಒಂದು ಸ್ಕಾರ್ಪಿಯೋ ಕಾರನ್ನು ವಶಕ್ಕೆ ಪಡೆದರು.
ಪ್ರಕರಣದ ವಿವರ: ಗದುಗಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಚನೆಗಾಗಿ 1977ರಲ್ಲಿ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಿದ್ದು, 1982ರಲ್ಲಿತಮ್ಮ ಕಕ್ಷಿದಾರರಾದ ಆರ್.ಆರ್.ಹೇಮಂತನವರ ಹಾಗೂ ಇನ್ನಿತರರಿಂದ 4.35 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎಪಿಎಂಸಿಯಿಂದ ಬರಬೇಕಿದ್ದ ಪರಿಹಾರ ಹಣಕ್ಕಾಗಿ ಸುಪ್ರೀಂ ಕೋರ್ಟ್ ವರೆಗೆ ಹೋಗಿತ್ತು. ಪ್ರಕರಣ ಪುನಃ ಜಿಲ್ಲಾ ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯಕ್ಕೆ ಜ್ಞಾಪನಾಆದೇಶ ಆಗಿದ್ದರಿಂದ ಸದರಿ ಪ್ರಕರಣದಲ್ಲಿ ರೈತರಿಗೆ ಪ್ರತಿ ಚದುರಡಿಗೆ 8.50 ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು.
ಆದರೆ, ವರ್ಷಗಳು ಕಳೆದರೂ ಪರಿಹಾರ ನೀಡದಿದ್ದರಿಂದ ಈ ಹಿಂದೆ ಭೂ ಸ್ವಾಧೀನ ಅಧಿಕಾರಿ ಉಪ ವಿಭಾಗಾಧಿಕಾರಿಯನ್ನು ಹೊಣೆಯಾಗಿಸಿ, ಅವರ ಕಚೇರಿಯನ್ನು ಜಪ್ತಿ ಮಾಡಲಾಗಿತ್ತು. ಆಗ ಸುಮಾರು76 ಲಕ್ಷ ರೂ. ಪರಿಹಾರ ಹಣ ಬಿಡುಗಡೆ ಮಾಡಿದಎಪಿಎಂಸಿ, ಇನ್ನುಳಿದ 16.50 ಲಕ್ಷ ರೂ. ಪಾವತಿಸಲು ವಿಳಂಬ ಮಾಡಿದೆ. ಈ ಬಗ್ಗೆ ಹಲವು ಬಾರಿ ಮನವಿಮಾಡಿದರೂ ಅಧಿ ಕಾರಿಗಳು ಸ್ಪಂದಿಸಲಿಲ್ಲ. ಹೀಗಾಗಿ ಪುನಃ ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ವಾರೆಂಟ್ ಆಧರಿಸಿ ಕಚೇರಿಯ 1 ಮಹೇಂದ್ರ ಸ್ಕಾರ್ಪಿಯೋ ಕಾರು ಮತ್ತು ನಾಲ್ಕು ಕಂಪ್ಯೂಟರ್ ಗಳನ್ನು ವಶಕ್ಕೆ ಪಡೆದಿದ್ದು, ಅವುಗಳನ್ನು ನ್ಯಾಯಾಲಯಕ್ಕೆ ಜಮಾ ಮಾಡಲಾಗುತ್ತದೆ. ಪ್ರತಿವಾದಿಗಳು ಪರಿಹಾರಹಣ ನೀಡಿ ಬಿಡಿಸಿಕೊಳ್ಳಬಹುದು ಎಂದು ಎಸ್.ಎಸ್. ಹುರಕಡ್ಲಿ ವಕೀಲರು ಮಾಹಿತಿ ನೀಡಿದರು.
ನಮ್ಮ ಕಕ್ಷಿದಾರರಿಗೆ ಇತ್ತ ಪರಿಹಾರವೂ ಇಲ್ಲ. ಅತ್ತ ಜಮೀನೂ ಇಲ್ಲದಂತಾಗಿದೆ. ಸಕಾಲಕ್ಕೆ ಪರಿಹಾರ ದೊರೆಯದೇ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಕರಣದಲ್ಲಿ ಗದಗ ಎಪಿಎಂಸಿಯ ಹಾಲಿ ಕಾರ್ಯದರ್ಶಿಗಳ ಬಂಧನಕ್ಕೆ ಆದೇಶವಾಗಿತ್ತು. ಆದರೆ, ಅವರು ಮೂರು ಕಡೆ ಪ್ರಭಾರ ಇರುವುದರಿಂ ದಗದಗ ಎಪಿಎಂಸಿಗೆ ಹಾಜರಾಗಿಲ್ಲ. ಈಮೂಲಕ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಅರಿಕೆ ಮಾಡಿಮಾಡಿಕೊಂಡಿದ್ದರಿಂದ ಕಚೇರಿಯ ವಸ್ತುಗಳಜಪ್ತಿಗೆ ಆದೇಶಿಸಿದ್ದು, ಅದರಂತೆ ಕ್ರಮ ವಹಿಸಲಾಗಿದೆ. –
ಎಸ್.ಎಸ್. ಹುರಕಡ್ಲಿ, ವಕೀಲ