Advertisement
* ಅಜ್ಜನಿಗೆ ದೇವರು, ಪೂಜೆ, ಪುರಸ್ಕಾರಗಳಲ್ಲಿ ನಂಬಿಕೆ ಇರಲಿಲ್ಲ. ಆದರೆ, ಮನೆಯಲ್ಲಿ ಪೂಜೆ ಮಾಡಲು ಅಡ್ಡಿ ಉಂಟು ಮಾಡುತ್ತಿರಲಿಲ್ಲ. ಅವರು ಮನದಲ್ಲೇ ನಮಿಸುತ್ತಿದ್ದರು. ನಿಮ್ಮ ಇಚ್ಛೆಗೆ ತಕ್ಕಂತೆ ಬದುಕಿ ಎನ್ನುತ್ತಿದ್ದರು.
Related Articles
Advertisement
ವಿಜ್ಞಾನಿ ಆಗಲಿಲ್ಲ, ಕನ್ನಡ ಅಧ್ಯಾಪಕನಾದೆ!: ಕುವೆಂಪು ಅವರ ರೀತಿಯಲ್ಲಿ ಕವಿತೆಗಳನ್ನು ರಚಿಸಬೇಕು ಎಂದುಕೊಂಡಿದ್ದೆ. ಅದು ಸಾಧ್ಯವಾಗದೆ ಸಂಶೋಧನಾ ಕ್ಷೇತ್ರದಲ್ಲಿ ಕೃಷಿ ಮಾಡಿದೆ. ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನಾನು ಕುವೆಂಪು ಕಾವ್ಯಕ್ಕೆ ಮನಸೋತು ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾದೆ ಎಂದು ಇತ್ತೀಚೆಗಷ್ಟೇ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದರು.
ಹಿರಿಯ ವಿಮರ್ಶಕ ಡಾ.ಎಲ್.ಎಸ್.ಶೇಷಗಿರಿರಾಯರಿಗೆ ಹಮ್ಮಿಕೊಂಡಿದ್ದ “ನುಡಿ-ನಮನ’ ಕಾರ್ಯಕ್ರಮದಲ್ಲಿ ನಾನು ವಿಜ್ಞಾನ ವಿಷಯದ ವಿದ್ಯಾರ್ಥಿ. ಆದರೆ, ಕುವೆಂಪು ಅವರ ಸಾಹಿತ್ಯ, ಬರಹ, ಕವಿತೆಗಳು ಅಂದರೆ ತುಂಬಾ ಅಚ್ಚು ಮೆಚ್ಚು. ಆ ಹಿನ್ನೆಲೆಯಲ್ಲಿ ವಿಜ್ಞಾನ ವಿಷಯವನ್ನು ಬದಿಗೊತ್ತಿ ಮೈಸೂರು ವಿವಿಯಲ್ಲಿ ಕುವೆಂಪು ಅವರ ಶಿಷ್ಯನಾದೆ ಎಂದು ಆವತ್ತು ತಮ್ಮ ಬಾಲ್ಯವನ್ನು ನೆನಪಿಸಿ ಕೊಂಡಿದ್ದರು.
ಚಿನ್ನಪ್ಪ ಕನ್ನಡ ಮೇಷ್ಟ್ರು ಆಗ್ತಾನೆ: ನಾನು ವಿಜ್ಞಾನ ವಿಷಯದಲ್ಲಿ ಬಂಗಾರ ಪದಕದೊಂದಿಗೆ ಪದವಿ ಪೂರೈಸಿದಾಗ ನನ್ನ ಕನ್ನಡದ ಅಭಿರುಚಿಯನ್ನು ನೋಡಿ ಊರಲ್ಲಿ ಸಿಟ್ಟಾಗಿದ್ದರು. ಚಿನ್ನಪ್ಪ (ಚಿದಾನಂದ ಮೂರ್ತಿ ಅವರಿಗೆ ಊರಿನಲ್ಲಿ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು) ವಿಜ್ಞಾನಿನೋ ಅಥವಾ ಎಂಜಿನಿಯರೋ ಆಗುತ್ತಾನೆ ಎಂದುಕೊಂಡರೆ ಕನ್ನಡ ಮೇಷ್ಟ್ರು ಆಗಲು ಹೊರಟಿದ್ದಾನೆಂದು ಮನೆಯಲ್ಲಿ ಸಿಟ್ಟಾಗಿದ್ದರು ಎಂದು ತಮ್ಮ ಕಾಲೇಜು ದಿನಗಳನ್ನು ಆವತ್ತಿನ ಕಾರ್ಯಕ್ರಮದಲ್ಲಿ ನೆನಪಿಸಿಕೊಳ್ಳುತ್ತಾರೆ.
ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಡಿ!: ಈ ಹಿಂದೆ ಚಿತ್ರದುರ್ಗ, ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಡಾ.ಎಂ.ಚಿದಾನಂದಮೂರ್ತಿ ಅವರ ಹೆಸರು ಮುಂಚೂಣಿಗೆ ಬಂದಿತ್ತು. ಆದರೆ, ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎನ್ನುವಾಗಲೇ ಬೇರೆಯವರ ಹೆಸರು ಘೋಷಣೆಯಾಗುತ್ತಿತ್ತು. ಹೀಗಾಗಿಯೇ ಚಿದಾನಂದಮೂರ್ತಿ ಅವರು ಈ ಹಿಂದೆ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರನ್ನು ಪರಿಗಣಿಸಬೇಡಿ ಎಂದು ಸಾಹಿತ್ಯ ಪರಿಷತ್ತಿಗೆ ಪತ್ರ ಬರೆದಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಹೇಳಿದ್ದಾರೆ.
ನನಗೆ ಕುಲಪತಿ ಹುದ್ದೆ ಬೇಕಾಗಿಲ್ಲ: ಈ ಹಿಂದೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಮೀನ ಮೇಷ ತೋರುತ್ತಿತ್ತು. ಆ ವೇಳೆ, ಅಂದು ಉನ್ನತ ಶಿಕ್ಷಣ ಸಚಿವ ಜೀವರಾಜ್ ಆಳ್ವ ಅವರನ್ನು ಭೇಟಿ ಮಾಡಿದ್ದ ಚಿದಾನಂದ ಮೂರ್ತಿ ನಿಯೋಗಕ್ಕೆ “ಚಿಮೂ ಅವರೇ.. ನೀವೇ ಕುಲಪತಿಗಳಾಗಿ’ ಎಂದು ಆಳ್ವ ಹೇಳಿದ್ದರು. ಇದರಿಂದ ಸಿಟ್ಟಾದ ಮೂರ್ತಿ ಅವರು, “ಜೀವರಾಜ್ ಆಳ್ವ ಅವರೇ, ಈ ಹುದ್ದೆ ನನ್ನ ಎಡಗಾಲಿನ ಅಂಗುಷ್ಟಕ್ಕೆ ಸಮಾನ. ಮೊದಲು ಕನ್ನಡ ವಿವಿ ಸ್ಥಾಪನೆ ಮಾಡಿ,’ ಎಂದು ನೇರವಾಗಿ ಹೇಳಿದ್ದರು ಎಂದು ಆ ಭೇಟಿಯ ವೇಳೆ ಇದ್ದ ಕನ್ನಡಪರ ಹೋರಾಟಗಾರ ರಾ.ನಂ.ಚಂದ್ರಶೇಖರ ಹೇಳಿದ್ದಾರೆ.
* ದೇವೇಶ ಸೂರಗುಪ್ಪ