Advertisement
1971 ಮತ್ತು 2001ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಹಂಚಿಕೆ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿತ್ತು. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕ್ರಮವಾಗಿ 30 ವರ್ಷ ಹಾಗೂ 25 ವರ್ಷಗಳ ಮಟ್ಟಿಗೆ ಇದನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ಮುಂದಿನ ಆರು ವರ್ಷಗಳಲ್ಲಿ ಮತ್ತೆ ಇದು ಚರ್ಚೆಗೆ ಬರಲಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜ್ಯದ ರಾಜಕೀಯ ಅಸ್ತಿತ್ವ ಅವಲಂಬಿಸಿದೆ. ಹಾಗೊಮ್ಮೆ ಜನಸಂಖ್ಯೆ ಆಧರಿಸಿ ವಿಂಗಡಣೆಗೆ ಮುಂದಾದರೆ, ಈಗಿರುವ 28 ಲೋಕಸಭಾ ಕ್ಷೇತ್ರಗಳ ಪೈಕಿ ಕೆಲವು ಸೀಟುಗಳಿಗೆ ಕತ್ತರಿ ಬೀಳುವುದು ಖಂಡಿತ. ಇದಕ್ಕೆ ಪ್ರತಿಯಾಗಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ, ಹರಿಯಾಣ, ಗುಜರಾತ್, ರಾಜಸ್ಥಾನ ಸೇರಿ ಉತ್ತರ ಭಾರತದ ಸೀಟುಗಳ ಸಂಖ್ಯೆ ಹೆಚ್ಚಲಿದೆ.
Related Articles
Advertisement
“ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷೆ ಕೊಡ್ಬೇಡಿ’: ಇತ್ತೀಚೆಗೆ ಸ್ವತಃ ರಾಜ್ಯಸಭೆಯಲ್ಲಿ ಸದಸ್ಯ ಜೈರಾಂ ರಮೇಶ್ ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳು ರಾಜಕೀಯ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. “ಉತ್ತರ ಭಾರತದ ಆರು ರಾಜ್ಯಗಳ ಹೆರುವಣಿಕೆ(ಜನನ) ಪ್ರಮಾಣ 2.1 (ಇದು ರಿಪ್ಲೇಸ್‌ಮೆಂಟ್ ಲೆವೆಲ್) ಇದ್ದು, 2050ರ ವೇಳೆಗೆ ಇವುಗಳ ಜನಸಂಖ್ಯೆ ಪ್ರಮಾಣ ಶೇ. 40ರಿಂದ 44ಕ್ಕೆ ಏರಿಕೆ ಆಗಲಿದೆ. ಆದರೆ, ದಕ್ಷಿಣದ ಐದು ರಾಜ್ಯಗಳ ಸ್ಥಿತಿ ಇದಕ್ಕೆ ವಿರುದ್ಧವಾಗಿದ್ದು, ಮುಂದಿನ ಮೂರು ದಶಕಗಳಲ್ಲಿ ಜನಸಂಖ್ಯೆ ಶೇ.15ರಿಂದ ಶೇ.12ಕ್ಕೆ ಇಳಿಕೆ ಆಗಲಿದೆ. ಜನಸಂಖ್ಯೆ ನಿಯಂತ್ರಣ ಮಾಡಿದ್ದಕ್ಕಾಗಿ ಆ ಭಾಗದ ರಾಜ್ಯಗಳಿಂದ ಲೋಕಸಭೆಗೆ ಪ್ರತಿನಿಧಿಸುವ ಸದಸ್ಯರ ಸಂಖ್ಯೆಗೆ ಕೇಂದ್ರ ಸರ್ಕಾರ ಕತ್ತರಿ ಹಾಕಬಾರದು. ಪ್ರಸ್ತುತ 1971ರ ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ವಿಂಗಡಣೆ ಆಗಿದೆ’ ಎಂದು ಅವರು ಆಗ್ರಹಿಸಿದ್ದರು.
“ಕೇಳ್ಳೋರಿಲ್ಲದಂತಾಗಲಿದೆ’: “ಈಗಾಗಲೇ ಕೇಂದ್ರದಲ್ಲಿ ರಾಜ್ಯದ ರಾಜಕೀಯ ಅಸ್ತಿತ್ವ ಕಡಿಮೆ ಆಗುತ್ತಿದೆ. ಇದು ಹಲವು ಸಂದರ್ಭಗಳಲ್ಲಿ ಸಾಬೀತು ಕೂಡ ಆಗಿದೆ. ಈಗ ಸೀಟುಗಳಿಗೆ ಮತ್ತಷ್ಟು ಕತ್ತರಿ ಬಿದ್ದರೆ, ನಮ್ಮ ಧ್ವನಿಯನ್ನು ಕೇಳ್ಳೋರೇ ಇಲ್ಲದಂತಾಗುತ್ತದೆ. ಯಾವುದೇ ಕಾರಣಕ್ಕೂ ಈ ಸಾಹಸಕ್ಕೆ ಕೈಹಾಕಬಾರದು ಹಾಗೂ ಕೇಂದ್ರವು 2.3ರಷ್ಟಿರುವ ಹೆರುವಣಿಕೆ ಪ್ರಮಾಣವನ್ನು 2.1ಕ್ಕೆ ತಗ್ಗಿಸುವಲ್ಲಿ ನಿರತವಾಗಿದೆ. ಇದಕ್ಕಾಗಿ ದಕ್ಷಿಣದ ರಾಜ್ಯಗಳಿಗೆ ಜನಸಂಖ್ಯೆ ನಿಯಂತ್ರಣಕ್ಕೆ ಸೂಚಿಸುತ್ತಿದೆ. ಆದರೆ, ವಾಸ್ತವವಾಗಿ ಉತ್ತರದ ರಾಜ್ಯಗಳಲ್ಲಿ ಹೆಚ್ಚಿರುವ ಹೆರುವಣಿಕೆ ಪ್ರಮಾಣಕ್ಕೆ ಕಡಿವಾಣ ಹಾಕಬೇಕಿದೆ’ ಎಂದು ಬನವಾಸಿ ಬಳಗದ ಸದಸ್ಯ ಅರುಣ್ ಜಾವಗಲ್ ಒತ್ತಾಯಿಸುತ್ತಾರೆ.
ಪ್ರಧಾನಿ ಹುದ್ದೆಯಿಂದ ವಂಚಿತ: “ಪದೇಪದೆ ಜನಸಂಖ್ಯೆ ಆಧರಿಸಿ ಕ್ಷೇತ್ರಗಳ ವಿಂಗಡಣೆ ಮಾಡಿದರೆ, ಪ್ರಧಾನಿ ಹುದ್ದೆ ಬರೀ ಉತ್ತರದ ರಾಜ್ಯಗಳಿಗೇ ಸೀಮಿತವಾಗುತ್ತದೆ. ದಕ್ಷಿಣದ ರಾಜ್ಯಗಳು ಇದರಿಂದ ವಂಚಿತವಾಗಲಿವೆ’ ಎಂದು 1950ರ ದಶಕದಲ್ಲಿ ಅಂದಿನ ಮೈಸೂರು ರಾಜ್ಯವನ್ನು ಪ್ರತಿನಿಧಿಸಿದ್ದ ಟಿ. ಚೆನ್ನಯ್ಯ ಲೋಕಸಭೆಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
1952ರಿಂದ ಈವರೆಗಿನ ರಾಜ್ಯದ ಲೋಕಸಭಾ ಕ್ಷೇತ್ರಗಳುವರ್ಷ ಸೀಟುಗಳು
1952 11
1957 26
1962 26
1962 27
1971 27
1977ರ ನಂತರದಿಂದ 28 * ವಿಜಯಕುಮಾರ್ ಚಂದರಗಿ