Advertisement
1ರಿಂದ 7ನೇ ತರಗತಿಯವರೆಗೆ ಬೋಧಿಸುತ್ತಿದ್ದ ಶಿಕ್ಷಕರು ಇನ್ನು ಮುಂದೆ 5ನೇ ತರಗತಿಯವರೆಗೆ ಮಾತ್ರ ಬೋಧಿಸಬೇಕಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ 7ನೇ ತರಗತಿಯವರೆಗೆ ಬೋಧಿಸುತ್ತಿರುವ ಶಿಕ್ಷಕರಿಗೆ ಮುಂಭಡ್ತಿ ಇಲ್ಲದೆ ಹೊಸ ನೇಮಕಾತಿಗೆ ಸರಕಾರ ಮುಂದಾಗಿರುವುದು ಶಿಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ.15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಸೇವೆಯಲ್ಲಿ ಇರುವವರಲ್ಲಿ ಅನೇಕ ಪದವೀಧರರಿದ್ದರೂ ಅವ ರಿಗೆ ಪದೋ ನ್ನತಿಗೆ ಪರೀಕ್ಷೆ ನಡೆಸುತ್ತಿಲ್ಲ. ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನವಾಗುತ್ತಿರುವ ಹಿನ್ನೆಲೆಯಲ್ಲಿ ಇವರನ್ನು 1ರಿಂದ 7ರ ಬದಲಿಗೆ ಪೂರ್ವ ಪ್ರಾಥಮಿಕ(ಎಲ್‌ಕೆಜಿ, ಯುಕೆಜಿ)ದಿಂದ 5ನೇ ತರಗತಿಗೆ ಸೀಮಿತಗೊಳಿಸಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಪದವೀಧರ ಶಿಕ್ಷಕರ ಹುದ್ದೆಗೆ ಸರಕಾರ ನಡೆಸ ಲಿರುವ ನೇಮಕಾತಿಯಲ್ಲಿ ಸದ್ಯ ಸೇವೆಯಲ್ಲಿರುವವರು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯ ಬಹುದು. ಆದರೆ ಅವರನ್ನು ಸೇವಾ ನಿರತರ ಶಿಕ್ಷಕ ರಾಗಿ ಪರಿಗಣಿಸುವುದಿಲ್ಲ. ಬದಲಾಗಿ ಹೊಸ ಅಭ್ಯರ್ಥಿ ಯಾಗಿಯೇ ಪರಿಗಣಿಸುತ್ತೇವೆ. ಸೇವಾ ನಿರತರ ಶಿಕ್ಷಕರಿಗೆ ಸದ್ಯ ಪದೋನ್ನತಿ ಪರೀಕ್ಷೆ ನಡೆಸುವ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ| ಆರ್. ವಿಶಾಲ್ ತಿಳಿಸಿದ್ದಾರೆ.
Related Articles
ಸರಕಾರಿ ಶಾಲೆಯಲ್ಲಿ 5 ವರ್ಷಕ್ಕಿಂತಲೂ ಹೆಚ್ಚುಕಾಲ ಸೇವೆ ಸಲ್ಲಿಸುತ್ತಾ ಬಂದಿರುವ ಪದವಿ ಹಾಗೂ ಬಿ.ಇಡಿ. ಮಾಡಿರುವವರಿಗೆ ಪದವೀಧರ ಶಿಕ್ಷಕರ ಪಟ್ಟ ಸಿಕ್ಕಿಲ್ಲ. ಇದಕ್ಕೆ ಶಿಕ್ಷಕರಲ್ಲಿರುವ ಕೆಲವು ಗೊಂದಲಗಳೂ ಕಾರಣವಾಗಿವೆ. ಹಲವು ಶಿಕ್ಷಕರು (ಈಗಾಗಲೇ ಬಿ.ಇಡಿ. ಮಾಡಿಕೊಂಡಿರುವವರು) ಪದೋನ್ನತಿಗೆ ನೇರ ನೇಮಕಾತಿ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಡಿ.ಇಡಿ. ಮಾಡಿಕೊಂಡಿರುವ (ಬಿ.ಇಡಿ. ಆದವರೂ ಇದ್ದಾರೆ) ಕೆಲವು ಹಿರಿಯ ಶಿಕ್ಷಕರು ಪದವೀಧರ ಶಿಕ್ಷಕರಾಗಿ ಪದೋನ್ನತಿಗೆ ಪರೀಕ್ಷೆ ನಡೆಸುವುದು ಬೇಡ, ನೇರ ಸೇವಾಹಿರಿತನದ ಆಧಾರದಲ್ಲಿ ಭಡ್ತಿ ನೀಡಬೇಕು ಎನ್ನುವ ವಾದವನ್ನು ಇಲಾಖೆಯ ಮುಂದಿಟ್ಟಿದ್ದಾರೆ. ಶಿಕ್ಷಕರ ಸಂಘವೂ ಈ ವಿಷಯದಲ್ಲಿ ಸ್ವಲ್ಪಮಟ್ಟಿನ ಮೌನವನ್ನೇ ವಹಿಸಿದೆ. ಹೀಗಾಗಿ ಸೇವಾ ನಿರತರಲ್ಲಿ ಅರ್ಹರಿಗೂ ಪದವೀಧರ ಶಿಕ್ಷಕರಾಗಲು ಆಗುತ್ತಿಲ್ಲ.
Advertisement
ಸೇವೆಯಲ್ಲಿರುವವರಿಗೆ ಪದ ವೀಧರ ಶಿಕ್ಷಕರಾಗಲು ಭಡ್ತಿ ಸಂಬಂಧ ಪರೀಕ್ಷೆ ನಡೆಸುವ ಪ್ರಸ್ತಾವನೆ ಈಗಿಲ್ಲ. ಪರೀಕ್ಷೆ ನಡೆಸದೆ ಇರುವುದು ಕಾನೂನಾತ್ಮಕವಾಗಿ ತಪ್ಪಾಗಲಾರದು. 5ನೇ ತರಗತಿ ವರೆಗೆ ಬೋಧಿಸಲು ನೇಮಕವಾಗಿರುವವರು 7ನೇ ತರಗತಿ ವರೆಗೆ ಹೆಚ್ಚುವರಿಯಾಗಿ ಬೋಧಿಸು ತ್ತಿದ್ದರೆ, ಹೊಸ ನೇಮಕವಾದ ಬಳಿಕ 5ನೇ ತರಗತಿವರೆಗಷ್ಟೇ ಬೋಧಿಸಬೇಕಾದೀತು.– ಡಾ| ಆರ್. ವಿಶಾಲ್, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲೆಯಲ್ಲಿ ರುವ ಪದವೀಧರ ಶಿಕ್ಷಕ ರಿಗೆ ಭಡ್ತಿ ನೀಡುವ ಸಂಬಂಧ ಪರೀಕ್ಷೆ ನಡೆಸಲು ಹಲವು ಬಾರಿ ಮನವಿ ಮಾಡಿದ್ದೇವೆ. ಮೂರು ನೇಮ ಕಾತಿ ಸಂದರ್ಭದಲ್ಲೂ ಅವಗಣಿ ಸಿರು ವುದು ಸರಿಯಲ್ಲ. ಇನ್ನೊಮ್ಮೆ ಶಿಕ್ಷಣ ಸಚಿವರು ಹಾಗೂ ಆಯುಕ್ತರ ಗಮನಕ್ಕೂ ತರಲಿದ್ದೇವೆ.
– ಚಂದ್ರಶೇಖರ ನೂಗ್ಲಿ,
ರಾಜ್ಯ ಪ್ರ. ಕಾರ್ಯದರ್ಶಿ,
ಸ. ಪ್ರಾ. ಶಾ. ಶಿಕ್ಷಕರ ಸಂಘ -ರಾಜು ಖಾರ್ವಿ ಕೊಡೇರಿ