Advertisement

ಕಿರುತೆರೆ ನಟಿ ಮಾಧವಿ ಗೋಗಟೆ ನಿಧನ

06:59 PM Nov 22, 2021 | Team Udayavani |

ಮುಂಬೈ: ಕಿರುತೆರೆಯ ಹಿರಿಯ ನಟಿ ಮತ್ತು “ಅನುಪಮಾ’ ಧಾರಾವಾಹಿ ಖ್ಯಾತಿಯ ಮಾಧವಿ ಗೋಗಟೆ (58) ನಿಧನರಾಗಿದ್ದಾರೆ.

Advertisement

ಕೆಲ ದಿನಗಳ ಹಿಂದೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿ ಚೇತರಿಕೆ ಕಂಡಿದ್ದರೂ, ನ.21ರಂದು ಅವರ ಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿತ್ತು.

ಹೀಗಾಗಿ, ಅವರು ಕೊನೆಯುಸಿರೆಳೆದರು. ಈ ಬಗ್ಗೆ ಅವರ ಸಹ ನಟಿ ರೂಪಾಲಿ ಗಾಂಗೂಲಿ ಇನ್ಸ್ಟಾ ಗ್ರಾಂನಲ್ಲಿ “ಇನ್ನು ಹೇಳುವುದಕ್ಕೆ ಏನೂ ಉಳಿದಿಲ್ಲ. ಮಾಧವಿಜಿ ಅವರಿಗೆ ಸದ್ಗತಿ ಸಿಗಲಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ತೀವ್ರ ವಿರೋಧಕ್ಕೆ ಮಣಿದ ಆಂಧ್ರಪ್ರದೇಶ ಸಿಎಂ; ವಿವಾದಿತ 3 ರಾಜಧಾನಿಗಳ ಮಸೂದೆ ವಾಪಸ್

ಮಾಧವಿ ಗೋಗಟೆ, ಏಕ್ತಾ ಕಪೂರ್ ಸೇರಿದಂತೆ ಅನೇಕ ದಿಗ್ಗಜರ ಧಾರಾವಾಹಿಯಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಅವರ ನಿಧನಕ್ಕೆ ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ.

Advertisement

ಭಾನುವಾರವೇ ಅವರ ಅಂತ್ಯಕ್ರಿಯೆಯೂ ನಡೆದಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next