“ಸ್ಟಾರ್ ಸುವರ್ಣ’ ವಾಹಿನಿ ಕನ್ನಡ ಕಿರುತೆರೆ ಪ್ರೇಕ್ಷಕರಿಗಾಗಿ “ಅನುಪಮ’ ಎಂಬ ಮತ್ತೂಂದು ಹೊಸ ಕೌಟುಂಬಿಕ ಕಥಾಹಂದರದ ಧಾರಾವಾಹಿಯನ್ನು ಹೊತ್ತು ತರುತ್ತಿದೆ.
ಮಧ್ಯ ವಯಸ್ಕ ಮಹಿಳೆ ಅನುಪಮ. ಸದಾ ಮನೆಯವರ ಬಗ್ಗೆ ಕಾಳಜಿ, ಕುಟುಂಬದವರ ಇಷ್ಟ-ಕಷ್ಟ, ಬೇಕು-ಬೇಡಗಳನ್ನು ಅರ್ಥ ಮಾಡಿಕೊಂಡು ಮನೆಯ ಗೃಹಲಕ್ಷ್ಮಿಯಂತಿರುವ ಈಕೆಗೆ ಮದುವೆಯಾಗಿ ಎರಡು ದಶಕಗಳ ಮೇಲಾಗಿದೆ. ತಾಯಿ, ಹೆಂಡತಿ. ಮಗಳು, ಸೊಸೆ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸುವ ಈಕೆಗೆ 3 ಮಕ್ಕಳು, ಗಂಡನಿಗೆ ಈಕೆ ಓದಿಲ್ಲ, ಹಳೆಯ ಕಾಲದವಳು ಎಂಬ ತಾತ್ಸಾರ. ಮನೆಯಲ್ಲಿ ಏನೇ ತಪ್ಪುಗಳಾದರು ಅತ್ತೆ ದೂಷಿಸುವುದು ಈಕೆಯನ್ನೇ. ಶರವೇಗದಲ್ಲಿ ಬದಲಾಗುತ್ತಿರುವ ಕಾಲ, ಆಧುನಿಕ ಯುಗಕ್ಕೆ ಹೊಂದಿಕೊಂಡಿರುವ ಕುಟುಂಬದಲ್ಲಿ ಅನುಪಮ ಯಾವ ರೀತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು, ಸಂತೋಷ ಕಂಡುಕೊಳ್ಳುತ್ತಾಳೆ ಎಂಬುದೇ “ಅನುಪಮ’ ಧಾರಾವಾಹಿಯ ಮುಖ್ಯ ಕಥಾ ಹಂದರ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ತಂಡದಲ್ಲಿ ಬದಲಾವಣೆ; ಟಿ20 ತಂಡಕ್ಕೆ ನೂತನ ನಾಯಕನ ನೇಮಕ
ಅಂದಹಾಗೆ, ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಕಥೆ “ಅನುಪಮ’ ಇದೇ ಮಾರ್ಚ್ 6 ರಿಂದ ಮಧ್ಯಾಹ್ನ 1 ಗಂಟೆಗೆ “ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗಲಿದೆ.