Advertisement

POCSO ಪ್ರಕರಣದ ಆರೋಪಿ ನಟಿ ಸಲ್ಲಿಸಿದ ನಿರೀಕ್ಷಣ ಜಾಮೀನು ಅರ್ಜಿ ವಜಾ

06:27 PM Oct 06, 2024 | Team Udayavani |

ಕಾಸರಗೋಡು: ನಟ ಮಖೇಶ್‌ ಸಹಿತ ಹಲವು ಸಿನೆಮಾ ನಟರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದ ನಟಿಯ ವಿರುದ್ಧ ದಾಖಲಿಸಿರುವ ಪೋಕ್ಸೋ ಪ್ರಕರಣದಲ್ಲಿ ನಿರೀಕ್ಷಣ ಜಾಮೀನು ಕೋರಿ ಆಕೆ ಸಲ್ಲಿಸಿದ ಅರ್ಜಿಯನ್ನು ಕಾಸರಗೋಡು ಜಿಲ್ಲಾ ಸೆಶನ್ಸ್‌ ನ್ಯಾಯಾಲಯ ಮತ್ತು ತಲಶ್ಶೇರಿ ಜಿಲ್ಲಾ ಸುಶನ್ಸ್‌ ನ್ಯಾಯಾಲಯ ವಜಾಗೈದಿದೆ.

Advertisement

ಸಂಬಂಧಿಕಳಾದ ಯುವತಿಯೋರ್ವಳು ನೀಡಿದ ದೂರಿನಂತೆ ನಟಿ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದರು. ನಾನು ಇನ್ನೂ ಪ್ರಾಯಕ್ಕೆ ತಲುಪುವ ಮುನ್ನ ಸಿನೆಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ ನಟಿ ನನ್ನನ್ನು ಹಲವೆಡೆಗಳಿಗೆ ಕರೆದೊಯ್ದು ಒಪ್ಪಿಸಿದ್ದಳೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಳು. ಅದರಂತೆ ಪೊಲೀಸರು ನಟಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next