ಕೈಗಾರಿಕಾ ಸಚಿವಾಲಯದ ನೋಡಲ್ ಏಜೆನ್ಸಿ ಮೆರೈನ್ ಪ್ರಾಡಕ್ಟ್$Õ ಎಕ್ಸ್‌ಪೋರ್ಟ್ ಡೆವಲಪ್‌ಮೆಂಟ್ ಅಥಾರಿಟಿಯ ಕಾರವಾರ ವಿಭಾಗ ಉಪ ನಿರ್ದೇಶಕ ವಿಜಯ ಕುಮಾರ್ ಹೇಳಿದರು.
Advertisement
ಅವರು ಮಂಗಳವಾರ ಇಲ್ಲಿನ ಶೆರೋನ್ ಹೊಟೇಲ್ ಸಭಾಂಗಣದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ನೋಡೆಲ್ ಏಜೆನ್ಸಿ ಮೆರೈನ್ ಪ್ರಾಡಕ್ಟ್$Õ ಎಕ್ಸ್‌ಪೋರ್ಟ್ ಡೆವಲಪ್‌ಮೆಂಟ್ ಅಥಾರಿಟಿ ವತಿಯಿಂದ “ಯಶಸ್ವಿ ಬೆಳೆಗೆ ಪ್ರತಿಜೀವಿಕಗಳ ರಹಿತ ಆರೋಗ್ಯವಂತ ಸಿಗಡಿ ಮರಿ ನಿರ್ವಹಣೆ’ ಕುರಿತು ಪಾಲುದಾರರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಚೀನ ನಮ್ಮ ಮಾರುಕಟ್ಟೆ ಯಾಗಲಿದೆ. 20 ವರ್ಷಗಳ ಹಿಂದೆ ಚೀನ ಖರೀದಿಸುತ್ತಿದ್ದರೂ ಅನಂತರ ವ್ಯವಹಾರ ಇರಲಿಲ್ಲ. ಈಗ ಅಮೆರಿಕ ರೀತಿ ಚೀನವನ್ನು ಅವಲಂಬಿಸಬೇಕಿದೆ. ಅವರ ಆಮದಿನ ಪ್ರಮಾಣ ಹೆಚ್ಚಾಗಿದೆ ಎಂದರು. ಮರಿ ಉತ್ಪಾದನಾ ಕೇಂದ್ರದ ಸಿ.ಟಿ. ಪೈ ಮಾತನಾಡಿ, 1989ರಲ್ಲಿಯೇ ಲೈಟ್‌ಫಿಶಿಂಗ್ ವಿರೋಧಿಸಿ ಸರಕಾರದ ಗಮನ ಸೆಳೆದಿದ್ದೆ. ಮೀನುಗಾರಿಕೆ ಕುರಿತು ವಿದೇಶಗಳಂತೆ ಇಲ್ಲಿ ದೇಶ ಮಟ್ಟದ ಕಾನೂನು ಬೇಕು. ಇದು ಪೌಷ್ಟಿಕ ಆಹಾರವಾದ ಮೀನುಗಳ ಸಂತತಿ ಉಳಿಸಲು ಅನುಕೂಲವಾಗುತ್ತದೆ. ಭಾರತದಿಂದ 9.34 ಲಕ್ಷ ಟನ್ ಸಿಗಡಿ ರಫ್ತಾಗುತ್ತದೆ. ಇದರಲ್ಲಿ ಶೇ. 60 ಪಾಲು ಆಂಧ್ರ ಪ್ರದೇಶದ್ದಾಗಿದ್ದು ಕೇವಲ 2 ಸಾವಿರ ಟನ್ ಕರ್ನಾಟಕದ್ದು ಎಂದರು.
Related Articles
ಸಿಗಡಿ ಕೃಷಿಕರಾದ ಕೃಷ್ಣಪ್ರಸಾದ ಅಡ್ಯಂತಾಯ ಶ್ರೀಧರ ಹೆಗ್ಡೆ, ಪ್ರದೀಪ್ ಶೆಟ್ಟಿ, ಕೆಂಚನೂರು ಸೋಮಶೇಖರ ಶೆಟ್ಟಿ ಮಾತನಾಡಿ, ಸಿಗಡಿ ಕೃಷಿಗೆ ಸರಕಾರದ ನೆರವು ಸಾಲುತ್ತಿಲ್ಲ. ವಿಮೆ ದೊರೆಯುತ್ತಿಲ್ಲ. ಯಾವುದೇ ಬ್ಯಾಂಕ್‌ಗಳು ಮುಂಗಡ ನೀಡುತ್ತಿಲ್ಲ ಎಂದು ತಿಳಿಸಿದರು. ಮುಂದಿನ ಬಾರಿ ಬ್ಯಾಂಕರ್‌ಗಳು, ಅರಣ್ಯ, ಉಸ್ತುವಾರಿ, ಮೀನುಗಾರಿಕಾ ಸಚಿವರ ಉಪಸ್ಥಿತಿಯಲ್ಲಿ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
Advertisement
ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ ಉಪಸ್ಥಿತರಿದ್ದರು.
ಕುಂದಾಪುರದಲ್ಲಿ ಪ್ರಯೋಗಾಲಯಕುಂದಾಪುರ ಹಾಗೂ ಕಾರವಾರದಲ್ಲಿ ಪ್ರಯೋಗಾಲಯ ತೆರೆಯಲು ಮನವಿ ಸಲ್ಲಿಸಲಾಗಿದೆ. ಈಗಾಗಲೇ ಕಾರವಾರದಲ್ಲಿದ್ದ ಪ್ರಯೋಗಾಲಯ ಮುಚ್ಚಿದ್ದು ಸಿಗಡಿಮರಿಗಳನ್ನು ಕೊಳ್ಳುವಾಗ ಪರೀಕ್ಷಿಸಲು ಪ್ರಯೋಗಾಲಯದ ಅಗತ್ಯ ಇದೆ. ಸಿಗಡಿ ಬೆಳೆಗಾರರಿಗೆ 5 ಲಕ್ಷ ರೂ. ಸಬ್ಸಿಡಿ ದೊರೆಯುತ್ತದೆ. ಇತರೆಡೆಯಂತೆ ಸಿಗಡಿ ಕೃಷಿಕರಿಗೆ ವಿದ್ಯುತ್ ಬಿಲ್‌ನಲ್ಲಿ ರಿಯಾಯಿತಿ ನೀಡಲು ಮನವಿ ಮಾಡಲಾಗಿದೆ.
-ವಿಜಯ ಕುಮಾರ್, ಉಪನಿರ್ದೇಶಕರು ಕ್ಯಾನ್ಸರ್ ಕಾರಕ
ಆ್ಯಂಟಿಬಯೋಟಿಕ್ ಬಳಸಿದ ಸಿಗಡಿ ತಿಂದರೆ ಕ್ಯಾನ್ಸರ್ ಬರುತ್ತದೆ. ವಿದೇಶಗಳಿಗೆ ಕಳಿಸಿದ ಟನ್‌ಗಟ್ಟಲೆ ಸಿಗಡಿಯನ್ನು ಇದೇ ಕಾರಣದಿಂದ ಪರೀಕ್ಷಿಸಿ ತಿರಸ್ಕರಿಸಲಾಗುತ್ತಿದೆ. 2015ರಲ್ಲಿ ಯುರೋಪ್ ರಾಷ್ಟ್ರಗಳು 5, ಅಮೆರಿಕ 15, ಜಪಾನ್ 7, 2016ರಲ್ಲಿ ಯುರೋಪ್ 5, ಅಮೆರಿಕ 28, ಜಪಾನ್ 3, 2017ರಲ್ಲಿ ಯುರೋಪ್ 15, ಅಮೆರಿಕ 3, ಜಪಾನ್ 6, 2018ರಲ್ಲಿ ಯುರೋಪ್ 8, ಅಮೆರಿಕ 13, ಜಪಾನ್ 4, 2019ರಲ್ಲಿ ಮಾರ್ಚ್ ವರೆಗೆ ಯುರೋಪ್ 2, ಯುಎಸ್‌ಎ 1, ಜಪಾನ್ 2 ರಫ್ತುಗಳನ್ನು ತಿರಸ್ಕರಿಸಿವೆ. 2018ರಲ್ಲಿ ಒಟ್ಟು 52, 2019ರಲ್ಲಿ 6ನ್ನು ಅಮೆರಿಕ, ಯುರೋಪ್ ಕಳೆದ ವರ್ಷ 37, ಈ ವರ್ಷ 2 ರಫ್ತುಗಳನ್ನು ತಿರಸ್ಕರಿಸಿವೆ. ಇದೇ ಕಾರಣಕ್ಕಾಗಿ 2016-17ರಲ್ಲಿ ದೇಶದ 14, 2017-18ರಲ್ಲಿ 12 ಪ್ರಾಸೆಸಿಂಗ್ ಪ್ಲಾಂಟ್‌ಗಳನ್ನು ಬ್ಯಾನ್ ಮಾಡಲಾಗಿದೆ. ಇಡೀ ಪ್ರಪಂಚದ ಸಿಗಡಿ ಪೈಕಿ ತಿರಸ್ಕೃತವಾಗುವ ಶೇ.83 ಪ್ರಮಾಣ ಭಾರತದ್ದಾಗಿದೆ. ಆದ್ದರಿಂದ ಜಾಗರೂಕತೆ ತೀರಾ ಅಗತ್ಯ ಎಂದು ವಿಜಯಕುಮಾರ್ ಹೆಳಿದರು.