Advertisement

ಅಂತಾರಾಷ್ಟ್ರೀಯ ಹಣಕಾಸು ವಿಚಕ್ಷಣಾ ಪಡೆ : ಮತ್ತೂಮ್ಮೆ ಇಕ್ಕಟ್ಟಿನಲ್ಲಿ ಪಾಕಿಸ್ಥಾನ

10:04 AM Dec 23, 2019 | Team Udayavani |

ಹೊಸದಿಲ್ಲಿ: ತನ್ನ ನೆಲದಲ್ಲಿರುವ ಉಗ್ರವಾದಿ ಸಂಘಟನೆಗಳ ಮೇಲೆ ಕ್ರಮ ಕೈಗೊಂಡಿರುವುದಾಗಿ ಅಂತಾರಾಷ್ಟ್ರೀಯ ಹಣಕಾಸು ವಿಚಕ್ಷಣಾ ಪಡೆಗೆ (ಎಫ್ಎಟಿಎಫ್) ವರದಿ ಸಲ್ಲಿಸಿರುವ ಪಾಕಿಸ್ಥಾನಕ್ಕೆ 150 ಪ್ರಶ್ನೆಗಳನ್ನು ರವಾನಿಸಿರುವ ಎಫ್ಎಟಿಎಫ್, ಪಾಕ್‌ ಕೈಗೊಂಡಿರುವ ಕ್ರಮಗಳ ಬಗ್ಗೆ ಮತ್ತಷ್ಟು ವಿವರಣೆಗಳನ್ನು ಕೇಳಿದೆ. ತನ್ನ ಪ್ರಶ್ನೆಗಳಿಗೆ 2020ರ ಜ. 10ರೊಳಗೆ ಉತ್ತರಿಸುವಂತೆ ಗಡುವು ನೀಡಿದೆ.

Advertisement

ಉಗ್ರರಿಗೆ ಹಣಕಾಸು ನೆರವು ನೀಡುವ ಆರೋಪ ಹೊತ್ತಿರುವ ಪಾಕಿಸ್ಥಾನವನ್ನು ಗ್ರೇ ಲಿಸ್ಟ್‌ನಲ್ಲಿ ಇಟ್ಟಿರುವ ಎಫ್ಟಿಎಫ್, ಉಗ್ರರ ಧನ ಮೂಲಗಳನ್ನು ಮಟ್ಟ ಹಾಕದಿದ್ದಲ್ಲಿ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಈ ಹಿಂದೆಯೇ ಎಚ್ಚರಿಸಿ, 27 ಅಂಶದ ಕ್ರಮಗಳನ್ನು ಜಾರಿಗೊಳಿಸುವಂತೆ ಪಾಕಿಸ್ಥಾನಕ್ಕೆ ಸೂಚಿಸಿತ್ತು. ಅವುಗಳಲ್ಲಿ ಪಾಕಿಸ್ಥಾನ ಜಾರಿ ಮಾಡಿದ್ದು ಕೇವಲ 5 ಅಂಶ. ಹೀಗಾಗಿ, ಉಳಿದ 22 ಅಂಶಗಳನ್ನು 2020ರ ಜ. 8ರೊಳಗೆ ಜಾರಿ ಮಾಡಲೇಬೇಕು ಎಂದು ಇದೇ ಅಕ್ಟೋಬರ್‌ನಲ್ಲಿ ಎಫ್ಎಟಿಎಫ್ ಒತ್ತಾಯಿಸಿತ್ತು.

ಹಾಗಾಗಿ, ಪಾಕಿಸ್ಥಾನ, ಜಾಗತಿಕ ಉಗ್ರ ಹಾಗೂ ಮುಂಬಯಿ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್‌ ಹಾಗೂ ಇನ್ನಿತರ ಉಗ್ರರಿಗೆ ಸೇರಿದ ಮದರಸಾಗಳು, ಶಿಕ್ಷಣ ಹಾಗೂ ಧರ್ಮಾರ್ಥ ಸೇವಾ ಸಂಸ್ಥೆಗಳನ್ನು ವಶಕ್ಕೆ ಪಡೆದಿತ್ತು. ಅದರ ವರದಿಯನ್ನು ಡಿ. 6ರಂದು ಎಫ್ಎಟಿಎಫ್ಗೆ ರವಾನಿಸಿ, ಸಂಸ್ಥೆ ವಿಧಿ ಸಿದ್ದ 22 ಆಗ್ರಹಗಳನ್ನು ಈಡೇರಿಸಿರುವುದಾಗಿ ಹೇಳಿತ್ತು. ಆದರೆ, ಅಷ್ಟಕ್ಕೆ ತೃಪ್ತಿಯಾಗದ ಸಂಸ್ಥೆ, ಆ ಬಗ್ಗೆ ಮತ್ತಷ್ಟು ವಿವರಣೆ ಕೋರಿದೆ. ಜೊತೆಗೆ, ಹಫೀಜ್‌ಗೆ ಸೇರಿದ ಮದರಸಾಗಳ ಬಗ್ಗೆ ಕೈಗೊಳ್ಳಲಾದ ಕ್ರಮಗಳ ಸದ್ಯದ ಸ್ಥಿತಿಗತಿಗಳೇನು ಎಂಬುದನ್ನು ವಿಶೇಷವಾಗಿ ವಿವರಿಸುವಂತೆ ಸೂಚಿಸಿದೆ.

ಮುಂದೇನು?: ಮುಂದಿನ ತಿಂಗಳ 21ರಿಂದ 24ರವರೆಗೆ ಬೀಜಿಂಗ್‌ನಲ್ಲಿ ಜರುಗಲಿದೆ. ಅಲ್ಲಿ ಪಾಕಿಸ್ಥಾನ, ಸಂಸ್ಥೆಯ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಕಪ್ಪುಪಟ್ಟಿಗೆ ಸೇರಿಕೊಳ್ಳುವುದರಿಂದ 2020ರ ಜೂನ್‌ವರೆಗೆ ಬಚಾವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next