ಲಂಡನ್: ಕಂಡಕಂಡಲ್ಲೆಲ್ಲ ಮೂತ್ರ ವಿಸರ್ಜನೆ ಮಾಡುವುದು ಭಾರತದಲ್ಲೊಂದೇ ಸಮಸ್ಯೆಯಲ್ಲ…! ಜಗತ್ತಿನ ಅತ್ಯಂತ ಮುಂದುವರಿದ ದೇಶ ಇಂಗ್ಲೆಂಡ್ ರಾಜಧಾನಿ ಲಂಡನ್‌ನಲ್ಲೂ ಇದೆ. ಲಂಡನ್ ಕೇಂದ್ರ ಜಿಲ್ಲೆಯಲ್ಲಿನ ಸೊಹೊ ಉಪನಗರದಲ್ಲಿ ಇದೊಂದು ದೊಡ್ಡ ಸಮಸ್ಯೆ!
ಬೆಳಗ್ಗೆ ಎದ್ದು ಜನ ಮನೆ ಬಾಗಿಲು ತೆರೆದರೆ ಸಾಕು, ದುರ್ವಾಸನೆ. ಇನ್ನು ಸಾರ್ವಜನಿಕ ರಸ್ತೆಗಳಲ್ಲೂ ಇದೇ ಸ್ಥಿತಿ. ಇದಕ್ಕೆ ವೆಸ್ಟ್‌ಮಿನ್ಸರ್ ಆಡಳಿತ ಒಂದು ದಾರಿ ಕಂಡುಹಿಡಿದಿದೆ. ಗೋಡೆಗಳ ಮೇಲೆ ಒಂದು ರೀತಿಯ ಪೈಂಟ್ ಬಳಿದಿದೆ. ಪಾರದರ್ಶಕವೆಂಬಂತೆ ಕಾಣುವ ಅದರ ಮೇಲೆ ಮೂತ್ರ ವಿಸರ್ಜಿಸಿದರೆ, ಹನಿಗಳು ಹಿಂದಕ್ಕೆ ಸಿಡಿಯುತ್ತವೆ! ಇಂತಹದ್ದೊಂದು ಉಪಾಯವನ್ನು ಜರ್ಮನಿಯಲ್ಲೂ ಮಾಡಲಾಗಿದೆ. ಜೊತೆಗೆ ಒಂದು ಫಲಕವನ್ನು ತೂಗು ಹಾಕಲಾಗಿದೆ, ಅದರಲ್ಲಿ “ದಿಸ್ ವಾಲ್ ಈಸ್ ನಾಟ್ ಎ ಯೂರಿನಲ್. ದೇರ್ ಈಸ್ ಆ್ಯಂಟಿ ಪೀ ಪೈಂಟ್ ಇನ್ ದಿಸ್ ಏರಿಯಾ’ ಎಂದು ಬರೆಯಲಾಗಿದೆ. ಹೀಗಾದರೂ ಜನ ತಣ್ಣಗಾಗುತ್ತಾರಾ ಎಂಬ ನಿರೀಕ್ಷೆ ಸ್ಥಳೀಯ ಪಾಲಿಕೆಯದ್ದು!