Advertisement

ನೂರೇ ದಿನಕ್ಕೆ ರಾಜ್ಯ ಸರಕಾರಕ್ಕೆ ಆಡಳಿತ ವಿರೋಧಿ ಅಲೆ: ಅಶ್ವತ್ಥನಾರಾಯಣ

12:43 AM Apr 09, 2024 | Team Udayavani |

ಮಂಗಳೂರು: ಸಾಮಾನ್ಯವಾಗಿ ಯಾವುದೇ ಚುನಾಯಿತ ಸರಕಾರಕ್ಕೆ ನಾಲ್ಕು ವರ್ಷ ಪೂರೈಸಿದ ಬಳಿಕ ಆಡಳಿತ ವಿರೋಧಿ ಅಲೆ ಎದುರಾಗುತ್ತದೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ 100 ದಿನಗಳಿಗೇ ಈ ಸನ್ನಿವೇಶ ಎದುರಿಸುವಂತಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Advertisement

ಕಾಂಗ್ರೆಸ್‌ ನಾಯಕರಾದ ಬಿ.ಆರ್‌. ಪಾಟೀಲ್‌ ಹಾಗೂ ಬಸವರಾಜ ರಾಯ ರೆಡ್ಡಿ ಅವರೇ ರಾಜ್ಯ ಸರಕಾರದ ಕೆಲವು ಸಚ ಕಮಿಷನ್‌ ಕೇಳುತ್ತಿರುವ ಬಗ್ಗೆ ಹೈಕಮಾಂಡ್‌ಗೆ ಪತ್ರ ಬರೆದಿದ್ದರು. ಅಧಿಕಾರಿಗಳ ವರ್ಗಾವಣೆ ದಂಧೆ ಆರಂಭವಾಗಿದೆ ಎಂದು ಅವರ ಶಾಸಕರೇ ಆರೋಪಿಸುತ್ತಿದ್ದಾರೆ ಎಂದು ತಿಳಿಸಿದರು.

ಈಗ ಸಿದ್ದರಾಮಯ್ಯನವರಿಗೆ ಎರಡೇ ವಿಷಯ. ತಮ್ಮ ಸರಕಾರದ 5 ಗ್ಯಾರಂಟಿಗಳು ಹಾಗೂ ಕೇಂದ್ರ ಸರಕಾರ, ಮೋದಿ ವಿರುದ್ಧ ಮಾತನಾಡುವುದು. ಆದರೆ ರಾಜ್ಯ ಸರಕಾರವೇ ಕಿಸಾನ್‌ ಸಮ್ಮಾನ್‌ ಕಡಿತಗೊಳಿಸಿದೆ. ರೈತ ಮಕ್ಕಳಿಗೆ ಸ್ಕಾಲರ್‌ಶಿಪ್‌ ಸ್ಥಗಿತಗೊಳಿಸಿದೆ, ಆಡಳಿತ ಪಕ್ಷದ ಶಾಸಕರು ಅನುದಾನ ಬಿಡುಗಡೆಯಾಗುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಪಕ್ಷವೀಗ ನ್ಯಾಯಪಥ್‌ ಎಂಬ ಪ್ರಣಾಳಿಕೆ ಬಿಡುಗಡೆ ಮಾಡಿ, ಒಂದು ಅವಕಾಶ ಕೊಡಿ, ಬದಲಾವಣೆ ತರುತ್ತೇವೆ ಎನ್ನುತ್ತಿದೆ. ಆದರೆ ಈ ಪ್ರಣಾಳಿಕೆ ಅವರಧ್ದೋ ಅಥವಾ ಐಎನ್‌ಡಿಐಎ ವೇದಿಕೆಯಧ್ದೋ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಮೋದಿ ಯೋಜನೆ ಸ್ವೀಕಾರ:
50 ವರ್ಷದಲ್ಲಿ ಆಗದ ಕೆಲಸಗಳನ್ನು ಮೋದಿ ಸರಕಾರ ಮಾಡಿದೆ. ಐದೇ ವರ್ಷಗಳಲ್ಲಿ ಮೂಲಸೌಕರ್ಯಕ್ಕಾಗಿ 5 ಲಕ್ಷ ಕೋಟಿ ರೂ. ಖರ್ಚು ಮಾಡಿದ್ದು, ರಾಷ್ಟ್ರವು ಅಭಿವೃದ್ಧಿಯತ್ತ ಸಾಗಿದೆ. ಹಾಗಾಗಿ ಮೋದಿ ಸರಕಾರಕ್ಕೆ ಜನರ ಬೆಂಬಲ ಸಿಗಲಿದೆ ಎಂದರು.

Advertisement

ದಕ್ಷಿಣ ಕನ್ನಡ ಉಸ್ತುವಾರಿ ಕ್ಯಾ| ಗಣೇಶ್‌ ಕಾರ್ಣಿಕ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ದ.ಕ. ಚುನಾವಣ ಸಂಚಾಲಕ ನಿತಿನ್‌ ಕುಮಾರ್‌ ಉಪಸ್ಥಿತರಿದ್ದರು.

ಬೆಂಗಳೂರು ಗ್ರಾಮಾಂತರ
ಕಾಂಗ್ರೆಸ್‌ಗೆ ಮೊದಲ ಸೋಲು
ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ ಮೊದಲ ಸೋಲು ಅನುಭವಿಸಲಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ನಾನು ಬೆಂಗಳೂರು ಗ್ರಾಮಾಂತರದಿಂದ ಟಿಕೆಟ್‌ ಪಡೆದು ಸ್ಪರ್ಧಿಸಿದ್ದರೂ 6.71 ಲಕ್ಷ ಮತ ಪಡೆದಿದ್ದೆ, ಮೊದಲೇ ಟಿಕೆಟ್‌ ಸಿಕ್ಕಿದ್ದರೆ ಬಹುಶಃ ಗೆಲ್ಲಲು ಸಾಧ್ಯವಾಗುತ್ತಿತ್ತು ಎಂದು ಅಶ್ವತ್ಥನಾರಾಯಣ ಹೇಳಿದರು.

ರಾಜ್ಯದಲ್ಲಿ 25 ಸ್ಥಾನ ಬಿಜೆಪಿ ಹಾಗೂ 3 ಸ್ಥಾನ ಜೆಡಿಎಸ್‌ಗೆ ಸಿಗುವುದರಲ್ಲಿ ಸಂಶಯವೇ ಇಲ್ಲ. ಈಶ್ವರಪ್ಪ ಅವರಿಗೆ ಟಿಕೆಟ್‌ ಸಿಗದೆ ಬೇಸರವಾಗಿರಬಹುದು, ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next