Advertisement
2016 ಪರೀಕ್ಷೇಯಲ್ಲಿ ದೇಶಾದ್ಯಂತ 361ನೇ ರ್‍ಯಾಂಕ್ ಪಡೆಯುವುದೆಂದರೆ ಸಾಮಾನ್ಯವೇನಲ್ಲ. ಈ ವ್ಯಕ್ತಿ ಬೇರಾರು ಅಲ್ಲು ಇಂದು ಹೆಚ್ಚು ಚಿರಪರಿಚಿತರಾಗಿರುವ ಅನ್ಸರ್ ಶೇಕ್. ಇವರು ನಡೆದು ಬಂದ ದಾರಿ ಯುವಕರಿಗೆ ಸ್ಫೂರ್ತಿ ತುಂಬುವಂತದ್ದು.
Related Articles
Advertisement
ಆದರೆ ಇದಕ್ಕೆ ಬೇಕಾಗಿದ್ದ 70 ಸಾವಿರ ದುಡ್ಡು ಹೊಂದಿಸುವುದೇ ಕಷ್ಟವಾಗಿತ್ತು. ತರಬೇತಿ ಕೇಂದ್ರದ ಮುಖ್ಯಸ್ಥ ಅನ್ಸರ್‌ನಲ್ಲಿದ್ದ ಸಾಧಿಸುವ ಆಸಕ್ತಿ ಕಂಡು ಅರ್ಧದಷ್ಟು ರಿಯಾಯಿತಿಯೊಂದಿಗೆ ತರಗತಿಗೆ ಸೇರಿಸಿಕೊಂಡರು. ತರಬೇತಿ ಮುಂದುವರೆದಂತೆ ಹೆಚ್ಚು ಹೆಚ್ಚು ಇತರರೊಂದಿಗೆ ಚರ್ಚೆ, ಸಂವಾದದಲ್ಲಿ ತೊಡಗುತ್ತಿದ್ದ. ಅನ್ಸರ್ ಅವರ ಪ್ರಕಾರ ಸಂವಾದ, ಪ್ರಶ್ನಿಸುವ ಗುಣ ಯುಪಿಎಸ್ಸಿ ಆಕಾಂಕ್ಷಿಗಳಲ್ಲಿರಬೇಕಾದ ಒಂದು ಪ್ರಮುಖ ಅಂಶ.
ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡ ಹಾಗೆ ಎಷ್ಟೋ ಬಾರಿ ಊಟಕ್ಕೆ ಹಣವಿಲ್ಲದೇ ಕೇವಲ ಒಂದು ವಡಾಪಾವ್ ತಿಂದು ಇರುತ್ತಿದ್ದರಂತೆ. ದಿನಕ್ಕೆ 13 ಗಂಟೆಗಳು ಶೃದ್ಧೆಯಿಂದ ಅಭ್ಯಾಸ ಮಾಡುತ್ತಿದ್ದ ಈತ ಯಶಸ್ಸಿನ ಮೊದಲ ಹೆಜ್ಜೆಯಾಗಿ ಪ್ರಿಲಿಮ್ಸ್ ಪಾಸಾದ.
ಆದರೆ ಅದೇ ಸಮಯಕ್ಕೆ ಸಹೋದರಿಯ ಪತಿ ತೀರಿಕೊಳ್ಳುತ್ತಾರೆ. ಮನೆಯ ಬಡತನ ಇನ್ನೂ ಹಾಗೆ ಇತ್ತು ಇಂತ ಕಷ್ಟದ ಪರಿಸ್ಥಿತಿಯಲ್ಲೂ ಆತನ ಕುಟುಂಬ ಓದು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಅನಂತರ ತನ್ನ ಪರಿಶ್ರಮದ ಮೂಲಕ ಮುಖ್ಯ ಪರೀಕ್ಷೆಯನ್ನು ಪಾಸಾಗಿ, ಸಂದರ್ಶನವನ್ನೂ ಎದುರಿಸಲು ಸಜ್ಜಾದ. ಸಂದರ್ಶನವನ್ನು ಸಮರ್ಥ ಉತ್ತರಗಳ ಮೂಲಕ ಎದುರಿಸಿ 275ಕ್ಕೆ 199 ಅಂಕ ಪಡೆದಿರುವದು ಇವರ ಇನ್ನೊಂದು ಮಹತ್ವದ ಸಾಧನೆ.
ನಿಮ್ಮೊಂದಿಗಿರುವ ಲಕ್ಷಾಂತರ ವ್ಯಕ್ತಿಗಳನ್ನು ಎದುರಿಸಿ ಉತೀರ್ಣರಾಗಬೇಕು ಎಂದುಕೊಳ್ಳುವುದು ತಪ್ಪು. ನಿಮ್ಮ ಪರೀಕ್ಷೆ ಇರುವುದು ನಿಮ್ಮೊಂದಿಗೆ ಮಾತ್ರ. ಇದರಿಂದ ನಿಮ್ಮಲ್ಲಿರು ನಿರಾಶಾವಾದಿ ಭಾವನೆ, ಹಿಂಜರಿತಗಳನ್ನು ಹೊಗಲಾಡಿಸಲು ಸಾಧ್ಯವೆಂದು ಯುಪಿಎಸ್ಸಿ ಆಕಾಂಕ್ಸಿಗಳಿಗೆ ಅನ್ಸರ್ ಹೇಳುವ ಕಿವಿಮಾತಿದು.
ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ ಎನ್ನುವುದು ನೀವು ನೆನಪಿನಲ್ಲಿಡಬೇಕಾದ ಮೊದಲ ಅಂಶ. ನಿಮ್ಮ ಮನೆತನದ ಹಿನ್ನೆಲೆ, ನೀವು ಪಡೆಯುವ ಅಂಕಗಳು ನಿಮ್ಮ ಸಾಧನೆಯನ್ನು ನಿರ್ಧರಿಸಲಾರವು. ಸಾಧನೆಗೆ ಬೇಕಾಗಿರುವುದ ನಿಮ್ಮ ಗಟ್ಟಿ ನಿರ್ಧಾರ ಮತ್ತು ಪರಿಶ್ರಮ. ಬಡತನ, ಕೌಟುಂಬಿಕ ಸಮಸ್ಯೆ ಇನ್ನಿತರ ಕಾರಣಗಳು ಇವು ನಮಗೆ ನಾವು ಹಾಕಿಕೊಳ್ಳುವ ಹುಸಿ ಬೇಲಿಗಳಷ್ಟೇ. ಸಾಧನೆ ಮಾಡುವ ಚಲವಿದ್ದರೆ ಎಂತಹ ಅಡೆತಡೆಗಳಿದ್ದರೂ ಪುಡಿಗಟ್ಟುವ ಶಕ್ತಿ ನಿಮಗೆ ದೊರೆಯುತ್ತದೆ ಎನ್ನುವುದು ಅನ್ಸರ್ ಅವರನ್ನು ನೋಡಿ ತಿಳಿಯಬಹುದು.
– ಶಿವಾನಂದ ಎಚ್.