Advertisement

ಕಲಬುರಗಿಯ ಮತ್ತಿಬ್ಬರಿಗೆ ಕೋವಿಡ್19 ದೃಢ: ಟ್ರಾವೆಲ್ ಹಿಸ್ಟರಿ ಇಲ್ಲದ ವ್ಯಕ್ತಿಗೂ ಸೋಂಕು!

01:57 PM Apr 07, 2020 | keerthan |

ಕಲಬುರಗಿ: ಕೋವಿಡ್-19 ಸೋಂಕಿಗೆ ದೇಶದಲ್ಲೇ ಮೊದಲ ಬಲಿಯಾದ ಕಲಬುರಗಿ ಜಿಲ್ಲೆಯಲ್ಲಿ ಮತ್ತೆರಡು ಪ್ರಕರಣಗಳು ದೃಢ ಪಟ್ಟಿವೆ. ಓರ್ವ ಮಹಿಳೆ ಮತ್ತು ಪುರುಷನಿಗೆ ಕೋವಿಡ್-19 ಸೋಂಕು ‌ಪಾಸಿಟಿವ್ ಎಂದು ಪ್ರಯೋಗಾಲಯದ ವರದಿ ಬಂದಿದೆ.

Advertisement

ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಎ- ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಶಹಬಾದ್ ಪಟ್ಟಣದ ವ್ಯಕ್ತಿಯ ಸೊಸೆ  (28)ಗೆ ಕೋವಿಡ್-19 ಸೋಂಕು ಖಚಿತವಾಗಿದೆ.

ಕಲಬುರಗಿ ನಗರದ 57 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ. ಅಚ್ಚರಿ ಎಂದರೆ ಈ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ.‌ ಈತ‌ನ‌ ಮಾಹಿತಿ ಕಲೆ ಹಾಕಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಅತ್ತೆ ನಂತರ ಸೊಸೆಗೆ: ಶಹಾಬಾದ್ ಪಟ್ಟಣದ‌ ಪ್ರಕರಣವೂ ಅಚ್ಚರಿ‌ ಮೂಡಿಸುವಂತದ್ದಾಗಿದ್ದು, ದೆಹಲಿಯಲ್ಲಿ ತಬ್ಲಿಘಿ ಎ- ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ವ್ಯಕ್ತಿಗೆ ಕೋವಿಡ್-19 ನೆಗೆಟಿವ್ ಇದೆ.‌ ಆದರೆ, ಆತನ 60 ವರ್ಷದ ಪತ್ನಿಗೆ ಏ.2ರಂದು ಕೋವಿಡ್ -19 ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಈ ದಂಪತಿಯ ಸೊಸೆಗೆ ಸೋಂಕು ಹರಡಿದ್ದು, ಒಟ್ಟಾರೆ ಜಿಲ್ಲೆಯಲ್ಲಿ‌ ಕೋವಿಡ್-19 ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಜನತೆಯಲ್ಲೂ ಆತಂಕ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next