ನಟ ದುನಿಯಾ ವಿಜಯ್ ಅಭಿನಯದ “ಸಲಗ’ ಚಿತ್ರದ ಪ್ರಮೋಷನಲ್ ಸಾಂಗ್ “ಟಿಣಿಂಗ ಮಿಣಿಂಗ ಟಿಶ್ಯಾ..’ ಹಾಡು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ದು ನಿಮಗೆ ಗೊತ್ತಿರಬಹುದು. ಈ ಹಾಡಿನ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಗೀತಾ ಸಿದ್ದಿ ಮತ್ತು ಗಿರಿಜಾ ಸಿದ್ದಿ, ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು.
“ಸಲಗ’ ಚಿತ್ರದ ಬಳಿಕ ಇದೇ ಗೀತಾ ಸಿದ್ದಿ ಮತ್ತು ಗಿರಿಜಾ ಸಿದ್ದಿ ಸಹೋದರಿಯರು ಮತ್ತೂಂದು ಚಿತ್ರದ ವಿಶೇಷ ಹಾಡಿಗೆ ಧ್ವನಿಯಾಗುತ್ತಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅಭಿನಯದ “ಉಗ್ರಾವತಾರ’ ಚಿತ್ರದ ಪ್ರಮೋಷನಲ್ ಸಾಂಗ್‌ಗೆ ಗೀತಾ ಸಿದ್ದಿ ಹಾಗೂ ಗಿರಿಜಾ ಸಿದ್ದಿ ಧ್ವನಿಯಾಗಿದ್ದು, ಈ ಹಾಡಿಗೆ ಗಿರಿಜಾ ಸಿದ್ದಿ ಸಾಹಿತ್ಯವನ್ನೂ ಬರೆದಿದ್ದಾರೆ.
ಇದನ್ನೂ ಓದಿ:18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್- ಐಶ್ವರ್ಯಾ
“ಅಯ್ಯೋ ಮಾಜೋದೇವ, ಅಯ್ಯೋಯ್ಯೋ ಮಾಜೋದೇವ’ ಎಂಬ ಗೀತೆ ಇದಾಗಿದ್ದು, ಕನ್ನಡ, ಕೊಂಕಣಿ ಹಾಗೂ ಉರ್ದು ಮಿಶ್ರಿತ ಸಾಹಿತ್ಯ ಹಾಡಿನಲ್ಲಿದೆ. ರಾಧಾಕೃಷ್ಣ ಬಸ್ರೂರು ಈ ಗೀತೆಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.