Advertisement

ಸೋತ ಸರಣಿಯಲ್ಲಿ ಕಿವೀಸ್ ಗೆ ಮತ್ತೊಂದು ಅವಮಾನ

10:21 AM Feb 03, 2019 | |

ವೆಲ್ಲಿಂಗ್ಟನ್ : ಆತಿಥೇಯ ನ್ಯೂಜಿಲ್ಯಾಂಡ್ ಭಾರತದ ವಿರುದ್ಧ ಸರಣಿ ಸೋತು ಅವಮಾನ ಅನುಭವಿಸಿದೆ. ಸುಮಾರು15 ವರ್ಷಗಳ ನಂತರ ಕಿವೀಸ್ ತವರಿನಲ್ಲಿ ಏಕದಿನ ಸರಣಿ ಸೋತಿದೆ. ಇದರೊಂದಿಗೆ ಮತ್ತೊಂದು ಕೆಟ್ಟ ದಾಖಲೆ ನ್ಯೂಜಿಲ್ಯಾಂಡ್ ಹೆಸರಿಗೆ ಅಂಟಿದೆ. 

Advertisement

ವಿಲಿಯಮ್ಸನ್ ಪಡೆ ಈ ಸರಣಿಯಲ್ಲಿ ಆಡಿದ ಒಂದೂ ಪಂದ್ಯದಲ್ಲೂ ಪೂರ್ತಿ 50 ಓವರ್ ಆಡಿಲ್ಲ. ಮೊದಲ ಮೂರು ಪಂದ್ಯದಲ್ಲಿ ನಿಗದಿತ ಓವರ್ ನ ಒಳಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿದ್ದರೆ, ನಾಲ್ಕನೇ ಪಂದ್ಯದಲ್ಲಿ 15 ಓವರ್ ಒಳಗೆ ಗುರಿ ತಲುಪಿ ಪಂದ್ಯ ಗೆದ್ದಿತ್ತು. ಅಂತಿಮ ಏಕದಿನ ಪಂದ್ಯದಲ್ಲೂ45ನೇ ಓವರ್ ನಲ್ಲಿ ಆಲ್ ಔಟ್ ಆಗಿ ಮುಖಭಂಗ ಅನುಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next