Advertisement

ಬರುತ್ತಿದೆ ಮತ್ತೂಂದು ರಾಜಾಹುಲಿ

04:27 PM Nov 24, 2022 | Team Udayavani |

‘ರಾಜಾಹುಲಿ’- ಇದು ಯಶ್‌ ನಟನೆಯ ಹಿಟ್‌ ಸಿನಿಮಾ. 2013ರಲ್ಲಿ ತೆರೆಕಂಡ ಈ ಚಿತ್ರವನ್ನು ಗುರುದೇಶಪಾಂಡೆ ನಿರ್ದೇಶಿಸಿದ್ದರು.

Advertisement

ಈಗ ಇದೇ ಹೆಸರಿನಡಿ ಮತ್ತೂಂದು ಸಿನಿಮಾ ತಯಾರಾಗುತ್ತಿದೆ. ಹೊನ್ನರಾಜ್‌ ನಿರ್ದೇಶನದಲ್ಲಿ “ಮಿಸ್ಟರ್‌ ಅಂಡ್‌ ಮಿಸಸ್‌ ರಾಜಾಹುಲಿ’ ಎಂಬ ಚಿತ್ರವೊಂದು ಸಿದ್ಧವಾಗುತ್ತಿದೆ. ಇತ್ತೀಚೆಗೆ ಚಿತ್ರದ ಟೈಟಲ್‌ ಹಾಗೂ ಬ್ಯಾನರ್‌ ಲಾಂಚ್‌ ಕಾರ್ಯಕ್ರಮ ನಡೆಯಿತು. ಶ್ರೀ ಸತ್ಯಲಕ್ಷ್ಮೀ ಕ್ರಿಯೇಶನ್ಸ್‌ನಡಿ ಈ ಚಿತ್ರ ತಯಾರಾಗುತ್ತಿದೆ.

ಇತ್ತೀಚೆಗೆ ನಡೆದ ಟೈಟಲ್‌ ಲಾಂಚ್‌ಗೆ ಕನ್ನಡ ಚಿತ್ರರಂಗದ ಐವರು ನಿರ್ದೇಶಕರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಹಾಜರಿದ್ದು, ಶುಭಕೋರಿದರು.

ಸುಜಯ್‌ ಶ್ರೀನಿವಾಸ್‌ ಈ ಚಿತ್ರದ ನಿರ್ಮಾಪಕರು. “ಇದು ಆ್ಯಕ್ಷನ್‌ ಜೊತೆಗೆ ಫ್ಯಾಮಿಲಿ ಡ್ರಾಮಾ ಚಿತ್ರ’ ಎನ್ನುವುದು ನಿರ್ದೇಶಕರ ಮಾತು. ನಾಯಕ, ನಾಯಕಿ ಹಾಗೂ ಇತರ ವಿವರಗಳನ್ನು ಚಿತ್ರತಂಡ ಸದ್ಯ ಗೌಪ್ಯವಾಗಿಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next