Advertisement
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ,ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂದು 27 ವರ್ಷದಿಂದ ಹಕ್ಕೊತ್ತಾಯ ಮಾಡುತ್ತಲೇ ಬಂದಿದೆ. ಕಳೆದ ಒಂದು ವರ್ಷ ಆರು ತಿಂಗಳಿಂದ ನಿರಂತರ ಹೋರಾಟ ನಡೆಸಿದೆ. ಕಳೆದ ವರ್ಷ ಪಾದಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದೇವೆ. ನಾವು ಬೆಂಗಳೂರಲ್ಲಿ ಧರಣಿ ನಡೆಸಿದಾಗ ಸರ್ಕಾರ ಆಯೋಗಕ್ಕೆ ವರದಿ ಕೊಡಲು ಶಿಫಾರಸ್ಸು ಮಾಡಿತ್ತು. ವರದಿ ಬಂದ ಬಳಿಕ ಮೀಸಾಲತಿ ಕೊಡಿವ ಭರವಸೆ ನೀಡಿತ್ತು. ಆದರೆ ನಿರಂತರ ಹೋರಾಟ, ಧರಣಿ ನಡೆಸಿದಾಗ ಸರ್ಕಾರ ಕಾಲವಕಾಶ ಕೇಳಿತ್ತು. ಸರ್ಕಾರವೇ ಕಳೆದ ವರ್ಷ ಸೆ.15 ರೊಳಗೆ ಮೀಸಲಾತಿ ಕೊಡುವ ಮಾತು ಕೊಟ್ಟಿತ್ತು. ಆದರೂ ಕೊಡಲಿಲ್ಲ. ಮತ್ತೆ ನಾವು ಸರ್ಕಾರಕ್ಕೆ ಗಡುವು ನೀಡಿದೆವು. ಸಿಎಂ ಬದಲಾದ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಮತ್ತೆ ಮೂರು ತಿಂಗಳ ಕಾಲವಕಾಶ ಕೇಳಿ, ಬಜೆಟ್ ಒಳಗಾಗಿ ಮೀಸಲು ಕೊಡುವು ಮಾತನ್ನಾಡಿತ್ತು. ಸರ್ಕಾರ ಮತ್ತೆ ಮಾತು ತಪ್ಪಿದೆ ಎಂದರು.
Related Articles
Advertisement
ರಾಜ್ಯದಲ್ಲಿ ಅನುದಾನ ಕೊಡುವ ವಿಚಾರದಲ್ಲಿ ಕಮಿಷನ್ ಕೊಡುವ ವಿಷಯ ನನಗೆ ಗೊತ್ತಿಲ್ಲ. ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ನಮಗೆ ಅನುದಾನ ಕೊಟ್ಟಿದ್ದರು, ಆಗ ಕಮಿಷನ್ ಕೊಟ್ಟಿಲ್ಲ. ಆದರೆ ನಮಗೆ ಮೀಸಲಾತಿ ಕೊಡಿ ಎಂದು ಹೇಳಿ ಅನುದಾನ ವಾಪಾಸ್ ಕೊಟ್ಟಿದ್ದೇವೆ ಎಂದರು.
ನಿರಾಣಿ ಹೋರಾಟಕ್ಕೆ ಬರಲಿ: ಮೀಸಲಾತಿ ವಿಚಾರದಲ್ಲಿ ನಿರಾಣಿ ಹೋರಾಟಕ್ಕೆ ಬರಲಿ. ಕೆಲವು ಗುರು ಶಿಷ್ಯರ ನಡುವೆ ಜಗಳ ಇರ್ತಾವೆ. ಅವರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರಲ್ಲದೇ ಕರ್ನಾಟಕ ಸರ್ವ ಜನಾಂಗದ ತೋಟವಾಗಿದೆ. ಎಲ್ಲದರಲ್ಲೂ ಕೆಟ್ಟವರು ಇರುವುದು ಸಹಜ. ಇದರಲ್ಲಿ ಅಮಾಯಕರಿಗೆ ಅನ್ಯಾಯ ಆಗದಿರಲಿ ಎಂದರು.