Advertisement

ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ: ಅನುಮಾನಾಸ್ಪದ ವಸ್ತುಗಳು ಪತ್ತೆ

11:03 AM Nov 29, 2022 | Team Udayavani |

ಪಂಜಾಬ್: ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಗಡಿ ಭದ್ರತಾ ಪಡೆ ಪಾಕಿಸ್ತಾನದಿಂದ ಭಾರತದೊಳಗೆ ನುಸುಳಲು ಯತ್ನಿಸಿದ ಮತ್ತೊಂದು ಡ್ರೋನ್ ಅನ್ನು ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ಹೊಡೆದುರುಳಿಸಿದೆ.

Advertisement

ಈ ಹಿಂದೆಯೂ ಭಾರತದ ಗಡಿಯೊಳಗೆ ಬಂದಿದ್ದ ಪಾಕಿಸ್ತಾನದ ಕೆಲವು ಡ್ರೋನ್ ಗಳನ್ನು ಭದ್ರತಾ ಪಡೆ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.

ಪಂಜಾಬ್‌ನ ಅಮೃತಸರದ ಚಹರ್‌ಪುರ್ ಗ್ರಾಮದ ಬಳಿ ಪಾಕ್ ಡ್ರೋನ್ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿರುವುದನ್ನು ಗಮನಿಸಿದ ಸೇನಾ ಪಡೆ ಗುಂಡು ಹಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಕಾರ್ಯಾಚರಣೆ ಸಮಯದಲ್ಲಿ, ಬಿಎಸ್ಎಫ್ ಒಂದು ಹೆಕ್ಸಾಕಾಪ್ಟರ್ ಅನ್ನು ಭಾಗಶಃ ಹಾನಿಗೊಳಗಾದ ಸ್ಥಿತಿಯಲ್ಲಿ ವಶಪಡಿಸಿಕೊಂಡಿತು ಮತ್ತು ಅದರ ಕೆಳಗೆ ಜೋಡಿಸಲಾದ ಬಿಳಿ-ಬಣ್ಣದ ಪಾಲಿಥಿನ್‌ನಲ್ಲಿ ಶಂಕಿತ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದೊಳಗೆ ಕಳ್ಳ ಸಾಗಣೆಗೆ ಪ್ರಯತ್ನಿಸಿದ ಡ್ರೋನ್ ಪತ್ತೆ ಹಚ್ಚುವಲ್ಲಿ ಬಿಎಸ್ ಎಫ್ ಮತ್ತೊಮ್ಮೆ ಯಶಸ್ವಿಯಾಗಿದೆ ಎಂದು ಸೇನಾಪಡೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಕ್ರೂಸ್‌ ಪ್ರವಾಸೋದ್ಯಮಕ್ಕೆ ಕಳೆ: 271 ಪ್ರವಾಸಿಗರನ್ನು ಹೊತ್ತ ಹಡಗು ಮಂಗಳೂರಿಗೆ

Advertisement
Advertisement

Udayavani is now on Telegram. Click here to join our channel and stay updated with the latest news.

Next