ನಿಂತಿದ್ದ ಲಾರಿಗೆ ಗುದ್ದಿದ ಮತ್ತೊಂದು ಲಾರಿ: ಚಾಲಕರಿಬ್ಬರು ಸ್ಥಳದಲ್ಲೇ ಸಾವು
Team Udayavani, Oct 24, 2019, 9:40 AM IST
ತುಮಕೂರು: ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಬಂದು ಗುದ್ದಿದ ಪರಿಣಾಮ ಎರಡೂ ಲಾರಿಗಳ ಚಾಲಕರು ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ.
ಶಿರಾ ತಾಲೂಕಿನ ದೊಡ್ಡ ಆಲದ ಮರದ ಬಳಿ ಬೆಳ್ಳಂಬೆಳಗ್ಗೆ ಅಪಘಾತ ನಡೆದಿದೆ. ಲಾರಿಯೊಂದು ರಿಪೇರಿಯಾಗಿ ನಿಂತಿದ್ದ ವೇಳೆ ಮತ್ತೊಂದು ಲಾರಿ ಬಂದು ಡಿಕ್ಕಿಯಾಗಿದೆ. ಇಬ್ಬರೂ ಚಾಲಕರೂ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರ ಗಾಯಗಳಾಗಿವೆ,
ಗಾಯಗೊಂಡವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳಬೆಳ್ಳಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.