ರಾಮನಗರ : ಸಾಹಿತಿ ಹಾಗೂ ಚಿಂತಕ ಬಂಜಗೆರೆ ಜಯಪ್ರಕಾಶ್ ಅವರಿಗೆ ಅನಾಮಿಕ ಜೀವ ಬೆದರಿಕೆ ಪತ್ರವೊಂದು ಇಂದು (ಗುರುವಾರ) ಕೈ ಸೇರಿದೆ.
ಪತ್ರದ ಬಗ್ಗೆ ಬಂಜಗೆರೆ ಜಯಪ್ರಕಾಶ್ ಅವರು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಅವರು ನೀಡಿದ್ದ ಹೇಳಿಕೆಗಾಗಿ ಜೀವ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ಜುಲೈನಲ್ಲಿ ಸಹ ಜೀವ ಬೆದರಿಕೆ ಪತ್ರ ಬರೆಯಲಾಗಿತ್ತು. ಅಂದೂ ಕೂಡ ಹಾರೋಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಹಿಂದಿನ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ, ಮತ್ತೊಂದು ಬೆದರಿಕೆ ಪತ್ರ ಬಂದಿದ್ದು, ಈಗಿನ ಪತ್ರದ ಮೂಲದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಜ್ಯದಲ್ಲಿ ಕಂಪನ ಆಡಳಿತ ಪ್ರಾರಂಭವಾಗಿದೆ.ಹಿಂದೂ ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರ.ನಿಮ್ಮಂತಹವರಿಗೆ, ದುರ್ಜನ, ದೇಶ ದ್ರೋಹಿಗಳಿಗೆ.ಮತಾಂದ, ಮುಸ್ಲಿಂ, ಮತಾಂತರಿ ಕ್ರೈಸ್ತರಿಗೆ ಪ್ರಿಯ ಸರ್ಕಾರ. ಉರಿಯಿರಿ ಮಕ್ಕಳ ಉರಿಯಿರಿ…ನಿಮ್ಮ ಜೀವ ಎಂಬ ಅಜ್ಞಾನದ ದೀಪ ಆರುವುದು ನಿಶ್ಚಿತ ನಿಶ್ಚಿತ..ಎಂದು ಅನಾಮಿಕ ಪತ್ರದಲ್ಲಿ ಬರೆಯಲಾಗಿದೆ.