Advertisement

26ರಂದು ಮತ್ತೊಂದು ಉದ್ಯೋಗ ಮೇಳ

01:27 PM Feb 21, 2017 | Team Udayavani |

ಧಾರವಾಡ: ಉದ್ಯೋಗ ಮೇಳದಿಂದ ಉತ್ತಮ ಸ್ಪಂದನೆ ದೊರಕಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೆ ಫೆ.26ರಂದು ವಿದ್ಯಾಗಿರಿಯ ಜೆಎಸ್‌ಎಸ್‌ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾ  ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. 

Advertisement

ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಬಳಿಕ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗವನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಮಾಡಲಾದ ಉದ್ಯೋಗ ಉತ್ಸವ ಹಾಗೂ ಮಿನಿ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. 

ಅದರಲ್ಲೂ ಉದ್ಯೋಗ ಉತ್ಸವದಲ್ಲಿ ಭಾಗವಹಿಸಿದ 45 ಸಾವಿರ ಅಭ್ಯರ್ಥಿಗಳ ಪೈಕಿ 17 ಸಾವಿರ ಜನರಿಗೆ ಉದ್ಯೋಗ ನೀಡುವಲ್ಲಿ ಮೇಳ ಯಶಸ್ವಿಯಾಗಿದೆ.ಆದರೆ 9 ಸಾವಿರ ಜನರಷ್ಟೇ ಆ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ ಎಂದರು.  

ಈ ಹಿಂದಿನ ಮೇಳದಲ್ಲಿ ಆಗಿರುವ ಲೋಪದೋಷಗಳು ಪುನರಾವರ್ತನೆ ಆಗದಂತೆ ನಿರುದ್ಯೋಗ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಒದಗಿಸುವ ನಿಟ್ಟಿನಲ್ಲಿ ಫೆ.26ರಂದು ಜೆಎಸ್‌ಎಸ್‌ ಕಾಲೇಜು ಆವರಣದಲ್ಲಿ ಈಗ ಮತ್ತೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈಗಾಗಲೇ 50ಕ್ಕೂ ಹೆಚ್ಚು ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, ಇದರೊಂದಿಗೆ ಸ್ಥಳೀಯ ಕಂಪನಿಗಳು ಭಾಗವಹಿಸಲಿವೆ ಎಂದರು. 

ಸ್ಥಳೀಯರಿಗೆ ಆದ್ಯತೆ: ಸ್ಥಳೀಯ ಕಂಪನಿಗಳು ಸ್ಥಳೀಯರಿಗೆ ಆದ್ಯತೆ ನೀಡುವಂತೆ ಈಗಾಗಲೇ ಮನವಿ ಮಾಡಿದ್ದು, ಅದಕ್ಕಾಗಿ ಸ್ಥಳೀಯ ಕಂಪನಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಹೀಗಾಗಿ ಈ ಮೇಳದಲ್ಲಿ 2-3 ಸಾವಿರ ಉದ್ಯೋಗ ಅವಕಾಶ ಸ್ಥಳೀಯರಿಗೆ ಸಿಗುವ ನಿರೀಕ್ಷೆ ಇದೆ.

Advertisement

ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೋಮಾ ಹಾಗೂ ಎಲ್ಲ ಪದವೀಧರರು ಭಾಗವಹಿಸಬಹುದು. ಆಸಕ್ತರು ಇಲ್ಲಿನ ಅಂಬೇಡ್ಕರ ಭವನದಲ್ಲಿನ ವಿದ್ಯಾ ಸ್ನೇಹಿ ಸಂಪರ್ಕ ಕೇಂದ್ರ(18004255540) ಸಂಪರ್ಕಿಸುವ ಮೂಲಕ ಉಚಿತವಾಗಿ ಹೆಸರು ನೋಂದಾಯಿಸಬಹುದು ಎಂದರು. 

ವೈಶುದೀಪ ಪ್ರತಿಷ್ಠಾನ, ಜನತಾ ಶಿಕ್ಷಣ ಸಮಿತಿ, ಉದ್ಯೋಗ ಮತ್ತು ತರಬೇತಿ ಇಲಾಖೆ ಸಹಯೋಗದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಈ ಬಾರಿಯ ಮೇಳದಲ್ಲಿ  ತಮ್ಮ ವಿದ್ಯಾರ್ಹತೆಗೆ ತಕ್ಕ ಕಂಪನಿಗಳಿಗೆ ಮಾತ್ರ ಉದ್ಯೋಗ ನೀಡುವಂತೆ ವಿದ್ಯಾರ್ಥಿ ಸಮೂಹಕ್ಕೆ ನೀಡುವಂತೆ ತಿಳಿಸಲಾಗುವುದು ಎಂದರು. 

ಈ ಬಾರಿಯ ಉದ್ಯೋಗದಲ್ಲಿ ನಿರುದ್ಯೋಗಿಗಳಿಗೆ ಮಾತ್ರ ಅವಕಾಶವಿದೆ. ಈಗಾಗಲೇ ಕೆಲಸ ಮಾಡುತ್ತಿರುವವರು ಹೆಚ್ಚಿನ ವೇತನಕ್ಕಾಗಿ ಮೇಳದಲ್ಲಿ ಭಾಗವಹಿಸುತ್ತಾರೆ. ಅಂಥವರಿಗೆ ಅವಕಾಶ ನೀಡಲಾಗುವುದಿಲ್ಲ. ಮೇಳದಲ್ಲಿ ಸುಮಾರು 3-4 ಸಾವಿರ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವಂತಾಗಬೇಕು ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next