Advertisement

Bangladesh: ಬಾಂಗ್ಲಾದಲ್ಲಿ ಮತ್ತೊಂದು ಇಸ್ಕಾನ್ ದೇವಾಲಯದ ಮೇಲೆ ದಾಳಿ… ವಿಗ್ರಹಕ್ಕೆ ಹಾನಿ

03:45 PM Dec 07, 2024 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಮುಂದುರೆದಿದ್ದು ಇದೀಗ ಢಾಕಾ ದಲ್ಲಿರುವ ಮತ್ತೊಂದು ಇಸ್ಕಾನ್ ದೇವಾಲಯದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ದೇವಾಲಯದಲ್ಲಿರುವ ಮೂರ್ತಿಯನ್ನು ವಿರೂಪಗೊಳಿಸಿರುವುದಾಗಿ ಹೇಳಲಾಗಿದೆ.

Advertisement

ಹಿಂದೂ ಸಮುದಾಯವನ್ನೇ ಗುರಿಯಾಗಿಸಿ ಗುಂಪು ದಾಳಿ ನಡೆಸುತ್ತಿದ್ದು ಶುಕ್ರವಾರ ತಡರಾತ್ರಿ ಸುಮಾರು 2-3 ಗಂಟೆಯ ಸುಮಾರಿಗೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿ ದೇವಳದೊಳಗಿರುವ ಲಕ್ಷ್ಮೀ ನಾರಾಯಣ ದೇವರ ವಿಗ್ರಹವನ್ನು ವಿರೂಪಗೊಳಿಸಿ ದೇವಸ್ಥಾನದೊಳಗಿರುವ ವಸ್ತುಗಳಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ್ದಾರೆ ಎಂದು ಇಸ್ಕಾನ್‌ನ ಕೋಲ್ಕತ್ತಾದ ಉಪಾಧ್ಯಕ್ಷ ರಾಧರಮನ್ ದಾಸ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

 

ಒಂದು ವಾರದ ಹಿಂದೆ ಬಾಂಗ್ಲಾದ ಭೈರಬ್ ನಲ್ಲಿರುವ ಇಸ್ಕಾನ್ ದೇಗುಲದ ಮೇಲೆ ದಾಳಿ ದೇಗುಲವನ್ನು ಹಾಳುಗೆಡವಲಾಗಿತ್ತು ಇದೀಗ ಢಾಕಾದಲ್ಲಿರುವ ಮತ್ತೊಂದು ದೇವಸ್ಥಾನದ ಮೇಲೆ ದಾಳಿ ನಡೆಸಿ ದೇವರ ವಿಗ್ರಹವನ್ನು ವಿರೂಪಗೊಳಿಸಿ ದೇವಳದ ಒಳಗೆ ಬೆಂಕಿ ಕೃತ್ಯ ಎಸಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next