Advertisement

ಚುಚ್ಚುಮದ್ದಿಗೆ ಮತ್ತೂಂದು ಹಸುಗೂಸು ಬಲಿ

06:00 AM Apr 07, 2018 | Team Udayavani |

ಮಂಡ್ಯ: ಪೆಂಟಾವಲೆಂಟ್‌ ಚುಚ್ಚುಮದ್ದು ಹಾಕಿಸಿದ ಹೆಣ್ಣು ಶಿಶುವೊಂದು ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ತಾಲೂಕಿನ ಸೂನಗಹಳ್ಳಿಯಲ್ಲಿ ನಡೆದಿದೆ. ಎರಡು ತಿಂಗಳ ಹಿಂದಷ್ಟೇ ಇದೇ ಚುಚ್ಚುಮದ್ದಿನಿಂದ ಮೂರು ಹಸುಗೂಸು ಸಾವನ್ನಪ್ಪಿದ್ದವು. ಇದೀಗ ಮತ್ತೂಂದು ಶಿಶು ಮೃತಪಟ್ಟಿದ್ದು, ಜಿಲ್ಲೆಯ ಜನರಲ್ಲಿ ಮತ್ತೆ ಚುಚ್ಚುಮದ್ದಿನ ಬಗ್ಗೆ ಆತಂಕ ಹೆಚ್ಚುವಂತೆ ಮಾಡಿದೆ.

Advertisement

ತಾಲೂಕಿನ ಸೂನಗಹಳ್ಳಿಯ ಶಿಲ್ಪಾ ಮತ್ತು ನಂದೀಶ್‌ ದಂಪತಿಯ ಎರಡೂವರೆ ತಿಂಗಳ ಹೆಣ್ಣು ಶಿಶು ಸಾವನ್ನಪ್ಪಿದೆ. ಶಿಲ್ಪಾ ಜನವರಿ 31ರಂದು ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದರು. ಮಗುವಿಗೆ ಒಂದೂವರೆ ತಿಂಗಳಿದ್ದಾಗ ಪೆಂಟಾವಲೆಂಟ್‌ ಚುಚ್ಚುಮದ್ದಿಗೆ ಕರೆತಂದಿದ್ದರು. ಆದರೆ, ಕೆಮ್ಮು ಇದ್ದ ಕಾರಣ ಚುಚ್ಚುಮದ್ದು ಹಾಕುವುದನ್ನು ಮುಂದೂಡಲಾಗಿತ್ತು. ಗುರುವಾರ ಸೂನಗಹಳ್ಳಿಗೆ ಮಗುವಿನೊಂದಿಗೆ ತೆರಳಿದ ಶಿಲ್ಪಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೆಂಟಾವಲೆಂಟ್‌ ಚುಚ್ಚುಮದ್ದು ಹಾಕಿಸಿದ್ದರು. ಶುಕ್ರವಾರ ಬೆಳಗ್ಗೆ ಮಗುವಿಗೆ ಫಿಟ್ಸ್‌ ಬಂದಂತಾಗಿದೆ. ಇದರಿಂದ ಹೆದರಿದ ಶಿಲ್ಪಾ  ಮಗುವನ್ನು ಮತ್ತೆ ಸೂನಗಹಳ್ಳಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಚಿಕಿತ್ಸೆಗಾಗಿ ಕರೆತರುವ ಸಮಯದಲ್ಲಿ ಮಾರ್ಗ ಮಧ್ಯೆ ಮಗು ಕೊನೆಯುಸಿರೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next