ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯರ ಹತ್ಯೆ ಮುಂದುವರಿದಿದ್ದು, ಇದೀಗ 20 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದ್ದು, ಇದು ಕೊಲೆ ಎಂದು ಕುಟುಂಬ ಸದಸ್ಯರು ಆರೋಪಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬುರ್ರಿಪಾಳೆಂ ನಿವಾಸಿ ಅಭಿಜಿತ್ ಪರುಚೂರು ಬೋಸ್ಟನ್ ವಿಶ್ವಿವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ. ಪೋಷಕರಾದ ಪರುಚೂರಿ ಚಕ್ರಧರ್ ಮತ್ತು ಶ್ರೀಲಕ್ಷ್ಮೀ ಬೋರುನಾ ಕನೆಕ್ಟಿಕಟ್ ನಲ್ಲಿ ನೆಲೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಷಕರ ಮಾಹಿತಿ ಪ್ರಕಾರ, ಮಾರ್ಚ್ 11ರಂದು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಅಪರಿಚಿತ ವ್ಯಕ್ತಿಗಳು ಅಭಿಜಿತ್ ನನ್ನು ಹತ್ಯೆಗೈದು ಶವವನ್ನು ಕಾರಿನಲ್ಲಿಟ್ಟು ಕಾಡಿನಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ.
ಗೆಳೆಯರ ದೂರಿನ ಆಧಾರದ ಮೇಲೆ ಮೊಬೈಲ್ ಫೋನ್ ಸಿಗ್ನಲ್ಸ್ ಪತ್ತೆಯೊಂದಿಗೆ ಶವದ ಗುರುತು ಹಿಡಿಯಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ನ್ಯೂಯಾರ್ಕ್ ನಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಅಧಿಕಾರಿಗಳ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ಅಂಶವನ್ನು ತಳ್ಳಿಹಾಕಿದೆ.
ಅಭಿಜಿತ್ ಪೋಷಕರು ಡಿಟೆಕ್ಟೀವ್ ಗಳ ಜತೆ ನೇರ ಸಂಪರ್ಕದಲ್ಲಿದ್ದು, ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.