Advertisement
ಋಷ್ಯಗಂಗಾ ಸಮೀಪ ಹಠಾತ್ ಸರೋವರವೊಂದು ನಿರ್ಮಾಣವಾಗಿದ್ದು, ಸ್ಫೋಟಗೊಳ್ಳುವ ಆತಂಕ ಎದುರಾಗಿದೆ. ಇದರಿಂದ ಮತ್ತೂಂದು ಪ್ರವಾಹ ಎದುರಾಗಬಹುದಾಗಿದ್ದು, ಈಗ ನಡೆಯುತ್ತಿರುವ ರಕ್ಷಣ ಕಾರ್ಯಾಚರಣೆಗೂ ಅಡ್ಡಿಯಾಗುವ ಭೀತಿ ಇದೆ ಎಂದು ಹೇಮವತಿ ನಂದನ್ ಬಹುಗುಣ ಘರ್ವಾಲ್ ವಿಶ್ವವಿದ್ಯಾನಿಲಯ (ಎಚ್‌ಎನ್‌ಬಿಜಿಯು)ದ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
Related Articles
Advertisement
ಈ ಸರೋವರ ಪತ್ತೆಯಾಗಿರುವುದು ಗ್ರಾಮಸ್ಥರಿಂದ. ಋಷ್ಯಗಂಗಾ ನದಿ ಹರಿಯುವ ಜಾಗದಲ್ಲಿ ಇದು ನಿರ್ಮಾಣವಾಗಿದೆ. ನದಿಯ ಹರಿವಿಗೆ ಅವಶೇಷಗಳು ಅಡ್ಡಬಂದಿದ್ದು, ನೀರು ಸಂಗ್ರಹವಾಗುತ್ತಿದೆ. ನೀರು ಹೆಚ್ಚಾದಾಗ ಅಡ್ಡಲಾಗಿರುವ ಅವಶೇಷಗಳನ್ನು ಮುರಿದು ಒಮ್ಮೆಲೇ ನೀರು ನುಗ್ಗಬಹುದು. ಆಗ ಮತ್ತೆ ಪ್ರವಾಹ ಉಂಟಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಮತ್ತೆರಡು ಮೃತದೇಹ ಪತ್ತೆ :
ಚಮೋಲಿಯಲ್ಲಿ ಮತ್ತೆ ಎರಡು ಮೃತದೇಹಗಳು ಪತ್ತೆಯಾಗುವುದರ ಮೂಲಕ ಒಟ್ಟು 38 ಮಂದಿ ಅಸುನೀಗಿರುವುದು ಖಚಿತವಾಗಿದೆ. ಎನ್‌ಟಿಪಿಸಿಯ ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದ ಸುರಂಗದಲ್ಲಿ ಇನ್ನೂ 25-35 ಮಂದಿ ಸಿಕ್ಕಿ ಹಾಕಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ತಪೋವನದಲ್ಲಿ ಸುರಂಗ ಮಾರ್ಗಕ್ಕೆ ಪರ್ಯಾಯವಾಗಿ ರಸ್ತೆ ನಿರ್ಮಾಣವೂ ಬಿರುಸಾಗಿ ಸಾಗಿದೆ. ಇನ್ನೂ 170ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.