Advertisement

New planet; ಭೂಮಿಯಂತಿರುವ ಮತ್ತೊಂದು ಗ್ರಹ ಪತ್ತೆ

10:26 AM May 19, 2023 | Team Udayavani |

ಹೊಸದಿಲ್ಲಿ: ಭೂಮಿಯ ಗಾತ್ರ ಇರುವ ಗ್ರಹವೊಂದನ್ನು ಖಗೋಳಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ಇದಕ್ಕೆ “ಎಲ್‌ಪಿ 791-18ಡಿ” ಎಂದು ನಾಮಕರಣ ಮಾಡಿದ್ದಾರೆ.
ಈ ಗ್ರಹವು ಜ್ವಾಲಾಮುಖೀಗಳಿಂದ ಕೂಡಿದ್ದು, ಇಲ್ಲಿ ಮಾನವರು ಜೀವನ ನಡೆಸಲು ಅನುಕೂಲವಾಗಿರುವ ವಾತಾವರಣ ಇರಬಹುದು ಎಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಈ ಗ್ರಹವು ತನ್ನಿಂದ 90 ಜ್ಯೋತಿರ್ವರ್ಷ ದೂರವಿರುವ ಕೆಂಪು ಕುಬ್ಜ ನಕ್ಷತ್ರವನ್ನು ಸುತ್ತುತ್ತಿದೆ. ಈ ನಕ್ಷತ್ರದ ಹೆಸರು “ಕ್ರೇಟರ್‌”. ಈ ಗ್ರಹದಲ್ಲಿ ಅಗ್ಗಿಂದಾಗೆ ಜ್ವಾಲಾಮುಖೀಗಳು ಸ್ಫೋಟಗೊಳ್ಳುತ್ತಿವೆ ಎಂದು ಅಮೆರಿಕದ ಹಾರ್ವರ್ಡ್‌ ವಿವಿ ಮತ್ತು ಸ್ಮಿತ್‌ಸೋನಿಯನ್‌ ಸಂಸ್ಥೆಯ ಖಗೋಳ ಭೌತಶಾಸ್ತ್ರ ವಿಭಾಗದ ಸಂಶೋಧಕರ ತಂಡ ತಿಳಿಸಿದೆ.

Advertisement

ಅಮೆರಿಕದ ನಾಸಾದ ಟ್ರಾನ್ಸಿಟಿಂಗ್‌ ಎಕ್ಸೋಪ್ಲಾನೆಟ್‌ ಸರ್ವೆ ಸ್ಯಾಟಲೈಟ್‌(ಟಿಇಎಸ್‌ಎಸ್‌) ಮತ್ತು ಸ್ಪಿಟ್ಜರ್‌ ಬಾಹ್ಯಾಕಾಶ ದೂರದರ್ಶಕ ಬಳಸಿ ಖಗೋಳಶಾಸ್ತ್ರಜ್ಞರು ಈ ಸಂಶೋಧನೆ ನಡೆಸಿದ್ದಾರೆ. ಅಲ್ಲದೇ ಈ ಸಂಶೋಧನಾತ್ಮಕ ಅಧ್ಯಯನವನ್ನು “ನೇಚರ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next