Advertisement

ಲೋಕ ಮತ ಎಣಿಕೆಗೆ ಇನ್ನೊಂದೇ ದಿನ

10:25 AM May 22, 2019 | Suhan S |

ರಾಮನಗರ: ಕಳೆದ ಏಪ್ರಿಲ್ 18ರಂದು ನಡೆದಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಇನ್ನೊಂದೇ ದಿನ ಬಾಕಿಯಿದೆ. ಮೈತ್ರಿ ಪಕ್ಷಗಳ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಸಹಜವಾಗಿಯೇ ಎದಬಡಿತ ಹೆಚ್ಚಾಗಿದೆ. ಈ ಮಧ್ಯೆ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ಅವರ ಗೆಲುವಿನ ಅಂತರದ ಬಗ್ಗೆ ಬೆಟ್ಟಿಂಗ್‌ ಜೋರಾಗಿಯೇ ನಡೆದಿದೆ ಎನ್ನಲಾಗಿದೆ.

Advertisement

ಎಕ್ಸಿಟ್ ಪೋಲ್ಗಳಲ್ಲಿ ಡಿ.ಕೆ.ಸುರೇಶ್‌ ಅವರ ಗೆಲುವಿನ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗಿವೆಯಾ ದರೂ, ಬಿಜೆಪಿಯ ಕಾರ್ಯಕರ್ತರು ಎದೆಗುಂದಿಲ್ಲ. ಕಳೆದೈದು ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಮತದಾರರು ಈ ಬಾರಿ ತಮ್ಮ ಪಕ್ಷದ ಅಭ್ಯರ್ಥಿ ಅಶ್ವತ್ಥ ನಾರಾಯಣ ಅವರನ್ನು ಲೋಕಸಭೆಗೆ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲೆ ಯಲ್ಲಿ ಮೋದಿ ಅಲೆ ಇರಲಿಲ್ಲ. ಇಲ್ಲಿ ಮೈತ್ರಿ ಅಭ್ಯರ್ಥಿ ಡಿ.ಕೆ. ಸುರೇಶ್‌ ಪ್ರಚಂಡ ಮತಗಳ ಅಂತರದಲ್ಲಿ ಗೆದ್ದು ಬರ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕನಿಷ್ಠ 3 ಲಕ್ಷ ಮತಗಳ ಅಂತರದಿಂದ ಸುರೇಶ್‌ ಗೆಲುವು ಸಾಧಿಸಲಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ನೇರ ಹಣಾಹಣಿ ಏರ್ಪಟ್ಟಿತ್ತು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎಂದೂ ತ್ರಿಕೋನ ಸ್ಪರ್ಧೆ ಏರ್ಪಡುತ್ತಿತ್ತು. ಆದರೆ 2019ರ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಮತ್ತು ಬಿಜೆಪಿಯ ಅಶ್ವತ್ಥ ನಾರಾಯಣ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಇಬ್ಬರೂ ನಾಯಕರು ಹೆಚ್ಚು ಬೆಂಗಳೂರು ದಕ್ಷಿಣ, ಆರ್‌.ಆರ್‌.ನಗರ ಮತ್ತು ಆನೇಕಲ್ ಕ್ಷೇತ್ರಗಳಲ್ಲೇ ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ಎಲ್ಲಿ ಎಷ್ಟು ಮತ ಚಲಾವಣೆ ಆಗಿತ್ತು?: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಕುಣಿಗಲ್, ಆನೇಕಲ್, ಬೆಂಗಳೂರು ದಕ್ಷಿಣ, ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿವೆ. ಏಪ್ರಿಲ್ 18ರಂದು ಮತದಾನದ ದಿನ 24,97,131 ಮತದಾರರ ಪೈಕಿ 16,20,440 ಮತದಾರರು ತಮ್ಮ ಮತ ಚಲಾಯಿಸಿದ್ದರು.

Advertisement

ಕುಣಿಗಲ್ನಲ್ಲಿ 1,90,913 ಮತದಾರರ ಪೈಕಿ 1,47,193 ಮತದಾರರು (ಶೇ 77.10). ಆರ್‌.ಆರ್‌. ನಗರದಲ್ಲಿ 4,50,928 ಮತದಾರರ ಪೈಕಿ 2,31,934 (ಶೇ 53.65) ಮತದಾರರು, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 6,17,011 ಮತದಾರರ ಪೈಕಿ 3,27,617 (ಶೇ 53.10 ) ಮತದಾರರು, ಆನೇಕಲ್ನಲ್ಲಿ 3,68,180 ಮತದಾರರ ಪೈಕಿ 2,12,170 (ಶೇ 58.32) ಮತದಾರರು, ಮಾಗಡಿಯಲ್ಲಿ 2,25,239 ಮತದಾರರ ಪೈಕಿ 1,75,999 (ಶೇ 78.14) ಮತದಾರರು, ರಾಮನಗರದಲ್ಲಿ 2,09,855 ಮತದಾರರ ಪೈಕಿ 1,62,265 (ಶೇ 77.32) ಮತ ದಾರರು, ಕನಕಪುರದಲ್ಲಿ 2,21,152 ಮತದಾರರ ಪೈಕಿ 1,81,831 (ಶೇ 82.22) ಮತದಾರರು, ಚನ್ನಪಟ್ಟಣದಲ್ಲಿ 2,18,225 ಮತದಾರರ ಪೈಕಿ 1,71,431 (78.56) ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 2014ರಲ್ಲಿ ಇಡೀ ಕ್ಷೇತ್ರದಲ್ಲಿ ಸೇ 66.45 ಮತದಾನವಾಗಿತ್ತು, 2019ರಲ್ಲಿ ಶೇ 64.54 ಮತದಾನವಾಗಿದೆ.

ಕಣದಲ್ಲಿ ಯಾರ್ಯರಿದ್ದರು?: ಅಶ್ವತ್ಥ ನಾರಾಯಣ (ಬಿಜೆಪಿ), ಡಾ.ಚನ್ನಪ್ಪ ವೈ ಚಿಕ್ಕಹಾಗಡೆ (ಬಿ.ಎಸ್‌.ಪಿ), ಡಿ.ಕೆ.ಸುರೇಶ್‌ (ಕಾಂಗ್ರೆಸ್‌), ಎನ್‌.ಕೃಷ್ಣಪ್ಪ ( ಪಿರಮಿಡ್‌ ಪಾರ್ಟಿ ಆಫ್ ಇಂಡಿಯಾ), ಡಿ.ಎಂ.ಮಾದೇಗೌಡ (ರಿಪಬ್ಲಿಕನ್‌ ಸೇನಾ), ಮಂಜುನಾಥ ಎಂ (ಉತ್ತಮ ಪ್ರಜಾಕೀಯ ಪಾರ್ಟಿ), ರಮಾ.ಟಿ.ಸಿ (ಸೋಶಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್ ಇಂಡಿಯಾ (ಕಮ್ಯುನಿಸ್ಟ್‌), ಡಾ.ಎಂ. ವೆಂಕಟಸ್ವಾಮಿ ( ಆರ್‌.ಪಿ.ಐ (ಎ)), ವೆಂಕಟೇಶಪ್ಪ (ಸರ್ವ ಜನತಾ ಪಾರ್ಟಿ), ಈ ಶ್ವರ (ಪಕ್ಷೇತರ), ಬಿ.ಗೋಪಾಲ್ (ಪಕ್ಷೇತರ), ಹೆಚ್.ಟಿ. ಚಿಕ್ಕರಾಜು (ಪಕ್ಷೇತರ), ಎಂ.ಸಿ.ದೇವರಾಜು (ಪಕ್ಷೇತರ), ಜೆ.ಟಿ. ಪ್ರಕಾಶ್‌ (ಪಕ್ಷೇತರ), ರಘು ಜಾಣಗೆರೆ (ಪಕ್ಷೇತರ).

● ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next