Advertisement

CM ಸಿದ್ದರಾಮಯ್ಯ ವಿರುದ್ಧ ಇ.ಡಿ.ಗೆ ಮತ್ತೊಂದು ದೂರು

12:10 AM Oct 04, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾಗೆ ನಿವೇಶನ ವಾಪಸ್‌ ನೀಡಿರುವುದು ಸಾಕ್ಷÂ ನಾಶಕ್ಕೆ ಸಮವಾಗಿದೆ ಎಂದು ಆರೋಪಿಸಿ ಗುರುವಾರ ವಕೀಲ ಪ್ರದೀಪ್‌ ಕುಮಾರ್‌ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.)ದೂರು ನೀಡಿದ್ದಾರೆ.

Advertisement

ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ತಮಗೆ ಮುಡಾದಿಂದ ಮಂಜೂರಾಗಿದ್ದ 14 ನಿವೇಶನಗಳನ್ನ ವಾಪಸ್‌ ನೀಡುವುದಾಗಿ ಪತ್ರ ಬರೆದಿದ್ದರು. ಬಳಿಕ ಮುಡಾ ಸಹ 14 ನಿವೇಶನಗಳ ಮಾಲಕತ್ವ ಮತ್ತು ಸ್ವಾಧೀನವನ್ನು ರದ್ದುಪಡಿಸಿದೆ. ಇದು ಮುಖ್ಯಮಂತ್ರಿಗಳು ಸಾಕ್ಷÂ ನಾಶಕ್ಕೆ ಮುಂದಾಗಿದ್ದಾರೆ. ಮುಡಾ ಅಧಿಕಾರಿಗಳು ಆರೋಪಿತರ ಮನೆಗೆ ಹೋಗಿ ಸಹಿ ಹಾಕಿಸಿಕೊಂಡು ಬಂದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next