Advertisement

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು; ಮೂರು ತಿಂಗಳಲ್ಲಿ ಮೂರನೇ ಸಾವು!

05:29 PM May 09, 2023 | Team Udayavani |

ಭೋಪಾಲ್: ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇರಿಸಲಾಗಿದ್ದ ಹೆಣ್ಣು ಚೀತಾ ದಕ್ಷ ಉದ್ಯಾನವನದೊಳಗೆ ಇತರ ಚೀತಾಗಳೊಂದಿಗೆ ಕಾದಾಟದಲ್ಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.

Advertisement

ಮೂಲಗಳ ಪ್ರಕಾರ, ಪುರುಷ ಚೀತಾಗಳೊಂದಿಗಿನ ಗಲಾಟೆಯಲ್ಲಿ ದಕ್ಷ ಚೀತಾ ಸಾವನ್ನಪ್ಪಿದೆ. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಚೀತಾಗಳನ್ನು ತಂದ ನಂತರ ಕುನೋದಲ್ಲಿ ಸಾವನ್ನಪ್ಪಿದ ಮೂರನೇ ಚೀತಾ ಇದಾಗಿದೆ.

ಕಳೆದ ವರ್ಷದಿಂದ ಇಪ್ಪತ್ತು ಚೀತಾಗಳನ್ನು ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದ್ದು, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಎರಡು ಚೀತಾಗಳು ಸಾವನ್ನಪ್ಪಿವೆ.

ಇದನ್ನೂ ಓದಿ:Kundapur: ಗೆಲುವಿನ ಮೆಟ್ಟಿಲು ಏರುತ್ತಿರುವ ಬಿಜೆಪಿ: ಕಿರಣ್‌ ಕುಮಾರ್‌ ಕೊಡ್ಗಿ

ಸಶಾ ಎಂಬ ಹೆಸರಿನ ಚೀತಾ ಭಾರತಕ್ಕೆ ಕರೆತರುವ ಮೊದಲು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿತ್ತು. ಎಪ್ರಿಲ್‌ನಲ್ಲಿ ಎರಡನೇ ಚೀತಾಉದಯ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆ ವೇಳೆ ಸಾವನ್ನಪ್ಪಿತ್ತು.

Advertisement

ಇಂದು ಮುಂಜಾನೆ, ಕೇಂದ್ರ ಪರಿಸರ ಸಚಿವಾಲಯವು ಜೂನ್‌ ನಲ್ಲಿ ಮಾನ್ಸೂನ್ ಪ್ರಾರಂಭವಾಗುವ ಮೊದಲು ಐದು ಚೀತಾಗಳನ್ನು (ಮೂರು ಹೆಣ್ಣು ಮತ್ತು ಎರಡು ಗಂಡು) ಕ್ವಾರಂಟೈನ್ ನಿಂದ ಶಿಬಿರಗಳಿಂದ ಕುನೋ ರಾಷ್ಟ್ರೀಯ ಉದ್ಯಾನವನದ ಮುಕ್ತ ಪರಿಸ್ಥಿತಿಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next