Advertisement

ಕೇಂದ್ರದ ವಿರುದ್ಧ ದಿಲ್ಲಿ ಸರ್ಕಾರದ ಮತ್ತೂಂದು ಕೇಸು

09:51 PM May 12, 2023 | Team Udayavani |

ನವದೆಹಲಿ: ಸರ್ಕಾರಿ ಅಧಿಕಾರಿಗಳ ನೇಮಕ ಮತ್ತು ನಿಯಂತ್ರಣ ವಿಚಾರದಲ್ಲಿ ಗೆಲುವು ಪಡೆದ ದೆಹಲಿ ಸರ್ಕಾರ, ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮತ್ತೂಂದು ದಾವೆ ಹೂಡಿದೆ. ಸೇವೆಗಳ ವಿಭಾಗದ ಕಾರ್ಯದರ್ಶಿಯಾಗಿದ್ದ ಆಶಿಶ್‌ ಮೋರಿ ವರ್ಗಾವಣೆ ಆದೇಶವನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತಿಲ್ಲ. ಹೀಗಾಗಿ, ಅದರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬೇಕು ಎಂದು ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಮೂಲಕ ಅರಿಕೆ ಮಾಡಿಕೊಂಡಿದೆ.

Advertisement

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ.ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯಲ್ಲಿನ ಅಂಶಗಳನ್ನು ನೋಡಿ “ಗುರುವಾರವಷ್ಟೇ ತೀರ್ಪು ನೀಡಿದ್ದೆವು. ಶುಕ್ರವಾರ ನ್ಯಾಯಾಂಗ ನಿಂದನೆ ಮೊಕದ್ದಮೆ ಪ್ರಕರಣವೇ?” ಎಂದು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಸಿಂಘ್ವಿ ಅವರು (ಕೇಂದ್ರ ಸರ್ಕಾರ)ಯಾರನ್ನೂ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಗುರುವಾರ ನ್ಯಾಯಪೀಠ ನೀಡಿದ ತೀರ್ಪಿನ ಅನ್ವಯ ನನ್ನ ಕಕ್ಷಿದಾರರಿಗೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅವಕಾಶ ಇದೆ. ಹೀಗಾಗಿ ಅದನ್ನು ಲಿಸ್ಟ್‌ ಮಾಡಬೇಕು”ಎಂದು ಅರಿಕೆ ಮಾಡಿದರು. ಅದಕ್ಕೆ ಒಪ್ಪಿದ ಮುಖ್ಯ ನ್ಯಾಯಮೂರ್ತಿ ಮುಂದಿನ ವಾರ ಅರ್ಜಿಯ ವಿಚಾರಣೆಗಾಗಿ ಹೊಸ ನ್ಯಾಯಪೀಠ ರಚಿಸುವುದಾಗಿ ಹೇಳಿದರು.

ಸರ್ಕಾರದ ಸಲಹೆ ಪಾಲಿಸಿ:
ಈ ನಡುವೆ ದೆಹಲಿ ಮಹಾನಗರ ಪಾಲಿಕೆಗೆ ಸದಸ್ಯರ ನೇಮಕ ವಿಚಾರದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಸರ್ಕಾರದ ಸಲಹೆ ಒಪ್ಪಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಹತ್ತು ಮಂದಿ ಸದಸ್ಯರ ನೇಮಕ ವಿಚಾರದಲ್ಲಿ ತಕರಾರು ಎದ್ದಿರುವ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ದೈನಂದಿನ ಆಡಳಿತ ನಡೆಸುವ ವಿಚಾರದಲ್ಲಿ ಸರ್ಕಾರದ ಸಲಹೆ ಮತ್ತು ಸಹಕಾರವನ್ನು ಲೆಫ್ಟಿನೆಂಟ್‌ ಗವರ್ನರ್‌ ಪಡೆದುಕೊಳ್ಳಬೇಕು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next