Advertisement
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮಂಗಳೂರು ತಾಲೂಕಿನ ಮಂಗಳೂರು- ಚೆರ್ವತ್ತೂರು- ಕರಾವಳಿ ಜಿಲ್ಲಾ ಮುಖ್ಯ ರಸ್ತೆ (ಕೋಟೆ ಪುರ- ಬೋಳಾರ)ಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಈಗಿರುವ ಜೆಪ್ಪಿನಮೊಗರು ಬಳಿಯ ರಾ.ಹೆ. 66ರ ಸೇತುವೆ, ಆ ಬಳಿಕ ಇರುವ ರೈಲ್ವೇ ಸೇತುವೆಯ ಆಚೆಗೆ ಪಶ್ಚಿಮ ಭಾಗದಲ್ಲಿ ಆಗಲಿರುವ ಸೇತುವೆ ಇದಾಗಿದ್ದು, 1,400 ಮೀ. ಉದ್ದಕ್ಕೆ ಕೋಟೆಪುರ ಹಾಗೂ ಬೋಳಾರ ಮಧ್ಯೆ ನಿರ್ಮಾಣಗೊಳ್ಳಲಿದೆ. ಇದರಿಂದ ಮೀನುಗಾರಿಕೆ ಉದ್ದೇಶದ ಸರಕು ಸಾಗಾಟ ವಾಹನಗಳು ತ್ವರಿತವಾಗಿ ಮಂಗಳೂರು-ಕೇರಳ ಮಧ್ಯೆ ಸಂಚರಿಸಬಹುದು; ನಗರದೊಳಗೆ ಬರುವುದು, ಹೆದ್ದಾರಿಯ ಓಡಾಟದಿಂದ ದಟ್ಟಣೆ ಹೆಚ್ಚುವುದು ಇತ್ಯಾದಿ ಕಿರಿಕಿರಿ ತಪ್ಪಲಿದೆ. ಅಲ್ಲದೆ ಕಾಸರಗೋಡು-ಮಂಗಳೂರು ಮಧ್ಯೆ ಪರ್ಯಾಯ ರಸ್ತೆಗೂ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲಿದೆ.