Advertisement

Financial Crunch; ಬೈಜೂಸ್‌ನಿಂದ ಮತ್ತೆ 500 ಉದ್ಯೋಗಿಗಳ ವಜಾ

09:40 PM Apr 02, 2024 | Team Udayavani |

ನವದೆಹಲಿ: ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಬೈಜೂಸ್‌ ಕಂಪನಿ ಮತ್ತೆ ತನ್ನ 500 ಉದ್ಯೋಗಿಗಳನ್ನು ವಜಾಗೊಳಿಸಿದೆ. 15 ದಿನಗಳ ಅವಧಿಯಲ್ಲಿ ಸೇಲ್ಸ್‌ ಪ್ರತಿನಿಧಿಗಳು, ಶಿಕ್ಷಕರು ಸೇರಿದಂತೆ ಒಟ್ಟು 500 ಉದ್ಯೋಗಿಗಳನ್ನು ತೆಗೆದು ಹಾಕಲಾಗಿದೆ.

Advertisement

“ನಾವು 2023ರ ಅಕ್ಟೋಬರ್‌ನಲ್ಲಿ ಘೋಷಿಸಿದ ಉದ್ಯಮ ಪುನರ್‌ರಚನೆ ಕ್ರಮದ ಅಂತಿಮ ಹಂತದಲ್ಲಿ ಇದ್ದೇವೆ.  ಇದರ ಭಾಗವಾಗಿ 500 ಉದ್ಯೋಗಗಳ ಕಡಿತ ಮಾಡಲಾಗಿದೆ’ ಎಂದು ಬೈಜೂಸ್‌ ವಕ್ತಾರರು ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌, ನವೆಂಬರ್‌ನಲ್ಲಿ ಸುಮಾರು 3,000 ಉದ್ಯೋಗಿಗಳನ್ನು ಬೈಜೂಸ್‌ ವಜಾಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next