Advertisement

ಮತ್ತೆ ರಾಜ್ಯದ 12 ಜನರಿಗೆ ಸೋಂಕು: ಮೈಸೂರಿನಲ್ಲಿ ಏಳು ಹೊಸ ಸೋಂಕು ಪ್ರಕರಣ

09:01 AM Apr 07, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಿದೆ. ಇಂದು ಮತ್ತೆ 12 ಜನರಿಗೆ ಸೋಂಕು ತಗುಲಿದ್ದು ದೃಢವಾಗಿದೆ.

Advertisement

ಇದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 163 ಕ್ಕೇರಿದೆ.

ಮೈಸೂರು ಜಿಲ್ಲೆಯಲ್ಲಿ ಇಂದು ಹೊಸದಾಗಿ ಏಳು ಜನರಿಗೆ ಕೋವಿಡ್-19 ಸೋಂಕು ದೃಡವಾಗಿದೆ.  ದೆಹಲಿ ಪ್ರಯಾಣ ಮಾಡಿದ್ದ ಹಿನ್ನೆಲೆ ಹೊಂದಿದ್ದ ಮೂವರು, ನಂಜನಗೂಡು ಔಷಧ ಕಂಪನಿ ಮತ್ತೊಬ್ಬ ಸಿಬ್ಬಂದಿ ಹಾಗು ಅದೇ ಕಂಪನಿಯ ಈ ಹಿಂದೆ ಸೋಂಕಿಗೊಳಗಾಗಿದ್ದ ಸಿಬಂದಿಯ ನೇರ ಸಂಪರ್ಕ ಹೊಂದಿದ್ದ ಸಹೋದರ, ದುಬೈ ಪ್ರಯಾಣ ಹಿನ್ನೆಲೆ ಹೊಂದಿದ್ದ ಪುರುಷ, ಯಾವುದೇ ವಿದೇಶ ಪ್ರಯಾಣ ಸಂಪರ್ಕ ಇಲ್ಲದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 35 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಬಾಗಲಕೋಟೆಯಲ್ಲಿ  ಸೋಂಕಿನಿಂದ ಮೃತನಾಗಿದ್ದ ವೃದ್ಧನ ಪತ್ನಿ, ಸಹೋದರನಲ್ಲೂ ಸೋಂಕು ದೃಢಪಟ್ಟಿದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೋವಿಡ್-19 ಸೋಂಕು ತಗಲಿರುವುದು ಇಂದು ದೃಢವಾಗಿದೆ.

Advertisement

ಇದರೊಂದಿಗೆ ಕೇರಳ ಮೂಲದ ಓರ್ವ ವ್ಯಕ್ತಿಗೆ ಸೋಂಕು ತಾಗಿರುವುದು ಇಂದು ದೃಢವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 163ಕ್ಕೇರಿದೆ. ಇವರಲ್ಲಿ ಇದುವರೆಗೆ ನಾಲ್ವರು ಮೃಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next