Advertisement

ಮನೆಯೇ ಚಿತ್ರಾಲಯ!

09:45 AM Dec 24, 2019 | mahesh |

ಆನ್‌ಲೈನ್‌ ಸ್ಟ್ರೀಮಿಂಗ್‌ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ, ಸ್ಪರ್ಧಾತ್ಮಕ ಶುಲ್ಕ ವಿಧಿಸುವುದರಿಂದ ಹಿಡಿದು ಅತ್ಯುತ್ತಮ ಕಂಟೆಂಟ್‌ ಒದಗಿಸುವವರೆಗೂ ಅವು ಜಿದ್ದಿಗೆ ಬಿದ್ದಿವೆ. ಮನರಂಜನಾ ಉದ್ಯಮದಲ್ಲಿ ಬದಲಾವಣೆ ತರುತ್ತಿರುವ ಈ ಸಂಸ್ಥೆಗಳ ಕಷ್ಟನಷ್ಟ, ಸವಾಲುಗಳ ಕುರಿತ ವಾರ್ಷಿಕ ವರದಿಯನ್ನು ತಿಳಿಯಲು ಮನರಂಜನಾ ಉದ್ಯಮವೇ ಕಾತರವಾಗಿದೆ. ರೇಸಿನಲ್ಲಿ ಯಾರು ಮುಂದಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

Advertisement

ಒಂದು ಕಾಲವಿತ್ತು, ಮನರಂಜನೆ ಎಂದರೆ ನಾಟಕ ಪ್ರದರ್ಶನಗಳಿಗೆ ಇಲ್ಲವೇ ಸಿನಿಮಾ ಮಂದಿರಗಳಿಗೇ ಹೋಗಬೇಕಾಗಿತ್ತು. ನಂತರ ಸಿ.ಡಿ., ಡಿ.ವಿ.ಡಿ ಜಮಾನಾ ಆರಂಭವಾದ ಮೇಲೆ ಜನರು ಸಿ.ಡಿ., ಡಿ.ವಿ.ಡಿ ಅಂಗಡಿಗೆ ತೆರಳಿ ಯಾವುದಾದರೂ ಸಿನಿಮಾ ಸಿ.ಡಿ.ಯನ್ನು ಬಾಡಿಗೆಗೆ ತರುತ್ತಿದ್ದರು. ಮನೆಯಲ್ಲೇ ಕೂತು, ಕುಟುಂಬದ ಸದಸ್ಯರೆಲ್ಲರೂ ಸಿನಿಮಾವನ್ನು ಎಂಜಾಯ್‌ ಮಾಡುತ್ತಿದ್ದರು. ಕೇಬಲ್‌ ಟಿ.ವಿ ಬಂದಮೇಲೆ ಚಾನೆಲ್ಲುಗಳಲ್ಲೇ ಧಾರಾವಾಹಿ, ಸಿನಿಮಾಗಳು ಬರತೊಡಗಿದ ಮೇಲೆ ಸಿ.ಡಿ., ಡಿ.ವಿ.ಡಿ ಉದ್ಯಮ ಮರೆಯಾಯಿತು. ಇಂಟರ್ನೆಟ್‌ ಯುಗ ಪ್ರಾರಂಭವಾದ ಮೇಲೆ ಯಾವತ್ತು 3ಎ, 4ಎ ಹೈಸ್ಪೀಡ್‌ ಇಂಟರ್ನೆಟ್‌ ಬಂದಿತೋ; ಅಲ್ಲಿಂದ ಮನರಂಜನಾ ಉದ್ಯಮದಲ್ಲಿ ಬದಲಾವಣೆಯ ಪರ್ವ ಶುರುವಾಯಿತು. ಅದಕ್ಕೆ ಕಾರಣವಾಗಿರುವುದು ಒ.ಟಿ.ಟಿ (ಓವರ್‌ ದ ಟಾಪ್‌) ಆನ್‌ಲೈನ್‌ ಸೇವೆ. ನೆಟ್‌ಫ್ಲಿಕ್ಸ್‌, ಅಮೆಝಾನ್‌ ಪ್ರೈಮ್‌, ಹಾಟ್‌ಸ್ಟಾರ್‌, ಝೀ5, ವೂಟ್‌, ಇರೋಸ್‌… ಇವೆಲ್ಲಾ ಭಾರತದಲ್ಲಿ ಜನಪ್ರಿಯತೆ ಗಳಿಸಿರುವ ಆನ್‌ಲೈನ್‌ ಸ್ಟ್ರೀಮಿಂಗ್‌ ಪ್ಲಾಟ್‌ಪಾರ್ಮ್ಗಳು.

ನಾನಾ ವರ್ಗದ ಚಂದಾದಾರರು
ಜಗತ್ತಿನಾದ್ಯಂತ ನೆಟ್‌ಫ್ಲಿಕ್ಸ್‌ ಜನಪ್ರಿಯತೆ ಗಳಿಸಿದ್ದರೂ, ಭಾರತದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದಿದ್ದು ಅಮೆಜಾನ್‌ ಪ್ರೈಮ್‌. ಅದು, ಭಾರತದಲ್ಲಿ ಹತ್ತು ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ. ನಂತರದ ಸ್ಥಾನಗಳಲ್ಲಿ ನೆಟ್‌ಫ್ಲಿಕ್ಸ್ ಹಾಗೂ ಹಾಟ್‌ಸ್ಟಾರ್‌ ಇದೆ. ಶುಲ್ಕದ ವಿಚಾರಕ್ಕೆ ಬಂದರೆ, ಅಮೆಜಾನ್‌ ಪ್ರೈಂ ವಿಡಿಯೋ ಉಳಿದೆಲ್ಲವುದಕ್ಕಿಂತ ಸೋವಿ ಎನ್ನಬಹುದು. ಒಂದೇ ಶುಲ್ಕದಲ್ಲಿ ಪ್ರೈಂ ಮ್ಯೂಸಿಕ್‌ ಕೂಡ ಬರುತ್ತದೆ. ನೆಟ್‌ಫ್ಲಿಕ್ಸ್ ನಲ್ಲಿ ಕಂಟೆಂಟ್‌ ಉತ್ತಮವಾಗಿದೆ. ಹೊಸ ಹೊಸ ಸಿನಿಮಾಗಳು, ಗುಣಮಟ್ಟದ ಧಾರಾವಾಹಿ ಸರಣಿಗಳನ್ನು ಅದು ಒಳಗೊಂಡಿದೆ. ಅಲ್ಲದೆ ಅದರಲ್ಲಿ ದೇಶಿಯ ಕಂಟೆಂಟ್‌ ಜೊತೆ ಅಂತಾರಾಷ್ಟ್ರೀಯ ಕಂಟೆಂಟ್‌ ಜಾಸ್ತಿ ಇದೆ. ಹಾಟ್‌ಸ್ಟಾರ್‌ನಲ್ಲಿ ಲೈವ್‌ನ್ಪೋರ್ಟ್ಸ್ ವೀಕ್ಷಿಸಬಹುದು, ಅದೇ ಅಲ್ಲಿನ ವಿಶೇಷತೆ. ಹೀಗೆ, ಇವೆಲ್ಲಾ ಸಂಸ್ಥೆಗಳು ನಾನಾ ವರ್ಗದ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿವೆ.

ಪಾಸ್‌ವರ್ಡ್‌ ಹಂಚಿಕೆಯ ಸಮಸ್ಯೆ
ಭಾರತದಲ್ಲಿ ಸ್ಟ್ರೀಮಿಂಗ್‌ ಕಾನ್ಸೆಫ್ಟ್ ಪರಿಚಯ ಆಗಿ ನಾಲ್ಕೈದು ವರ್ಷಗಳೇ ಆಗಿರಬಹುದು. ಇಷ್ಟರಲ್ಲೇ ಲಾಭದಾಯಕ ಉದ್ದಿಮೆಯಾಗಿ ಬೆಳೆದುನಿಂತಿದೆ. ಆದರೆ, ಈ ಕ್ಷೇತ್ರದಲ್ಲಿ ಅಷ್ಟೇ ಸವಾಲುಗಳು ಕೂಡ ಇವೆ. ಭಾರತೀಯರು ಹಣದ ವಿಚಾರದಲ್ಲಿ ಕಟ್ಟುನಿಟ್ಟು ಎನ್ನುವುದು ಗೊತ್ತಿರುವ ಸಂಗತಿಯೇ ಆಗಿದೆ. ಇಲ್ಲೂ ಒಬ್ಬರ ಪಾಸ್‌ವರ್ಡ್‌ನಲ್ಲಿ ಅವರ ಪರಿಚಿತರೂ ಓಟಿಟಿ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಚಂದಾದಾರರಲ್ಲಿ 67% ಜನರು ತಮ್ಮ ಪಾಸ್‌ವರ್ಡ್‌ಅನ್ನು ಇನ್ನೊಬ್ಬರಿಗೆ ಕೊಟ್ಟಿದ್ದಾರೆ ಎನ್ನುವುದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ಇದರಿಂದ ಕಂಪನಿಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇನ್ನು ಕೆಲವೊಂದು ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಉಚಿತವಾಗಿ ತನ್ನದೇ ಸ್ಟ್ರೀಮಿಂಗ್‌ ಸೇವೆಯನ್ನು ಒದಗಿಸುತ್ತವೆ. ಏರ್‌ಟೆಲ್‌ ತನ್ನ ಗ್ರಾಹಕರಿಗೆ ಎಕ್ಸ್‌ ಸ್ಟ್ರೀಮ್‌ ಆನ್‌ಲೈನ್‌ ಸ್ಟ್ರೀಮಿಂಗ್‌ ಸವಲತ್ತನ್ನು ನೀಡುತ್ತಿದೆ. ಉಚಿತ ಸೇವೆಗಳು ಕೂಡ ಈ ಉದ್ಯಮಕ್ಕೆ ಸಮಸ್ಯೆ ತಂದೊಡ್ಡುತ್ತಿದೆ.

ಚಂದಾದಾರರನ್ನು ಆಕರ್ಷಿಸುತ್ತಿರುವುದೇನು?
ಸೋವಿಯಾದ ಪ್ಲಾನ್‌, ಟಿವಿ ಶೋಗಳು, ಗೆಳೆಯರ ಸರ್ಕಲ್, ಒಳ್ಳೆಯ ಕಾರ್ಯಕ್ರಮ ಮಿಸ್‌ ಆಗಬಾರದು ಎನ್ನುವುದು, ಫ್ರೀಯಾಗಿ ಡೌನ್ಲೋಡ್ ಮಾಡಲು ಆಗುತ್ತಿಲ್ಲ ಇವೇ ಕೆಲವು ವಿಷಯಗಳು ಜನರನ್ನು ಚಂದಾದಾರರನ್ನಾಗಿ ಮಾಡುತ್ತಿದೆ. ಚಂದಾದಾರರಲ್ಲಿ ಯುವಕರು (24ರಿಂದ 34) ರೋಮ್ಯಾಂಟಿಕ್‌ ವಿಷಯ ಬಯಸಿದರೆ, ವಯಸ್ಸು ಹೆಚ್ಚಾದಂತೆ ರೋಮಾಂಚನಕಾರಿ ವಿಡಿಯೋ ಬೇಡಿಕೆ ಹೆಚ್ಚುತ್ತಿದೆ. 45 ವಯಸ್ಸು ಮೀರಿದವರಲ್ಲಿ ಸಾಹಸದ ಕಂಟೆಂಟ್‌ ಹೆಚ್ಚು ಇಷ್ಟವಾಗುತ್ತಾ ಹೋಗುತ್ತದೆ. ಅಚ್ಚರಿಯ ವಿಷಯವೆಂದರೆ ಭಾರತದಲ್ಲಿ ಒಟ್ಟು ಓಟಿಟಿ ಚಂದಾದಾರರಲ್ಲಿ, 52% ಜನರ ಆದಾಯ ಕೇವಲ ನಾಲ್ಕು ಲಕ್ಷದ ಒಳಗಿದೆ ಎನ್ನುವುದು. ಅಲ್ಲದೆ ಚಂದಾದಾರರ ಸಂಖ್ಯೆಯ ವಿಚಾರದಲ್ಲಿ ಪುರುಷರು (69%) ಮುಂದಿದ್ದಾರೆ.

Advertisement

ಏನೇನು ನೋಡುತ್ತಿದ್ದಾರೆ?
ಮೆಟ್ರೋದಲ್ಲಿ ಹಾಗೂ ಇನ್ನಿತರೆ ಪ್ರದೇಶದಲ್ಲಿ ಹೇಗೆ ಯಾವ ವಿಷಯ ನೋಡಲು ಬಯಸುತ್ತಾರೆ ಎನ್ನುವುದನ್ನು ನೋಡೋಣ. ನಗರವಾಸಿ ಚಂದಾದಾರರು ಟಿವಿ ಶೋಗಳನ್ನು, ಡಾಕ್ಯುಮೆಂಟರಿ ಮತ್ತು ನೈಜ ಘಟನೆಯಾಧಾರಿತ ವಿಡಿಯೋಗಳನ್ನು ನೋಡಲು ಬಯಸಿದರೆ, ಗ್ರಾಮೀಣ ಪ್ರದೇಶದ ಚಂದಾದಾರರು ಸಿನಿಮಾ, ನ್ಯೂಸ್‌ ನೋಡಲು ಇಷ್ಟ ಪಡುತ್ತಿ¨ªಾರೆ. ಇನ್ನೊಂದು ಅಚ್ಚರಿಯ ಸಂಗತಿ ಈ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ನಗರವಾಸಿ ಚಂದಾದಾರರು ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಬಳಸಲ್ಪಡುತ್ತಿರುವ ಉಪಕರಣ (ಗ್ರಾಫ್)
ಮೊಬೈಲ್‌ 49%
ಲ್ಯಾಪ್‌ಟಾಪ್‌ 39%
ಡೆಸ್ಕ್ಟಾಪ್‌ 9%
ಟ್ಯಾಬ್ಲೆಟ್‌ 3%

ವಿಕ್ರಂ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next