Advertisement

ಜೀಜಾಮಾತಾ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ

09:57 AM Jan 14, 2019 | Team Udayavani |

ಬಸವಕಲ್ಯಾಣ: ವಿದ್ಯಾರ್ಥಿಗಳು ಮಹಾನ್‌ ವ್ಯಕ್ತಿಗಳ ಚರಿತ್ರೆಯನ್ನು ಅರಿತು ವಿಶಾಲ ಗುರಿ ಹೊಂದಬೇಕು ಎಂದು ಮಾಜಿ ಶಾಸಕ ಮಾರುತಿರಾವ್‌ ಮೂಳೆ ಹೇಳಿದರು.

Advertisement

ನಗರದ ಜೀಜಾಮಾತಾ ಶಿಕ್ಷಣ ಸಂಸ್ಥೆಯಲ್ಲಿ ಸಾವಿತ್ರಿಬಾಯಿ ಫುಲೆ, ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಗುರಿ ಮುಟ್ಟುವವರೆಗೂ ಯಾವುದೇ ವ್ಯಸನಕ್ಕೆ ಬಲಿಯಾಗದೆ, ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.

ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಸತತ ಕಠಿಣ ಪರಿಶ್ರಮ ಮಾಡಬೇಕು. ಹಾಗೂ ಮಹಾನ್‌ ವ್ಯಕ್ತಿಗಳ ಚರಿತ್ರೆಗಳನ್ನು ಓದಬೇಕು ಎಂದು ಸಲಹೆ ನೀಡಿದರು.

ಶಾಹೀನ್‌ ಶಿಕ್ಷಣ ಸಂಸ್ಥೆಯ ಅಬ್ದುಲ್‌ ಮನ್ನಾನ ಸೇಠ ಹಾಗೂ ನಗರಸಭೆ ಸದಸ್ಯ ಅನೀಲಕುಮಾರ ಕುಲಕರ್ಣಿ ಮಾತನಾಡಿದರು. ಮುಖ್ಯಗುರು ಪ್ರತಾಪ ಸೂರ್ಯವಂಶಿ ಪ್ರಸ್ತಾವಿಕವಾಗಿ ಮಾತನಾಡಿದರು. ಅರ್ಜುನ ಕನಕ, ಮನೋಹರ ಮೈಸೆ, ನರಸಿಂಗರೆಡ್ಡಿ ಗದಲೇಗಾಂವ, ಭಾಸ್ಕರರಾವ್‌ ಕಾಂಬಳೆ, ಸಂಜುಕುಮಾರ ಕಾಂಗೆ, ಪ್ರಭುಲಿಂಗಯ್ನಾ ಟಂಕಸಾಲಿಮಠ, ದೇವೇಂದ್ರ ಮಂಠಾಳಕರ, ವಿಜಯ ಜಗತಾಪ, ವಿಶ್ವನಾಥ ಸಿಂಧೆ, ಹಣಮಂತರಾವ್‌ ಪಾಟೀಲ, ಜ್ಞಾನೇಶ್ವರ ಮೂಳೆ, ಅಭಿಮನ್ಯು ಪಾಟೀಲ, ಮುಖ್ಯ ಗುರು ಚಂದ್ರಕಾಂತ ಜಾಧವ, ಪ್ರಾಚಾರ್ಯರು ದಯಾನಂದ ಸೂರ್ಯವಂಶಿ, ಬಾಲಾಜಿ ಬಿರಾದಾರ ಮತ್ತಿತರರು ಇದ್ದರು. ಸತೀಶಕುಮಾರ ಮೂಳೆ ಸ್ವಾಗತಿಸಿದರು. ದ್ವಾರಕಾಬಾಯಿ ಪಾಟೀಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next