Advertisement

ಜ.20ರಂದು ಪುಣೆ ಬಂಟರ ಸಂಘದ ವಾರ್ಷಿಕೋತ್ಸವ:ವಿಶೇಷ ಸಭೆ

12:27 PM Jan 09, 2018 | Team Udayavani |

ಪುಣೆ: ಪುಣೆ ಬಂಟರ ಸಂಘದ ವಾರ್ಷಿಕೋತ್ಸವ ಸಮಾರಂಭವು ಜ. 20 ರಂದು ನಡೆಯಲಿದ್ದು,  ಈ ಬಗ್ಗೆ ಪೂರ್ವಭಾವಿ ಸಭೆಯನ್ನು ಕೊರೊನೆಟ್‌ ಹೊಟೇಲ್‌ ಸಭಾಂಗಣದಲ್ಲಿ ಜ. 4 ರಂದು ಆಯೋಜಿಸಲಾಗಿತ್ತು.

Advertisement

ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು  ಸ್ವಾಗತಿಸಿ ಮಾತನಾಡಿ, ಪ್ರತೀವರ್ಷ ನಮ್ಮ ಸಂಘದ ವಾರ್ಷಿಕೋತ್ಸವ ಸಮಾರಂಭವು ಜ. 26 ಕ್ಕೆ ನಡೆಯುತ್ತಲಿದ್ದು ಪ್ರಸ್ತುತ ವರ್ಷ ಸ್ಥಳಾವಕಾಶದ ಕೊರತೆಯಿಂದ ಜ. 20 ಕ್ಕೆ ಮಹಾಲಕ್ಷ್ಮೀ ಲಾನ್ಸ್‌ನಲ್ಲಿ ನಿಗದಿಮಾಡಲಾಗಿದ್ದು ಸಮಾಜ ಬಾಂಧವರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು  ಹಾಗೂ ಮನೋರಂಜನಾ ಕಾರ್ಯಕ್ರಮ ಗಳೊಂದಿಗೆ ಅದ್ದೂರಿಯಾಗಿ ನಡೆಯಲಿರುವ ಈ ಉತ್ಸವದಲ್ಲಿ ಸಮಾಜದ ಗಣ್ಯ ಅತಿಥಿಗಳೂ ಪಾಲ್ಗೊಳ್ಳಲಿ¨ªಾರೆ. ಪುಣೆಯಲ್ಲಿರುವ ಪ್ರತಿಯೋರ್ವ ಸಮಾಜ ಬಾಂಧವರನ್ನೂ ಈ ಕಾರ್ಯಕ್ರಮಕ್ಕೆ ಆಮಂತ್ರಿಸಿ ಸಮಾರಂಭದಲ್ಲಿ ಭಾಗಿಯಾಗುವಂತೆ ವಿನಂತಿಸಬೇಕಾಗಿದೆ. ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿಗಳ ಎÇÉಾ ಸದಸ್ಯರೂ ಒಗ್ಗಟ್ಟಿನಿಂದ ಸಹಕಾರ ನೀಡಿ ತಮಗೆ ನೀಡಿದ ಜವಾಬ್ದಾರಿಗಳನ್ನು ನಿರ್ವಹಿಸಿ ವಾರ್ಷಿಕೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದರು.

ಅದೇ ರೀತಿ ನಮ್ಮ ಸಂಘದ ಸಾಂಸ್ಕೃತಿಕ ಭವನದ ಕೆಲಸಗಳು ಅಂತಿಮ ಹಂತದಲ್ಲಿದ್ದು ಮುಂದಿನ ಎಪ್ರಿಲ್‌ನಲ್ಲಿ ಲೋಕಾರ್ಪಣೆಗೊಳಿಸುವಲ್ಲಿ ಪ್ರಯತ್ನಿಸಲಾಗುವುದು. ಅಂತಿಮ ಹಂತದ ಕೆಲಸಗಳಿಗೆ ಹೆಚ್ಚಿನ ಹಣದ ಆವಶ್ಯಕತೆಯಿದ್ದು ನಿಗದಿತ ಅವಧಿಗೆ ಕೆಲಸಗಳನ್ನು ಪೂರ್ಣಗೊಳಿಸಬೇಕಾದ ಅನಿವಾರ್ಯತೆಯಿದ್ದು, ಈಗಾಗಲೇ ಭರವಸೆ ನೀಡಿರುವ ದಾನಿಗಳು ತಮ್ಮ ದೇಣಿಗೆಯ ಮೊತ್ತವನ್ನು ಆದಷ್ಟು ಬೇಗ ನೀಡಿದರೆ ಮಹದುಪಕಾರವಾಗುತ್ತದೆ ಎಂದ ರು.

ದಾನಿಗಳೇ ಭವನದ ರೂವಾರಿಗಳಾಗಿದ್ದು ಅವರೆಲ್ಲರ  ಸಹಕಾರದಿಂದ ಇಂದು ಭವನ ಸುಂದರವಾಗಿ ಸುಸಜ್ಜಿತವಾಗಿ ರೂಪುಗೊಳ್ಳಲು ಸಾಧ್ಯವಾಗಿದ್ದು ತಮಗೆ ಸಂಘ ಸದಾ ಚಿರಋಣಿಯಾಗಿದೆ.  ಅದೇ ರೀತಿ ನಮ್ಮ ಸಂಘದ ಪದಾಧಿಕಾರಿಗಳೆಲ್ಲರೂ ಭವನ ಲೋಕಾರ್ಪಣೆಗೊಳಿಸುವ ತನಕ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡು ಸಹಕರಿಸಿ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ ಅವರು ಕಳೆದ ಸಭೆಯಲ್ಲಿನ ವರದಿಗಳನ್ನು ಮಂಡಿಸುತ್ತಾ ವಾರ್ಷಿಕೋತ್ಸವದ ಸಿದ್ಧತೆಗಳ ಬಗ್ಗೆ ಹಾಗೂ ವಾರ್ಷಿಕ ಸ್ಮರಣ ಸಂಚಿಕೆಯ ಬಗ್ಗೆ  ಮಾಹಿತಿ ನೀಡಿದರು. 

Advertisement

ಸಂಘದ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು ವಾರ್ಷಿಕೋತ್ಸವ ಸಂದರ್ಭ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗೆಗಿನ ಮಾಹಿತಿ ನೀಡಿ, ವಾರ್ಷಿಕೋತ್ಸವದ ಸಿದ್ಧತೆಗಳಿಗಾಗಿ ರಚಿಸಿದ ವಿವಿಧ ಸಮಿತಿಗಳ ಮಾಹಿತಿ ನೀಡಿದರು.

ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ ಶೆಟ್ಟಿಯವರು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ತಿಳಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರೋನಕ್‌ ಜಯ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು ತಮ್ಮ ಸಮಿತಿಗಳ ಚಟುವಟಿಕೆಗಳ ಮಾಹಿತಿ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಮಾಧವ ಆರ್‌. ಶೆಟ್ಟಿ, ರಾಮಕೃಷ್ಣ ಶೆಟ್ಟಿ ಪದಾಧಿಕಾರಿಗಳಾದ ಸತೀಶ್‌ ಶೆಟ್ಟಿ, ಶ್ರೀನಿವಾಸ್‌ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ವಿವೇಕಾನಂದ ಶೆಟ್ಟಿ ಆವರ್ಸೆ, ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ವಿಶ್ವನಾಥ್‌ ಶೆಟ್ಟಿ, ಮೋಹನ್‌ ಶೆಟ್ಟಿ, ಗಣೇಶ್‌ ಹೆಗ್ಡೆ, ಪ್ರಶಾಂತ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಶಮ್ಮಿ ಎ. ಹೆಗ್ಡೆ, ಸುಚಿತ್ರಾ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಂಪಾ ಎಸ್‌. ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಬಿ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ  ಗಣೇಶ್‌ ಪೂಂಜಾ,  ದಕ್ಷಿಣ ಪ್ರಾದೇಶಿಕ ಸಮಿತಿಯ ಸುಭಾಷ್‌ ಶೆಟ್ಟಿ, ಸುಧಾಕರ ಶೆಟ್ಟಿ, ಜಗದೀಶ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರೋನಕ್‌ ಶೆಟ್ಟಿ, ಪ್ರಫುಲ್‌ ಶೆಟ್ಟಿ  ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ವಾರ್ಷಿಕೋತ್ಸವದ ಸಿದ್ಧತೆಗಳ ಬಗ್ಗೆ, ಸ್ಮರಣ ಸಂಚಿಕೆಯಜಾಹೀರಾತು ಸಂಗ್ರಹದ ಬಗ್ಗೆ ಹಾಗೂ ಬಂಟರ ಭವನದ ಉದ್ಘಾಟನೆಯ ಬಗ್ಗೆಯೂ ಚರ್ಚಿಸಲಾಯಿತು. 

ಚಿತ್ರ-ವರದಿ:ಕಿರಣ್‌ ಬಿ.ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next