Advertisement
ಅದೇ ಸಂದರ್ಭ ಅಲ್ಲಿದ್ದ ಉಡುಪಿ, ದಕ್ಷಿಣ ಕನ್ನಡ ಮೂಲದ ಅಯ್ಯಪ್ಪ ಭಕ್ತರು ಅಣ್ಣಾಮಲೈ ಅವರನ್ನು ಗುರುತುಹಿಡಿದು ಅವರೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸಿದರು. ತಮಿಳುನಾಡಿನಿಂದ ಬಂದ ಭಕ್ತರೂ ಅಣ್ಣಾಮಲೈ ಹೆಸರು ಕೇಳಿದಾಗ ಅವರೂ ಸೆಲ್ಫಿ ತೆಗೆಸಿಕೊಂಡರು.
Related Articles
ಹಲವು ಸಮಯಗಳ ಹಿಂದೆಯೇ ಶಬರಿಮಲೆಗೆ ತೆರಳುವ ಸಂಕಲ್ಪ ಮಾಡಿದ್ದೆ. ಆದರೆ ಕೆಲಸದ ಒತ್ತಡದಿಂದ ಇದು ಸಾಧ್ಯವಾಗಿರಲಿಲ್ಲ. ಈಗ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಅದು ಸ್ವೀಕೃತವಾಗಲು ಒಂದೆರಡು ವಾರ ಬೇಕು. ಈಗ ದೇವರ ದರ್ಶನ ಪಡೆಯಲು ಅವಕಾಶ ಸಿಕ್ಕಿದೆ. ಈ ಮೂಲಕ ಹಲವು ವರ್ಷಗಳ ಕನಸು ನನಸಾಗಿದೆ. ಅಯ್ಯಪ್ಪನ ದರ್ಶನದಿಂದ ಹೊಸ ಚೈತನ್ಯ ಸಿಕ್ಕಿದಂತಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
Advertisement
ಮುಂದೇನು ? ಮತ್ತೆ ತಿಳಿಸುವೆ“ಶಬರಿಮಲೆಯಲ್ಲಿ ಉಡುಪಿಯ ಸ್ನೇಹಿತರು ಸಿಕ್ಕಿರುವುದು ಖುಷಿ ಕೊಟ್ಟಿದೆ. ಸಾಮಾನ್ಯ ವ್ಯಕ್ತಿಯಾಗಿ ಉಡುಪಿಗೆ ಬರಬೇಕೆಂದಿದ್ದೇನೆ. ಈಗ ನಿವೃತ್ತಿಯನ್ನು ಎಂಜಾಯ್ ಮಾಡುತ್ತಿದ್ದೇನೆ. ಮುಂದೇನು ಎನ್ನುವ ಬಗ್ಗೆ ಈವರೆಗೆ ಯೋಚನೆ ಮಾಡಿಲ್ಲ. ಮುಂದೆ ಈ ಬಗ್ಗೆ ತಿಳಿಸುತ್ತೇನೆ’ ಅಣ್ಣಾಮಲೈ ಮಾಧ್ಯಮ ಮಿತ್ರರ ಬಳಿ ಹೇಳಿದರು.