Advertisement

ಅಪಾಯದ ಅಂಚಿನಲ್ಲಿ ಅಣ್ಣಾಲು ಸೇತುವೆ

01:00 AM Dec 29, 2018 | Team Udayavani |

ಹಿರಿಯಡಕ: ಪೆರ್ಡೂರಿನಿಂದ ಹರಿಖಂಡಿಗೆ ಹೋಗುವ ಮಾರ್ಗದಲ್ಲಿ ಸಿಗುವ ಅಣ್ಣಾಲು ಸೇತುವೆಗೆ ತಡೆಗೋಡೆಯಿಲ್ಲದೆ ಅಪಾಯದ ಅಂಚಿನಲ್ಲಿದೆ. 

Advertisement

ಸೇತುವೆ ಸಂಪರ್ಕಿಸುವ ಮೊದಲು ಅಪಾಯಕಾರಿ ತಿರುವು ಇರುವುದರಿಂದ ತಡೆಗೋಡೆಯಿಲ್ಲದ ಪರಿಣಾಮ ಅಪಘಾತಗಳಾಗಿ ಪ್ರಾಣಹಾನಿ  ಸಂಭವಿಸಿವೆ.
 
ಹರಿಖಂಡಿಗೆಯಿಂದ ಪೆರ್ಡೂರಿಗೆ ಬರುವ ಮಾರ್ಗದ ಸೇತುವೆ ಆರಂಭದ ಪ್ರದೇಶ ತೀರಾ ತಿರುವಿನಿಂದ ಕೂಡಿದ್ದು  ಕುಂಟಲ್‌ಕಟ್ಟೆ ಮಾರ್ಗ ಹಾಗೂ ಹರಿಖಂಡಿಗೆ ಮಾರ್ಗದಿಂದ ಬಸ್‌ಗಳು ಸಂದಿಸುವ ಸ್ಥಳವಾಗಿದೆ. ಎರಡೂ ಬದಿಗಳಿಂದ ಒಮ್ಮೆಲೆ ವಾಹನ ಬಂದಾಗ ಕೆಲವೊಮ್ಮೆ ನಿಯಂತ್ರಣ ತಪ್ಪಿ ತಡೆಗೋಡೆಯಿಲ್ಲದೆ ನದಿಗೆ ಬಿದ್ದಿವೆ. ವಾಹನಗಳಷ್ಟೆ ಅಲ್ಲದೆ ಈ ಸೇತುವೆಯ ಮೇಲೆ ನಡೆದುಕೊಂಡು ಹೋಗುವವರು ಕೂಡ ಭಯದ ನಡುವೆ ಸಾಗಬೇಕಾಗಿದೆ.ಅದರಲ್ಲೂ ಚಿಕ್ಕಮಕ್ಕಳಿಗಂತೂ ಅಪಾಯ ತಪ್ಪಿದ್ದಲ್ಲ.

ತಡೆಗೋಡೆಯಿಲ್ಲದೆ ಸಾವು 
ಇತ್ತೀಚೆಗೆ ಇದೇ ಸೇತುವೆಯ ತಿರುವಿನ ಬಳಿ ನಿಯಂತ್ರಣ ತಪ್ಪಿ  ತಡೆಗೋಡೆಯಿಲ್ಲದ ಪರಿಣಾಮ ನದಿಗೆ ಬಿದ್ದು ಪ್ರಾಣಕಳೆದುಕೊಂಡಿದ್ದಾರೆ.

ಎಚ್ಚೆತ್ತುಕೊಳ್ಳದ ಇಲಾಖೆ
ನೂರಾರು ವಾಹನ, ಶಾಲಾ ವಿದ್ಯಾರ್ಥಿ ಗಳು, ಪಾದಚಾರಿಗಳು ಸಂಚರಿಸುತ್ತಿದ್ದು ತಡೆಗೋಡೆಯಿಲ್ಲದೆ ಅಪಾಯದ ಅಂಚಿನಲ್ಲಿದ್ದರೂ ಇಲಾಖೆ ಅಥವಾ ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. 

 ಇಲಾಖೆಗೆ ಮನವಿ
ಈಗಾಗಲೇ ಈ ಭಾಗದಲ್ಲಿರುವವರಿಂದ ದೂರು ಬಂದಿದ್ದು ಈ ಬಗ್ಗೆ ಡಿ.28ರಂದು ನಡೆಯುವ ಪಂಚಾಯತ್‌  ಸಭೆಯಲ್ಲಿ ಚರ್ಚಿಸಿ ಅದಷ್ಟು ಶೀಘ್ರ  ತಡೆಗೋಡೆ ನಿರ್ಮಿಸುವಂತೆ ಸಂಬಂಧ‌ಪಟ್ಟ ಇಲಾಖೆಗೆ  ಮನವಿ ಸಲ್ಲಿಸಲಾಗುವುದು.
– ಸದಾಶಿವ ಪೂಜಾರಿ,
ಅಧ್ಯಕ್ಷರು, ಗ್ರಾ.ಪಂ. ಬೈರಂಪಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next