Advertisement

ಅನ್ನಭಾಗ್ಯ ಅಕ್ಕಿ ಐದಲ್ಲ, ಇನ್ನು ಏಳು ಕೆಜಿ

07:41 AM Mar 31, 2017 | |

ಬೆಂಗಳೂರು: ಕರ್ನಾಟಕವನ್ನು “ಹಸಿವು ಮುಕ್ತ’ ರಾಜ್ಯವನ್ನಾಗಿ ಮಾಡಬೇಕೆಂದು ಸಂಕಲ್ಪ ಮಾಡಿರುವ ರಾಜ್ಯ ಸರಕಾರ ಕಡು ಬಡವರಿಗೆ ಉಚಿತವಾಗಿ ಅಕ್ಕಿ ನೀಡುವ ಪ್ರಮಾಣವನ್ನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಹೊಸ ಆದೇಶದಂತೆ ರಾಜ್ಯಾದ್ಯಂತ
1 ಕೋಟಿ 8 ಲಕ್ಷ ಬಿಪಿಎಲ್‌ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಕುಟುಂಬದ ಪ್ರತಿ ವ್ಯಕ್ತಿಗೆ ಐದು ಕೆಜಿ ಬದಲು ಏಳು ಕೆಜಿ ಅಕ್ಕಿಯನ್ನು ಶನಿವಾರದಿಂದ ವಿತರಣೆ ಮಾಡಲಾಗುತ್ತದೆ. ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಧಾನಿಯಲ್ಲಿ ಗುರುವಾರ ಚಾಲನೆ ನೀಡಿದರು.

Advertisement

ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ ಪಡಿತರದಾರರಿಗೆ 2 ಕೆಜಿ ಅಕ್ಕಿ ಹೆಚ್ಚಳ ನೀಡುವ ಯೋಜನೆ ಶನಿವಾರದಿಂದ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಘೋಷಿಸಿದರು. ಅಷ್ಟೇ ಅಲ್ಲ, ಅಕ್ಕಿ ಜತೆಗೆ ಫ‌ಲಾನುಭವಿಗಳಿಗೆ ಒಂದು ಕೆಜಿ ತೊಗರಿ
ಬೇಳೆ ಕೂಡ ನೀಡಲಾಗುತ್ತದೆ ಎಂದರು. “ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿ ನಾನು, ಅನ್ನಭಾಗ್ಯ ಯೋಜನೆ
ಘೋಷಣೆ ಮಾಡಿದ್ದೆ, ನಂತರ ಮೂರು ಜನ ಇರುವ ಕುಟುಂಬಕ್ಕೆ ಮೂವತ್ತು ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಯಿತು. ಅದನ್ನು ಬದಲಾಯಿಸಿ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ನೀಡಲು ನಿರ್ಧರಿಸಲಾಗಿತ್ತು. ಈ ವರ್ಷದ ಬಜೆಟ್‌ನಲ್ಲಿ 2 ಕೆಜಿ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದೆ. ಅದರಂತೆ ಪ್ರತಿಯೊಬ್ಬರಿಗೂ ಇನ್ನು ಮುಂದೆ 7 ಕೆಜಿ ಅಕ್ಕಿ ನೀಡಲಾಗುತ್ತದೆ. ರಾಜ್ಯದಲ್ಲಿ 1.08
ಕೋಟಿ ಬಿಪಿಎಲ್‌ ಕಾರ್ಡ್‌ ಹೊಂದಿರುವ ಸುಮಾರು 4 ಕೋಟಿ ಜನರು ಯೋಜನೆಯ ಫ‌ಲ ಪಡೆಯುತ್ತಿದ್ದಾರೆ. ತಮಿಳುಧಿನಾಡು, ಕೇರಳ, ತೆಲಂಗಾಣಕ್ಕಿಂತ ಕರ್ನಾಟಕದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದೆ. ಅನ್ನಭಾಗ್ಯ ಯೋಜನೆಯಿಂದ ಜನರು ಹಸಿವಿನಿಂದ ಮುಕ್ತರಾಗಿದ್ದಾರೆ. ಜನರು ಗುಳೆ ಹೋಗುವುದು ಕಡಿಮೆಯಾಗಿದೆ’ ಎಂದು ಅವರು ಹೇಳಿದರು.

ನಮ್ಮ ಸಾಧನೆಯೇ ನಮಗೆ ಮಾದರಿ: “ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಈ ಯೋಜನೆಯಿಂದ
ಜನರು ಸೋಮಾರಿಗಳಾಗುತ್ತಾರೆ ಎಂದು ದೂರಿದ್ದಾರೆ. ಆದರೆ, ಹಸಿವು ಮುಕ್ತ ಕರ್ನಾಟಕ ನಮ್ಮ ಗುರಿ. ಬಿಜೆಪಿಯವರು ಎಲ್ಲದಕ್ಕೂ ಗುಜರಾತ್‌ ಮಾದರಿ, ಉತ್ತರ ಪ್ರದೇಶ ಮಾದರಿ ಅಂತ ಹೇಳುತ್ತಾರೆ. ನಮಗೆ ಬೇರೆ ಯಾವ ಮಾದರಿಯೂ ಬೇಕಿಲ್ಲ. ನಮ್ಮ ಸಾಧನೆಯೇ ನಮಗೆ ಮಾದರಿ. ನಾವು ಮಾಡಿರುವ ಸಾಧನೆಯನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ’ ಎಂದರು.

ಜಾಗೃತ ಸಮಿತಿ: ಅನ್ನಭಾಗ್ಯ ಯೋಜನೆಯಲ್ಲಿ ಅವ್ಯಧಿವಹಾರ ತಡೆಗಟ್ಟಲು ಪ್ರತಿ ಅಂಗಡಿಗೂ ಮೂರು ಜನರ ಜಾಗೃತ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಪಡಿತರ ಅಂಗಡಿ ವ್ಯವಹಾರಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಅಂಗಡಿಯವರು 
ಸರಿಯಾಗಿ ಪಡಿತರ ವಿತರಣೆ ಮಾಡದೇ, ಗೋಲ್‌  ಮಾಲ್‌ ಮಾಡಿದರೆ, ಸಮಿತಿಯ ಮೂವರೂ ಸದಸ್ಯರು ದೂರು ನೀಡಿದರೆ, ಅಂತಹ ಅಂಗಡಿಯ ಲೈಸೆನ್ಸ್‌ ರದ್ದು ಮಾಡುವುದಾಗಿ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.

ಇದಕ್ಕೂ ಮೊದಲು ಜಾಗೃತ ದಳದ ಕಾರ್ಯಕರ್ತರಿಗೆ ತರಬೇತಿ ನೀಡುವ ಕಾರ್ಯಾಕ್ರಮಕ್ಕೆ ಚಾಲನೆ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್‌ ಮಾತನಾಡಿ, ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಾಗಿ ಹೇಳುತ್ತಾರೆ. ನಮ್ಮ ಮುಖ್ಯಮಂತ್ರಿಗಳು ಹಸಿವು ಮುಕ್ತ ಕರ್ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಕಳೆದ ನಾಲ್ಕು ವರ್ಷಗಳ ಸರ್ಕಾರದ ಆಡಳಿತದಲ್ಲಿ ಯಾರ ವಿರುದ್ಧವೂ ಭ್ರಷ್ಟಾಚಾರ ಆರೋಪ ಕೇಳಿ ಬಂದಿಲ್ಲ. ಪ್ರಣಾಳಿಕೆಯಲ್ಲಿ ಮಾಡಿದ
ಘೋಷಣೆಗಳನ್ನು ಸಂಪೂರ್ಣವಾಗಿ ಜಾರಿಗೆ ತರುತ್ತಿರುವ ಸರ್ಕಾರ ನಮ್ಮದು ಎಂದು ಹೇಳಿದರು.

Advertisement

198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ 
ನಮ್ಮ ಸರ್ಕಾರದ ಬಜೆಟನ್ನು ಅಹಿಂದ ಬಜೆಟ್‌ ಎಂದು ವಿರೋಧಿಗಳು ಟೀಕಿಸುತ್ತಾರೆ. ಒಂದೂವರೆ ಲಕ್ಷ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವುದು, ಮಕ್ಕಳಿಗೆ ಹಾಲು ವಿತರಿಸುವುದು. ತಾಯಿ ಮಡಿಲು ಯೋಜನೆ ಎಲ್ಲ ವರ್ಗದವರಿಗೂ ಅನ್ವಯ ಆಗುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಬೆಂಗಳೂರಿನ 198 ವಾರ್ಡ್‌ಗಳಲ್ಲಿ
ಇಂದಿರಾ ಕ್ಯಾಂಟೀನ್‌ ತೆರೆಯಲು ಈಗಾಗಲೇ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಯೋಜನೆಗೆ ಇಂದಿರಾ ಕ್ಯಾಂಟೀನ್‌ ಎಂದು
ಹೆಸರಿಡುವಂತೆ ಶಾಸಕರಿಂದ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಯೋಜನೆಗೆ ಇಂದಿರಾ ಗಾಂಧಿ ಹೆಸರಿಡಲಾಗುವುದು ಎಂದು ಹೇಳಿದರು. 

ನಮ್ಮ ಸಾಧನೆಯೇ ನಮಗೆ ಮಾದರಿ
“ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಈ ಯೋಜನೆಯಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ದೂರಿದ್ದಾರೆ. ಆದರೆ, ಹಸಿವು ಮುಕ್ತ ಕರ್ನಾಟಕ ನಮ್ಮ ಗುರಿ. ಬಿಜೆಪಿಯವರು ಎಲ್ಲದಕ್ಕೂ ಗುಜರಾತ್‌ ಮಾದರಿ, ಉತ್ತರ ಪ್ರದೇಶ ಮಾದರಿ ಅಂತ ಹೇಳುತ್ತಾರೆ. ನಮಗೆ ಬೇರೆ ಯಾವ ಮಾದರಿಯೂ ಬೇಕಿಲ್ಲ. ನಮ್ಮ ಸಾಧನೆಯೇ ನಮಗೆ ಮಾದರಿ. ಅದನ್ನೇ 
ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ’ ಎಂದು ಸಿಎಂ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next