ಅಂಕೋಲಾ : ರಾ.ಹೆ 66 ಹನಿ ಬೀಚ್ ಕ್ರಾಸ್ ಶಟಗೇರಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ. ದಾಳಿಯ ಸಂದರ್ಭದಲ್ಲಿ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.
ಹಿಲ್ಲೂರು ಹೊಳೆಮಕ್ಕಿಯ ಏಸು ಶಿವು ಗೌಡ(48) ಬಂಧಿತ ಆರೋಪಿ. ಶಿರಗುಂಜಿ ಬಲಿಗದ್ದೆಯ ಯಂಕು ರೊಮು ಗೌಡ (45) ದಾಳಿ ಸಂದರ್ಭದಲ್ಲಿ ಪರಾರಿಯಾಗಿದ್ದಾನೆ.
ಸುಮಾರು 6500 ರೂಗಳ 132 ಗ್ರಾಂ ಗಾಂಜಾ ಮತ್ತು ಈ ಕೃತ್ಯಕ್ಕೆ ಬಳಿಸಿದ ಎರಡು ಬೈಕ್ ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜಾರವರ ಮಾರ್ಗದರ್ಶನದಲ್ಲಿ, ಪಿಎಸ್ ಐ ಮಹಾಂತೇಶ ಬಿ.ವಿ, ಪಿಎಸ್ ಐ ಪ್ರೇಮನಗೌಡ ಪಾಟೀಲ,ಸಿಬಂದಿಗಳಾದ ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕಟಬರ್, ನಾಗರಾಜ ಹೋತನಹಳ್ಳಿ, ಮನೋಜ ಡಿ, ಗುರುರಾಜ್ ನಾಯ್ಕ, ಸತೀಶ ಅಂಬಿಗ ಹಾಗೂ ಪುನೀತ್ ನಾಯ್ಕ ಪಾಲ್ಗೊಂಡಿದ್ದರು.