ಅಂಕೋಲಾ : ತಾಲೂಕಿನಲ್ಲಿ ಸೋಮವಾರ ಸಂಜೆ ಬಿಸಿದ ಭಾರಿ ಬಿರುಗಾಳಿ ಹಾಗೂ ಗುಡುಗು ಸಹಿತ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಬಿರುಗಾಳಿಗೆ ಸಿಲುಕಿ ಅನೇಕ ಕಡೆ ಮರಗಳು ಧರೆಗೆ ಉರುಳಿದ್ದು ಕೆಲವು ಮನೆಗಳಿಗೂ ಹಾನಿಯುಂಟಾದ ಬಗ್ಗೆ ವರದಿಯಾಗಿದೆ. ಸಂಜೆ 7ರ ಸುಮಾರಿಗೆ ಏಕಾಏಕಿ ಬಂದ ಭಾರಿ ಬಿರುಗಾಳಿಯಿಂದ ಪಟ್ಟಣದಲ್ಲಿದ್ದ ಜನ ಹತ್ತಿರದಲ್ಲಿದ್ದ ಅಂಗಡಿಯೊಳಗೆ ಹೊಕ್ಕಿ ರಕ್ಷಣೆ ಪಡೆದಿದ್ದಾರೆ. ಎಂದೂ ಕಂಡರಿಯದ ಬಿರುಗಾಳಿಯಿಂದ ಪಟ್ಟಣದ ಮಳಿಗೆಯೊಂದರ ಮೇಲಿದ್ದ ಬೃಹತ್ ಗಾತ್ರದ ನೀರಿನ ಟ್ಯಾಂಕ್ ರಸ್ತೆಗೆ ಊರುಳಿದೆ. ಅದೃಷ್ಟವಶಾತ್ ಕೆಲವು ಪಾದಚಾರಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಅನೇಕ ಮನೆಗಳ ಮೇಲ್ಛಾವಣಿ ಹಾರಿ ಗೊಡೆ ಕುಸಿತಗೊಂಡಿದೆ. ಇಡೀ ಅಂಕೋಲಾ ತಾಲೂಕಿನ ಜನ ಜೀವನವೇ ಅಸ್ತವ್ಯಸ್ತವಾಗಿದ್ದು ಹಾನಿ ವಿವರ ತಿಳಿದು ಬರಬೇಕಿದೆ.