Advertisement

ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ

03:46 PM Feb 10, 2020 | Suhan S |

ಮಾಲೂರು: ಇತಿಹಾಸ ಪ್ರಸಿದ್ಧ ಸುದ್ದಗುಂಟೆ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಭಾನುವಾರ ಅದ್ಧೂರಿಯಾಗಿ ರಥೋತ್ಸವ ಜರುಗಿತು. ಮಾಲೂರು-ಕೋಲಾರ ಮುಖ್ಯ ರಸ್ತೆಯ ಸುದ್ದಗುಂಟೆ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಫೆ.2ರಿಂದ ಫೆ.14ರವರೆಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದ್ದು, ಹುಣ್ಣಿಮೆ ಪ್ರಯುಕ್ತ ಭಾನುವಾರ ಬೆಳ್ಳಿ ಪಲ್ಲಕ್ಕಿ ರಥದಲ್ಲಿ ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ರಥೋತ್ಸವವನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು.

Advertisement

ದೇವಾಲಯದ ಆರ್ಚಕ ಆಂಜಿನಪ್ಪ ಹಾಗೂ ಪ್ರಧಾನ ಆರ್ಚಕ ನಾಗರಾಜ್‌ ಅಯ್ಯಂಗಾರ್‌ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ಪುರಾತನ ಕಾಲದಿಂದಲೂ ನೆಲೆನಿಂತಿರುವ ಸುದ್ದಗುಂಟೆ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಸೀತಾರಾಮ, ಲಕ್ಷ್ಮಣ, ಭರತ, ಶತ್ರುಜ್ಞ, ಹನುಮಂತ ಸಮೇತ ಕೋದಂಡರಾಮ ಸ್ವಾಮಿಗೆ ಫೆ.4ರಿಂದ ವಿವಿಧ ಪೂಜಾ ಕೈಂಕರ್ಯ, ಉತ್ಸವ ಹಾಗೂ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲಾಗಿತ್ತು. 4ರ ದಶಮಿಯಂದು ಧ್ವಜಾರೋಹಣ  ದೊಂದಿಗೆ ಧಾರ್ಮಿಕ ಕೈಂಕರ್ಯಗಳಿಗೆ ಚಾಲನೆ ನೀಡಲಾಯಿತು. 5ರ ಏಕಾದಶಿಯಂದು ಶೇಷವಾಹನ ಉತ್ಸವ, 6ರ ದ್ವಾದಶಿಯಂದು ಹನುಮೋತ್ಸವ, 7ರಂದು ತ್ರಯೋದಶಿಯಂದು ಕಲ್ಯಾಣೋತ್ಸವ, 8ರ ಚತುರ್ದಶಿಯಂದು ಗರಡೋತ್ಸವ, 9ರಂದು ಹುಣ್ಣಿಮೆ ಪ್ರಯುಕ್ತ ರಾಜಬೀದಿಗಳಲ್ಲಿ ಆಂಜನೇಯ ಸ್ವಾಮಿ ರಥೋತ್ಸವವನ್ನು ಅಲಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಇಟ್ಟು ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next