Advertisement
ತಿರುಪತಿ ತಿರುಮಲ ದೇವಸ್ಥಾನ ಸಮಿತಿಯವರು ಅಂಜನಾದ್ರಿಯ ಜನ್ಮಸ್ಥಳ ತಿರುಮಲ ಎಂದು ಪ್ರಸ್ತಾಪಿಸುವ ಸಂದರ್ಭದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದ ಮಧ್ಯೆ ಕಿಷ್ಕಿಂದಾ ಅಂಜನಾದ್ರಿ ಯಲ್ಲಿ ಅಳವಡಿಸಿರುವ ಮಾಹಿತಿ ನಾಮಫಲಕಗಳು ತಪ್ಪಿನಿಂದ ಕೂಡಿವೆ .
Related Articles
Advertisement
ಇದನ್ನೂ ಓದಿ:ಸಿಎಂ ಬೊಮ್ಮಾಯಿಗೆ ನಾಯಕತ್ವ ಸತ್ವಪರೀಕ್ಷೆ
ಈಗಾಗಲೇ ಉದಯವಾಣಿ ವೆಬ್ ನ್ಯೂಸ್ ಮತ್ತು ಉದಯವಾಣಿ ಪತ್ರಿಕೆಯಲ್ಲಿ ಇತಿಹಾಸ ತಿರುಚಿ ಅಂಜನಾದ್ರಿ ಬಳಿ ನಾಮಫಲಕ ಹಾಕಲಾಗಿದೆ ಎಂದು ವಿವರವಾಗಿ ವರದಿ ಪ್ರಕಟಗೊಂಡಿತ್ತು . ಆದರೂ ಎಚ್ಚೆತ್ತುಕೊಳ್ಳದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಾಮಫಲಕ ಬರೆಯುವ ಏಜೆನ್ಸಿಯವರಿಗೆ ನೋಟಿಸ್ ನೀಡಿ ಕೈತೊಳೆದುಕೊಂಡಿದ್ದಾರೆ .ನಾಮಫಲಕಗಳ ಬದಲಾವಣೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹವಾಮಾನ ಅಧಿಕಾರಿಗಳು ಆನೆಗೊಂದಿ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುವ ಜನರ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ .
ಹೋರಾಟದ ಎಚ್ಚರಿಕೆ :ನಗರದ ಆನೆಗೊಂದಿ ಭಾಗದಲ್ಲಿ ಕಿಷ್ಕಿಂದಾ ಪಂಪಾಸರೋವರ ಋಷ್ಯ ಮುಖ ಪರ್ವತ ಸೇರಿದಂತೆ ಐತಿಹಾಸಿಕ ಸ್ಮಾರಕಗಳು ಇದ್ದರೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದ ಫಲವಾಗಿ ಇತಿಹಾಸವನ್ನ ತಿರುಚಿದ ಮಾಹಿತಿಯುಳ್ಳ ನಾಮಫಲಕಗಳನ್ನು ಅಳವಡಿಸಲಾಗಿದೆ .ಇದನ್ನು ತೆರವುಗೊಳಿಸಿ ಸ್ಥಳೀಯ ಇತಿಹಾಸಕಾರರು ಮತ್ತು ವಿದ್ವಾಂಸರ ಬಳಿ ಚರ್ಚಿಸಿ ನಾಮಫಲಕದ ಮಾಹಿತಿ ಬರೆಸುವಂತೆ ಉದಯವಾಣಿ ವೆಬ್ ನ್ಯೂಸ್ ಉದಯವಾಣಿ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿದ್ದರೂ ಎಚ್ಚೆತ್ತುಕೊಳ್ಳದ ಹವಾಮಾ ಅಧಿಕಾರಿಗಳು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಕೈತೊಳೆದುಕೊಂಡಿದ್ದಾರೆ .
ಕೂಡಲೇ ನಾಮಫಲಕಗಳನ್ನು ಬದಲಾವಣೆ ಮಾಡದಿದ್ದರೆ ಈ ಅವಮಾನದ ವಿರುದ್ಧ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಸ್ಥಳೀಯ ಅಭಿವೃದ್ಧಿ ಹೋರಾಟ ಮತ್ತು ದಲಿತ ಸಂಘಟನೆಗಳ ಮುಖಂಡರಾದ ನಾಗೇಶ್ ಕೋಡಿ ಹವಾಮಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ .