ಮುಂಬಯಿ: ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ “ಸರಳ ಪಿಂಚಣಿ ವರ್ಷಾಶನ’ ಯೋಜನೆಯನ್ನು ಪರಿಚಯಿಸಿದೆ. 2021 ರ ಜು. 1ರಿಂದ ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ಸಿಂಗಲ್ ಪ್ರೀಮಿಯಂ, ಇಂಡಿವಿಜುವಲ್ ಇಮ್ಮಿಡಿಯೆಟ್ ಅನ್ಯುಟಿ ಪ್ಲ್ಯಾನ್ ಯೋಜನೆ ಇದಾಗಿದೆ.
ವಿಮೆಯ ಮಾರ್ಗಸೂಚಿಗಳ ಪ್ರಕಾರ ಇದು ಪ್ರಮಾಣಿತ ತತ್‌ಕ್ಷಣದ ವರ್ಷಾಶನ ಯೋಜನೆಯಾಗಿದೆ. ರೆಗ್ಯುಲೇಟರಿ ಆ್ಯಂಡ್ ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್‌ಡಿಎಐ) ಇದನ್ನು ನೀಡಲಿದ್ದು, ಎಲ್ಲ ಜೀವ ವಿಮಾದಾರರಿಗೆ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗಲಿವೆ. ವರ್ಷಾಶನಕ್ಕೆ ಪಾಲಿಸಿದಾರರಿಗೆ ಲಭ್ಯವಿರುವ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಲು ಅವಕಾಶವಿದೆ. ಒಂದು ದೊಡ್ಡ ಮೊತ್ತವನ್ನು ಪಾವತಿಸುವ ಆಯ್ಕೆಗಳನ್ನು ನೀಡಲಾಗಿದೆ.
ಆಯ್ಕೆ 1ರಲ್ಲಿ ಲೈಫ್ ಅನ್ಯುಟಿ ವಿದ್ ರಿಟರ್ನ್ ಆಫ್ 100 ಪರ್ಸೆಂಟ್ ಪರ್ಚೆಸ್ ಪ್ರೈಸ್ ಹಾಗೂ ಆಯ್ಕೆ 2ರಲ್ಲಿ ಜಾಯಿಂಟ್ ಲೈಫ್ ಲಾಸ್ಟ್ ಸರ್ವವೈವರ್ ಅನ್ಯುಟಿ ವಿದ್ ರಿಟರ್ನ್ ಆಫ್ 100 ಪರ್ಸೆಂಟ್ ಆಫ್ ಪರ್ಚೆಸ್ ಪ್ರೈಸ್ ಆನ್ ಡೆಥ್ ಆಫ್ ಲಾಸ್ಟ್ ಸರ್ವವೈವರ್ ಅನ್ನು ನೀಡಲಾಗಿದೆ. ಈ ಯೋಜನೆಯನ್ನು ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್ ಮೂಲಕ ಮೂಲಕ ನೇರವಾಗಿ ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಿಡಿಡಿ.lಜಿcಜಿnಛಜಿಚ.ಜಿn. ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಕನಿಷ್ಠ ವರ್ಷಾಶನ 12,000 ರೂ. ಗಳೊಂದಿಗೆ ಕನಿಷ್ಠ ಖರೀದಿ ಬೆಲೆಯಾಗಿದ್ದು, ವರ್ಷಾಶನ ಮೋಡ್, ಆಯ್ಕೆ ಮತ್ತು
ವಾರ್ಷಿಕ ವಯಸ್ಸನ್ನು ಅವಲಂಬಿಸಿರುತ್ತದೆ. ಗರಿಷ್ಠ ಖರೀದಿ ಬೆಲೆಯಲ್ಲಿ ಯಾವುದೇ ಸೀಲಿಂಗ್ ಇಲ್ಲ. ವರ್ಷಾಶನದ ವಿಧಾನಗಳಾಗಿ ವಾರ್ಷಿಕ, ಅರ್ಧ ವಾರ್ಷಿಕ, ತ್ತೈಮಾಸಿಕ ಮತ್ತು ಮಾಸಿಕ ಲಭ್ಯವಿದೆ. ಇದಕ್ಕಾಗಿ ಪ್ರೋತ್ಸಾಹಕ 5,00,000 ರೂ. ಗಳಿಗಿಂತ ಹೆಚ್ಚಿನ ಖರೀದಿ ಬೆಲೆ ಹೆಚ್ಚಳದ ಮೂಲಕವೂ ಲಭ್ಯವಿದೆ. ಈ ಯೋಜನೆ 40 ವರ್ಷಗಳಿಂದ 80 ವರ್ಷ ವಯಸ್ಸಿನವರಿಗೆ ಲಭ್ಯವಿದೆ. ಆರು ತಿಂಗಳ ಬಳಿಕ ಯಾವುದೇ ಸಮಯದಲ್ಲಿ ಸಾಲ ಲಭ್ಯವಿರುತ್ತದೆ.